ಜಲಪಾತ ಬಳಿ ಸೆಲ್ಫಿ ಪೋಟೋ ಹುಚ್ಚಾಟ : ಪ್ರವಾಸಿಗರಿಗೆ ಸರ್ಕಾದಿಂದ ಖಡಕ್ ಎಚ್ಚರಿಕೆ

Most read

ರಾಜ್ಯಾದ್ಯಂತ ಮಳೆಯಿಂದಾಗಿ ನದಿ, ಜಲಪಾತಗಳು ತುಂಬಿ ಹರಿಯುತ್ತಿವೆ. ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆಗಳು ಈ ಸ್ಥಳಗಳಿಗೆ ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯ ಜಲಪಾತಗಳಲ್ಲಿ ಪ್ರವಾಸಿಗರಿಗೆ ಪ್ರವೇಶವನ್ನು ನಿಷೇಧಿಸಿದೆ.

ಇತ್ತೀಚೆಗೆ ಜನರಿಗೆ ಸೋಷಿಯಲ್ ಮೀಡಿಯಾ ಗೀಳು ಹೆಚ್ಚಾಗಿದ್ದು, ಇನ್ಸ್ಟಾಗ್ರಾಂ ರೀಲ್ಸ್ ನಲ್ಲಿ ಭೋರ್ಗರೆಯುವ ನೀರಿನ ಮಧ್ಯೆ ನಿಂತು ಫೋಟೋ, ವಿಡಿಯೊ ತೆಗೆಯುವ ಹುಚ್ಚಾಟದಲ್ಲಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಹಾಗಾಗಿ ರಾಜ್ಯದ ಹಲವು ಜಲಪಾತಗಳಲ್ಲಿ ಪ್ರವಾಸಿಗರನ್ನು ನಿಷೇಧ ಹಾಗೂ ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಿದ್ದಾರೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೊಸಗದ್ದೆ ಬಳಿ ದಬ್ಬೆ ಜಲಪಾತ, ಆಗುಂಬೆಯ ಹಿಡ್ಲುಮನೆ, ಬರ್ಕಾಣ ಮತ್ತು ಒನಕೆ ಅಬ್ಬೆ, ಆಗುಂಬೆಯ ನಿಡಿಗೋಡು ಗ್ರಾಮದ ಕುಂಚಿಕಲ್ ಜಲಪಾತ ಮತ್ತು ಜೋಗಿ ಗುಂಡಿ ಜಲಪಾತಗಳಲ್ಲಿ ಅರಣ್ಯ ಇಲಾಖೆ ಪ್ರವಾಸಿಗರಿಕೆ ನೀರಿಗಿಳಿಯದಂತೆ ಎಚ್ಚರಿಕೆ ನೀಡಿದೆ.

ಕಾರ್ಕಳದ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ ಬಾಬು ಜುಲೈ1 ರಂದು ಆದೇಶ ಹೊರಡಿಸಿದ್ದು, ಭಾರೀ ಮಳೆಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಅರಣ್ಯದೊಳಗಿನ ಜಲಪಾತಗಳು ಮತ್ತು ಇತರ ಪ್ರವಾಸಿ ಸ್ಥಳಗಳಿಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದಿದ್ದಾರೆ.

ಜಲಪಾತಗಳಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುವ ಹೆಚ್ಚಿನ ಅವಕಾಶವಿದೆ. ಮುಂಜಾಗ್ರತಾ ಕ್ರಮವಾಗಿ ಕುದುರೆಮುಖ, ಸೋಮೇಶ್ವರ, ಆಗುಂಬೆ, ಸಿದ್ದಾಪುರ, ಕೊಲ್ಲೂರು ಕೆರೆಕಟ್ಟೆ ಮತ್ತು ಕಾರ್ಕಳ ವನ್ಯಜೀವಿ ಉಪವಿಭಾಗಗಳ ಬೆಳ್ತಂಗಡಿ, ಅರಸಿನಗುಂಡಿ, ಕೂಡ್ಲು, ಬಾರ್ಕಳ, ಹಿಡ್ಲುಮನೆ, ವನಕಬ್ಬಿ ಜಲಪಾತಗಳ ಬಂಡಾಜೆ ಜಲಪಾತಗಳಿಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿದ್ದೇವೆ ಎಂದು ಹೇಳಿದರು.

ಬೆಳ್ತಂಗಡಿಯ ಐತಿಹಾಸಿಕ ಸ್ಥಳವಾಗಿರುವ ನರಸಿಂಹಗಡ-ಗಡಾಯಿಕಲ್ಲು ಪ್ರದೇಶಕ್ಕೂ ಪ್ರವಾಸಿಗರ ಪ್ರವೇಶವನ್ನು ಇಲಾಖೆ ನಿರ್ಬಂಧಿಸಿದೆ. ನಾವು ಈ ಸ್ಥಳಗಳಲ್ಲಿ ಪ್ರವಾಸಿಗರ ಪ್ರವೇಶವನ್ನು ತಡೆಯುವ ಎಚ್ಚರಿಕೆ ಫಲಕಗಳನ್ನು ಹಾಕಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೆಬ್ರಿ ತಾಲೂಕಿನ ಕೂಡ್ಲು ತೀರ್ಥ, ಕೊಲ್ಲೂರಿನ ಹಿಡ್ಲುಮನೆ ಮತ್ತು ಕೊಲ್ಲೂರು ಸಮೀಪದ ಬೆಲ್ಕಲ್ ತೀರ್ಥ ಮಂಗಳೂರು ಜಿಲ್ಲೆಯ ಮೂರು ಪ್ರಮುಖ ಜಲಪಾತಗಳಾಗಿದ್ದು, ಇವುಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಇತರ ಸಣ್ಣ ಜಲಪಾತಗಳಿಗೂ ಪ್ರವೇಶವನ್ನು ನಿಷೇಧಿಸಲಾಗಿದೆ.

More articles

Latest article