ಸಾಲ ಕೇಳಿದ ಮಹಿಳೆ ಮೇಲೆ ಅಂಗಡಿಗೆ ನುಗ್ಗಿ ಹಲ್ಲೆ: ಆರೆಸ್ಸೆಸ್ ಕಾರ್ಯಕರ್ತ ನವೀನ್ ಕನ್ಯಾಡಿ ಅರೆಸ್ಟ್:
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನೆ ಉಜಿರೆಯಲ್ಲಿ ನವೀನ್ ಕನ್ಯಾಡಿ ಎಂಬ ಆರೆಸ್ಸೆಸ್ – ಸಂಘಪರಿವಾರದ ಕಾರ್ಯಕರ್ತ ಕೊಟ್ಟ ಸಾಲ ವಾಪಾಸು ಕೇಳಿದ ಮಹಿಳೆಯೊಬ್ಬಳಿಗೆ ಬಟ್ಟೆ ಅಂಗಡಿಗೆ ನುಗ್ಗಿ ಹಲ್ಲೆ ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ನವೀನ್ ಕುಮಾರ್ ಕನ್ಯಾಡಿ ಹಿಂದೆ ಬೆಳ್ತಂಗಡಿ ಹೋಮ್ ಗಾರ್ಡ್ ಒಬ್ಬರ ಮೇಲೆಯೂ ಹಲ್ಲೆ ನಡೆಸಿದ್ದ ಆರೋಪವಿದೆ.
ಎರಡು ದಿನಗಳ ಹಿಂದೆ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರೂಪಾ ಎಂಬ ಮಹಿಳೆ ಆರೆಸ್ಸೆಸ್ ಕಾರ್ಯಕರ್ತ ನವೀನ್ ಕನ್ಯಾಡಿಗೆ 7 ಲಕ್ಷ ಸಾಲ ನೀಡಿದ್ದರು. ತಾನು ಕೊಟ್ಟಿದ್ದ ಸಾಲ ವಾಪಾಸು ಕೊಡುವಂತೆ ಕೇಳಿದ್ದರು. ರಾತ್ರಿ ಸಮಯದಲ್ಲಿ ಏಕಾಏಕಿ ಅಂಗಡಿಗೆ ನುಗ್ಗಿದ ಆರೋಪಿ ಮಹಿಳೆಗೆ ಮನಸಿಗೆ ಬಂದಂತೆ ಹೊಡೆದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ನಂತರ ಹಲ್ಲೆಗೆ ಒಳಗಾದ ಮಹಿಳೆ ನೀಡಿದ ದೂರಿನ ಮೇಲೆ ಪೊಲೀಸರು ನವೀನ್ ಕುಮಾರ್ ಕನ್ಯಾಡಿಯನ್ನು ಬಂಧಿಸಿ ಕರೆದೊಯ್ದಿದ್ದಾರೆ. ಹಲ್ಲೆಗೆ ಒಳಗಾಗಿರುವ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನವೀನ್ ಕುಮಾರ್ ಕನ್ಯಾಡಿ ಆರೆಸ್ಸೆಸ್ – ಸಂಘಪರಿವಾರದ ಕಟ್ಟರ್ ಕಾರ್ಯಕರ್ತನಾಗಿದ್ದು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ಕಟ್ಟರ್ ಬೆಂಬಲಿಗನೂ ಆಗಿದ್ದ. ಜೊತೆಗೆ ಹೂವಿನ ವ್ಯಾಪಾರ ಮಾಡಿಕೊಂಡಿರುತ್ತಾನೆ.