ಹಾಸನ : ಸಕಲೇಶಪುರ ತಾಲ್ಲೂಕಿನ ಜೈ ಕರ್ನಾಟಕ ಸಂಘ ಬೆಳ್ಳೇಕೆರೆ ವತಿಯಿಂದ ಫೆಬ್ರವರಿ 28ರಂದು ಎಸ್.ಕೆ. ಕರೀಂಖಾನ್ ಸೌಹಾರ್ದ ಪ್ರಶಸ್ತಿ ಹಾಗೂ ಅಮೃತ ಕಾವ್ಯ ಪ್ರಶಸ್ತಿಗಳ ಪ್ರಧಾನ ಸಮಾರಂಭ ಸಂಜೆ 6 ಗಂಟೆಗೆ ಪೂರ್ಣ ಚಂದ್ರ ತೇಜಸ್ವಿ ರಂಗಮಂದಿರ ರಕ್ಷಿದಿಯಲ್ಲಿ ನಡೆಯಲಿದೆ.
ಈ ಬಾರಿ ಎಸ್.ಕೆ. ಕರೀಂಖಾನ್ ಸೌಹಾರ್ದ ಪ್ರಶಸ್ತಿ ಹಾಗೂ ಅಮೃತ ಕಾವ್ಯ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಕವಿತಾ ಸುಬ್ಬಯ್ಯ ಉದ್ಘಾಟಿಸಲಿದ್ದು,ಕ್ಯಾಮನಹಳ್ಳಿ ಪಂಚಾಯತ್.ಅಧ್ಯಕ್ಷ ಎಂ.ಜೆ. ಮಲ್ಲೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್.ಕೆ. ಕರೀಂಖಾನ್ ಸೌಹಾರ್ದ ಪ್ರಶಸ್ತಿಯನ್ನು ಮಧು ಕಾರಗಿ, ಅಮೃತ ಕಾವ್ಯ ಪ್ರಶಸ್ತಿಯನ್ನು ವಿನಯ್ ಗುಂಟೆ ಅವರುಗಳಿಗೆ ಪ್ರದಾನ ಮಾಡಲಾಗುವುದು.
ಮುಖ್ಯ ಅತಿಥಿಗಳಾಗಿ ಶಾಸಕ ಎಸ್. ಮಂಜುನಾಥ್, ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್ , ಸಾಮಾಜಿಕ ಹೋರಾಟಗಾರರಾದ ಅಚ್ಯುತ ಕೆ.ಜಿ.ಎಫ್. ಭಾಗವಹಿಸಲಿದ್ದಾರೆ. ಪ್ರಧಾನ ಆಹ್ವಾನಿತರಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ, ಸಮಾಜ ಕಲ್ಯಾಣ ಇಲಾಖೆ ಅಪರ ನಿರ್ದೇಶಕರು ಡಾ. ದೇವರಾಜ್, ನೀನಾಸಂ ಮಾಜಿ ಪ್ರಾಂಶುಪಾಲರು ಹಾಗೂ ರಂಗ ನಿರ್ದೇಶಕ ಕೆ.ಜಿ. ಮಹಾಬಲೇಶ್ವರ್, ಮಣಿಪಾಲ ಕೆ.ಎಂ.ಸಿ ವಾಕ್ ಶ್ರವಣ ತಜ್ಞ ಡಾ. ಕಿಶನ್, ಉದ್ಯಮಿಗಳಾದ ಕೆ.ಎಸ್. ಪವನ್ ಕುಮಾರ್ ಸೋಮಣ್ಣ ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮದಲ್ಲಿ ರಾಧೆ ರಕ್ಷಿದಿ ಪ್ರಾರ್ಥನೆ, ಹಿರಿಯ ಕವಿ ಸುಬ್ಬು ಹೊಲೆಯಾರ್ ಪ್ರಾಸ್ತಾವಿಕ ನುಡಿ, ರಂಗಕರ್ಮಿ, ಸಾಹಿತಿ ಪ್ರಸಾದ್ ರಕ್ಷಿದಿ ನಿರ್ವಹಣೆ ಮಾಡಲಿದ್ದಾರೆ. ಹೆತ್ತೂರು ನಾಗರಾಜ್ ಸ್ವಾಗತಿಸಲಿದ್ದು, ಸತೀಶ್ ಬೆಳ್ಳೇಕೆರೆ ವಂದನಾರ್ಪಣೆ ಮಾಡಲಿದ್ದಾರೆ.


