ಸುಪ್ರೀಂ ಕೋರ್ಟ್ ಆದೇಶದ ಅನುಸಾರವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ ಚುನಾವಣಾ ಬಾಂಡ್‌ಗಳ ಸಂಪೂರ್ಣ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪಂಚ ಸದಸ್ಯ ಸಾಂವಿಧಾನಿಕ ಪೀಠ, ಚುನಾವಣಾ ಬಾಂಡ್ ಖರೀದಿದಾರರು ಮತ್ತು ಅದನ್ನು ಸ್ವೀಕರಿಸಿದ ರಾಜಕೀಯ ಪಕ್ಷಗಳ ಸಂಬಂಧ ಬಹಿರಂಗಪಡಿಸುವ ವಿಶಿಷ್ಟ ಬಾಂಡ್ ನಂಬರ್ ಗಳ ಸಮಗ್ರ ಮಾಹಿತಿ ಕೂಡ ಹೊಂದಿರಬೇಕು ಎಂದು ಕಳೆದ ವಾರ ಆದೇಶ ನೀಡಿತ್ತು.
ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದ ಆಯ್ದ ಮಾಹಿತಿ ನೀಡುವುದನ್ನು ನಿಲ್ಲಿಸಿ ಸಂಪೂರ್ಣ ಮಾಹಿತಿಯನ್ನು ಮಾರ್ಚ್ 21ರೊಳಗೆ ಬಹಿರಂಗಪಡಿಸುವಂತೆ ಎಸ್.ಬಿ.ಐ.ಗೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ತಾಕೀತು ಮಾಡಿತ್ತು. ಜೊತೆಗೆ ಚುನಾವಣಾ ಬಾಂಡ್ ಸಂಬಂಧಿಸಿದ ಎಲ್ಲಾ ವಿವರಗಳನ್ನು ಬಹಿರಂಗಗೊಳಿಸಿದ್ದೇವೆ ಯಾವುದನ್ನು ಮರೆಮಾಚಿಲ್ಲ ಎಂದು ಅಫಿಡೇವಿಟ್ ಸಲ್ಲಿಸಲು ಎಸ್ ಬಿ ಐ ಅಧ್ಯಕ್ಷರಿಗೆ ಸೂಚಿಸಿತ್ತು.
ಸುಪ್ರೀಂಕೋರ್ಟ್ ತಾಕೀತಿನ ನಂತರ ಎಸ್ ಬಿ ಐ ಎಲ್ಲಾ ದಾಖಲಾತಿಗಳನ್ನು ಚುನಾವಣೆ ಆಯೋಗಕ್ಕೆ ಸಲ್ಲಿಸಿದ್ದಾರೆ.