Wednesday, April 2, 2025

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ರೋಹಿತ್ ಕಾಯ್ದೆ ಅಗತ್ಯ

Most read

ಬೆಂಗಳೂರು: ದಲಿತ ಬಹುಜನ ವಿದ್ಯಾರ್ಥಿಗಳಿಗೆ ಘನತೆ, ಸಮಾನ ಅವಕಾಶ, ಸ್ಥಾನಮಾನ ಖಾತ್ರಿ ಪಡಿಸಲು ವಿಫಲವಾಗಿದ್ದು, ರೋಹಿತ್ ಕಾಯ್ದೆ ಅಗತ್ಯವಾಗಿದೆ. ಏಪ್ರಿಲ್ 14, ಅಂಬೇಡ್ಕರ್ ಜಯಂತಿ ಒಳಗಾಗಿ ರಾಜ್ಯ ಸರ್ಕಾರ ರೋಹಿತ್ ಕಾಯ್ದೆ ಜಾರಿಮಾಡಲು ಅಗತ್ಯ ಕ್ರಮವನ್ನು ಘೋಷಿಸಬೇಕು ಎಂದು ರೋಹಿತ್ ಕಾಯ್ದೆಗಾಗಿ ಜನಾಂದೋಲನ ಸಂಘಟನೆ ಆಗ್ರಹಪಡಿಸಿದೆ.
ಹಾಗಾಗಿ ರೋಹಿತ್ ಕಾಯ್ದೆ ಜಾರಿಯಾಗುವಂತೆ, ಸಾರ್ವಜನಿಕ ವಿಶ್ವಾವಿದ್ಯಾನಿಲಯಗಳಲ್ಲಿ ಉತ್ತಮ, ಗುಣಮಟ್ಟ ಶಿಕ್ಷಣ ನೀಡುವಂತೆ ಹಾಗು ಖಾಸಗಿ ವಿಶ್ವವಿದ್ಯಾನಿಲಯಗಳ ನಿಯಂತ್ರಣ ಆಗುವಂತೆ ಒತ್ತಾಯಿಸಲು ರೋಹಿತ್ ಕಾಯ್ದೆಗಾಗಿ ಜನಾಂದೋಲನ ಸಂಘಟನೆ ರಾಜ್ಯ ಮಟ್ಟದ ಆಂದೋಲನ ಕೈಗೊಳ್ಳುತ್ತಿದೆ. ಈ ಆಂದೋಲನದಲ್ಲಿ ಯುವಜನರು ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಕೋರಿದೆ.

ಹಕ್ಕೊತ್ತಾಯಗಳು:

