ನಂಗಲಿ ಪೊಲೀಸರ ಕಾರ್ಯಾಚರಣೆ; 22 ಕೆ.ಜಿ ಶ್ರೀಗಂಧದ ಮರದ ತುಂಡು ಕಳವು ಮಾಡಿದ್ದ ಆರೋಪಿ ಬಂಧನ

ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ನಂಗಲಿ ಪೊಲೀಸರು ನೆರೆಯ ಆಂದ್ರ ಪ್ರದೇಶದ ರಾಮಕುಪ್ಪಂನ ರಾಜುಪೇಟೆ ನಿವಾಸಿ ರಾಜೇಶ್ ಎಂಬಾತನನ್ನು ಬಂಧಿಸಿ ಆತನಿಂದ ಸುಮಾರು 22 ಕೆಜಿ ತೂಕದ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಪಿಚ್ಚಗುಂಟ್ಲಹಳ್ಳಿ ಗ್ರಾಮದ ರಮೇಶ್ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಶ್ರೀಗಂಧದ ಮರಗಳನ್ನು  ಕಳುವು ಮಾಡಿಕೊಂಡು ಹೋಗಿದ್ದಾರೆಂದು ರಮೇಶ್ ನಂಗಲಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮುಳಬಾಗಿಲು ಉಪ ವಿಭಾಗದ ಉಪಾಧೀಕ್ಷಕರಾದ ನಂದಕುಮಾರ್ ಹಾಗೂ ಮುಳಬಾಗಿಲು ವೃತ್ತ ನಿರೀಕ್ಷಕ ಸತೀಶ್,  ಮಮತ ಮತ್ತು ಇತರ ಸಿಬ್ಬಂದಿ ದೂರು ದಾಖಲಾದ 48 ಗಂಟೆಯಲ್ಲಿ ಪ್ರಕರಣವನ್ನು ಭೇದಿಸಿದ್ದಾರೆ. ಮುಳಬಾಗಲು ತಾಲ್ಲೂಕು  ದೊಡ್ಡತಮ್ಮನಹಳ್ಳಿ ಗೇಟ್ ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿ ರಾಜೇಶನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿದ್ದನ್ನು ಬಾಯಿ ಬಿಟ್ಟಿದ್ದಾನೆ. ನಂತರ ಆತನಿಂದ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

More articles

Latest article

Most read