ಕೋಲಾರ: ಶ್ರೀನಿವಾಸಪುರ ತಾಲ್ಲೂಕು ರಾಯಲ್ಪಾಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಕಾರುಗಳ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ನೆರೆಯ ಆಂದ್ರ ಪ್ರದೇಶದ ಕಡಪದ ರಾಯಚೂಟಿಯಿಂದ ಬೆಂಗಳೂರಿನತ್ತ ಹೊರಟಿದ್ದ ಇಟಿಯೋಸ್ ಲಿವಾ ಹಾಗೂ ಬೆಂಗಳೂರಿನಿಂದ ಆಂದ್ರಪ್ರದೇಶದತ್ತ ಹೊರಟಿದ್ದ ಮಹೀಂದ್ರಾ ಕಾರಿನ ನಡುವೆ ಮದರಂಕಪಲ್ಲಿ ಬಳಿ ಈ ದುರಂತ ಸಂಭವಿಸಿದೆ. ಇಟಿಯೋಸ್ ಲಿವಾ ಕಾರಿನಲ್ಲಿ ಮೂರು ಮಂದಿ ಇದ್ದರು. ಇವರಲ್ಲಿ ಮಾರುತಿ ಶಿವ ಕುಮಾರ್ (55) ಸ್ಥಳದಲ್ಲೇ ಸಾವನ್ನಪ್ಪಿದರೆ ಪ್ರಕಾಶ್ (40) , ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಆನಂದ್ ಎಂಬುವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.
ಅತಿ ವೇಗ ಹಾಗೂ ಅಜಾರೂಕತೆಯಿಂದ ಚಲಿಸುತ್ತಿದ್ಬ ಮಹೀಂದ್ರಾ ಕಾರಿನಲ್ಲಿದ್ದ ಬೆಂಗಳೂರಿನ ನಿವಾಸಿಗಳಿಗೆ ಸಣ್ನ ಪುಟ್ಟ ಗಾಯಗಳಾಗಿ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ರಾಯಲ್ಪಾಡು ಪೋಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.