  • ಕಾಯ್ದೆ ಜಾರಿ ಮಾಡಲು ದಲಿತ-ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳಿರುವ ಸಮಿತಿ ರಚನೆಯಾಗಬೇಕು.
  • ಕಾರ್ನಾಟಕದ ಉನ್ನತ ಶಿಕ್ಷಣ ಕ್ಷೇತ್ರ ತಾರತಮ್ಯ ರಹಿತವಾಗುವಂತೆ, ಎಲ್ಲರಿಗು ಸಮಾನ ಅವಕಾಶ ಸಿಗುವಂತೆ ಸೂಕ್ತ, ಶೀಘ್ರ ಕ್ರಮ ಕೈಗೊಳ್ಳಬೇಕು
  • ಜಾತಿ ವಿನಾಶವೇ ನಮ್ಮ ಅಂತಿಮ ಗುರಿ, ಅದಕ್ಕೆ ಸೂಕ್ತ ಕ್ರಮವನ್ನು ಸರ್ಕಾರ ಕೈಗೊಳ್ಳಬೇಕು.
    2021 ರಲ್ಲಿ, ಅಂದಿನ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು, 2014-2021 ರ ಅವಧಿಯಲ್ಲಿ ಐಐಟಿ, ಐಐಎಂ, ಎನ್‌ಐಟಿ ಮತ್ತು ಇತರ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ 122 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇವರಲ್ಲಿ 68 ವಿದ್ಯಾರ್ಥಿಗಳು SC/ST/OBC ವರ್ಗಗಳಿಗೆ ಸೇರಿದವರಾಗಿದ್ದಾರೆ. ಸಮಾನತೆಯ ನಿರಾಕರಣೆಯಿಂದ ಪ್ರತಿ ವರ್ಷ ಸಾವಿರಾರು ದಲಿತ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸೇರಿದ ನಂತರ ಡ್ರಾಪ್ ಔಟ್ ಆಗುತ್ತಿದ್ದಾರೆ. ಡಿಸೆಂಬರ್ 2023 ರಲ್ಲಿ ಸರ್ಕಾರ ಸಂಸತ್ತಿನಲ್ಲಿ ನೀಡಿದ ಅಂಕಿ ಅಂಶಗಳ ಪ್ರಕಾರ ಕೇಂದ್ರೀಯ ವಿಶ್ವಾ ವಿದ್ಯಾನಿಲಯಗಳಿಂದ 2018-2023ರ ಅವಧಿಯಲ್ಲಿ 13000 ಹೆಚ್ಚು SC/ST/OBC ಸಮುದಾಯದ ವಿಧಾರ್ಥಿಗಳು ಡ್ರಾಪ್ ಔಟ್ ಆಗಿದ್ದಾರೆ. ವಿದ್ಯಾರ್ಥಿಗಳು ಪ್ರತಿನಿತ್ಯ ಜಾತಿ ತಾರತಮ್ಯವನ್ನುಎದುರಿಸುತ್ತಲೇ ಇದ್ದಾರೆ. ನಿವೃತ್ತ ಯು.ಜಿ.ಸಿ ಅಧ್ಯಕ್ಷ ಸುಖದೇವ್ ಥೋರಟ್ ನೇತೃತ್ವದ ಸಮಿತಿಯೂ ಇದನ್ನು ದೃಢೀಕರಿಸಿದೆ.
  • ಜಾತಿ ಎನ್ನುವುದು ಕರ್ನಾಟಕದಲ್ಲಿಯೂ ಸಾಮಾನ ಶಿಕ್ಷಣಕ್ಕೆ ಅಡ್ಡಿಯಾಗಿದೆ. ಒಂದು ಕಡೆ ಸರ್ಕಾರ ಸಾರ್ವಜನಿಕ ಶಿಕ್ಷಣಕ್ಕಾಗಿ ನೀಡುತ್ತಿರುವ ಅನುದಾನ ಸಾಲುತ್ತಿಲ್ಲ, ಇನ್ನೊಂದೆಡೆ ಶಿಕ್ಷಣದ ಖಾಸಗೀಕರಣ ವೇಗವಾಗಿ ಮುಂದುವರಿಯುತ್ತಿದೆ. ಇದರ ಜೊತೆಗೆ NEP, CUET, NEET ನಂತಹ ನೀತಿಗಳಿಂದ ಶಿಕ್ಷಣದ ಕೇಂದ್ರೀಕರಣವಾಗುತ್ತಿದೆ. ಇದರ ಪರಿಮಾಣ ಉತ್ತಮ ಉನ್ನತ ಶಿಕ್ಷಣ ದಲಿತ-ಬಹುಜನರಿಂದ ದೂರವಾಗಿದೆ. ಇದಕ್ಕೆ ಎರಡು ಇತ್ತೀಚಿನ ಉದಾಹರಣೆಗಳೆಂದರೆ –
  • ಎರಡು ದಿವಸಗಳ ಹಿಂದೆ ತಾನೇ , ಸರ್ಕಾರ SC/ST/OBC ಸಮುದಾಯದ ವಿದ್ಯಾರ್ಥಿಗಳಿಗೆ ನಡೆಸುವ ಹಾಸ್ಟೆಲ್ ಗಳು ಇಂತಹ ಹೀನಾಯ ಪರಿಸ್ಥಿತೆಯಲ್ಲಿದೆ ಎಂದು ಮುಖ್ಯವಾಹಿನಿಗಳ ಮುಖಪುಟದಲ್ಲಿ ಪ್ರಕಟವಾಗಿತ್ತು. ವಿದ್ಯಾರ್ಥಿಗಳಿಗೆ ಪ್ರತಿದಿವಸ ಸ್ನಾನ ಮಾಡಲು ಸಹ ಆಗದ, ಆರೋಗ್ಯಕರ ಊಟ ಸಿಗದ ಪರಿಸ್ಥಿತಿ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ
  • ಇತ್ತೀಚಿಗೆ ಬಿಡುಗಡೆಯಾದ ‘ಶಿಕ್ಷಣ , ಮಹಿಳೆಯರು, ಮಕ್ಕಳು,ಯುವಜನರ ಹಾಗು ಕ್ರೀಡಾ ಸ್ಥಾಯಿ ಸಮಿತಿ’ಯಾ (Parliamentary Standing Committee on Education, Women, Children, Youth and Sports) ವರದಿಯ ಪ್ರಕಾರ ದೇಶದ 30 ದೊಡ್ಡ ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ SC ಸಮುದಾಯದ ವಿಧಾರ್ಥಿಗಳ ಸಂಖ್ಯೆ ಕೇವಲ 5%! ಈ ಹಿನ್ನೆಲೆಯಲ್ಲಿ ರೋಹಿತ್‌ ಕಾಯಿದೆ ಅನಿವಾರ್ಯ ಎಂದು ಸಂಘಟನೆ ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾವಳ್ಳಿ ಶಂಕರ್, ಬಸವರಾಜ್ ಕೌತಾಳ್, ಡಾ. ಕೆ.ಪಿ ಅಶ್ವಿನಿ, ಆಶ್ನಾ, ಡಾ. ನಂದಕುಮಾರ್, ಲೇಖಾ ಅಡವಿ, ಸರೋವರ್ ಬೆಂಕಿಕೆರೆ,
ವೆಂಕಟೇಶ್ ಹಾಜರಿದ್ದರು

More articles

Latest article