ದಾವಣಗೆರೆ ಉಪಸಮರ : ನಾಮಪತ್ರ ಹಿಂಪಡೆಯದ ಸಾದಿಕ್‌ ಪೈಲ್ವಾನ್

ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ 11 ಮಂದಿ ಕಣದಲ್ಲಿ

ದಾವಣಗೆರೆ : ಅಂತಿಮವಾಗಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 11 ಮಂದಿ ಕಣದಲ್ಲಿದ್ದಾರೆ. ಪ್ರಮುಖವಾಗಿ ಪಕ್ಷೇತರ ಅಭ್ಯರ್ಥಿ ಸಾದಿಕ್‌ ಪೈಲ್ವಾನ್‌ ನಾಮಪತ್ರ ವಾಪಸ್‌ ಪಡೆಯದಿರುವುದು ಕಾಂಗ್ರೆಸ್‌ಗೆ ತಲೆ ನೋವಾಗಿದೆ.

ಉಪಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳನ್ನು ಹಿಂಪಡೆಯಲು ಇಂದು ಕೊನೆ ದಿನವಾಗಿತ್ತು. ಹೀಗಾಗಿ, ಕೆಲ ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದುಕೊಂಡಿದ್ದಾರೆ. ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಸಾದಿಕ್‌ ಪೈಲ್ವಾನ್‌ ಕಾರ್ಯಕರ್ತು ಎಷ್ಟೇ ಮನವೊಲಿಸಿದರು ಹಿಂಪಡೆಯಲಿಲ್ಲ. ಆ ಸಂದರ್ಭದಲ್ಲಿ ಸಾದಿಕ ಮನೆ ಮುಂದೆ ಇದ್ದ ಕಾರ್ಯಕರ್ತರು ಗೋ ಬ್ಯಾಕ್‌ ಎಂಬ ಘೋಷಣೆ ಕೂಗಿದರೂ ಸಾದಿಕ್‌ ಉತ್ತರ ನೀಡಲಿಲ್ಲ.

ಮತ್ತೊಂದೆಡೆ, ಮುಸ್ಲಿಂ ಮುಖಂಡರು ಸಾದಿಕ್‌ ಅವರೊಂದಿಗೆ ನಡೆಸಿದ ಸಂಧಾನವೂ ವಿಫಲವಾಗಿದೆ.

More articles

Latest article

Most read