ಕಾಂತಾರ ಚಾಪ್ಟರ್ 1 ಬಿಡುಗಡೆ ವೇಳೆ, ರಿಷಬ್ ಶೆಟ್ಟಿ ತಮ್ಮ ಶೆಟ್ಟಿ ಫ್ರೆಂಡ್ಸ್ ಗ್ರೂಪ್ ಅನ್ನು ಮರೆತಿದ್ದಾರೆಯೇ? ಎಂದು ಸಿನಿಮಾ ಪ್ರಿಯರಲ್ಲಿ ಒಂದು ಪ್ರಶ್ನೆ ಮೂಡಿತ್ತು.
ಅದು ಕೊನೆಗೂ ನಿಜವಾಗಿದೆ. ಹೌದು ಅದೇನೇಂದರೆ, ಕಾಂತಾರ 1 ಬಿಡುಗಡೆಯಾದಾಗ ಯಾವ ಸ್ನೇಹಿತರೂ ಜೊತೆಯಲ್ಲಿ ಕಾಣಿಸಿಕೊಳ್ಳದೇ ಇದ್ದಾಗ ಇಂತಹ ಪ್ರಶ್ನೆ ಮೂಡಿತು. ಬರ ಬರುತ್ತಾ ಸ್ನೇಹಿತರೂ ಕೂಡ ಸಿನಿಮಾ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ಮತ್ತಷ್ಟು ಕನ್ಫರ್ಮ್ ಆಯ್ತು, ರಿಷಬ್ ಶೆಟ್ಟಿ ಎಲ್ಲರಿಂದ ದೂರ ಹೋಗಿದ್ದಾರೆ.
ಪತ್ನಿಯನ್ನ ಮಾತ್ರ ಫಾಲೋ : ಸಿನಿಮಾ ಕ್ಷೇತ್ರದಲ್ಲಿ ಕಾಲಿಟ್ಟಾಗಿನಿಂದ ಇದ್ದ ಸ್ನೇಹಿತರೂ ಸೇರಿದಂತೆ ಹೊಂಬಾಳೆ ಫಿಲಂಸ್, ರುಕ್ಮಿಣಿ ವಸಂತ್, ಹೀಗೆ ತಾವೂ ಫಾಲೋ ಮಾಡಿದ್ದ 153 ಮಂದಿಯನ್ನು ಒಂದೇ ಬಾರಿಗೆ ರಿಷಬ್ ಶೆಟ್ಟಿ ಇನ್‌ಸ್ಟಾಗ್ರಾಂ ಅಲ್ಲಿ ಅನ್ ಫಾಲೋ ಮಾಡಿದ್ದಾರೆ. ಪತ್ನಿಯನ್ನು ಮಾತ್ರ ಫಾಲೋ ಮಾಡ್ತಾ ಇದ್ದಾರೆ.
ಕೀರ್ತಿ ಶನಿ ಹೆಗಲೇರಿದೆಯಾ? : ನೇಮ್, ಫೇಮ್ ಜಾಸ್ತಿ ಆಗಿದೆ. ಯಾರೂ ಬೇಡ ಎಲ್ಲವೂ ನನ್ನ ಬಳಿ ಇದೆ. ಅನ್ನುವ ಅಹಂ ಬಂದಿರಬಹುದು ಅಂತ ಇದನ್ನೆಲ್ಲಾ ನೋಡಿದ ಸಾಮಾನ್ಯ ಸಿನಿಮಾ ವೀಕ್ಷಕ ಮಾತನಾಡುವುದು ಸಹಜ. ಸ್ಟಾರ್‌ಗಿರಿ ತಲೆ ಮೇಲೆ ಏರಿದ್ರೆ ಹೀಗೇ ಆಗೋದು, ದುಡ್ಡು ಎಲ್ಲರನ್ನೂ ದೂರ ಮಾಡತ್ತೆ ಅನ್ನೋದು ರಿಷಬ್ ಶೆಟ್ಟಿಯನ್ನು ನೋಡಿದ ಮೇಲೆ ಪಕ್ಕಾ ಆಯ್ತು ಅಂತಿದ್ದಾರೆ ಅಭಿಮಾನಿಗಳು.
ಯಾಕೆ ಹೀಗೆಲ್ಲ ಆಗತ್ತೆ…
ರಿಷಬ್ ಶೆಟ್ಟಿ ಕನ್ನಡದ ಸಿನಿಮಾಗಳನ್ನು ನೋಡಿಕೊಂಡು ಬೆಳೆದವರು, ಹಿರಿಯ ನಟರ ನಟನೆ, ಆದರ್ಶ ಅನುಸರಿಸಿಕೊಂಡವರು, ಅಂತಹವರೇ ಹಣ ಬಂದಮೇಲೆ ಎಲ್ಲರನ್ನೂ ಮರೆತಿದ್ದಾರೆ ಅಂದರೆ, ಹಿರಿಯರಿಂದ ಕಲಿತಿರುವುದಾದರೂ ಏನು ಹಾಗಾದರೆ? ಉದಯೋನ್ಮುಖ ಕಲಾವಿದರೂ ಇದನ್ನೇ ಅನುಸರಿಸಲು ಪ್ರೇರಣೆ ನೀಡುತ್ತಿದ್ದಾರಾ ಎಂಬ ಪ್ರಶ್ನೆ ಮೂಡುತ್ತಿದೆ.
ಸಿನಿಮಾ, ವೃತ್ತಿ, ವೈಯಕ್ತಿಕ ಜೀವನದಲ್ಲಿ ಆವರಿಸಿಕೊಂಡ ಪತ್ನಿ!
ಸ್ನೇಹಿತರು, ಅಭಿಮಾನಿಗಳು, ಎಲ್ಲರನ್ನೂ ಅನ್‌ಫಾಲೋ ಮಾಡಿ ಪತ್ನಿಯನ್ನು ಮಾತ್ರ ಫಾಳೋ ಮಾಡ್ತಿದ್ದಾರೆ ರಿಷಬ್ ಶೆಟ್ಟಿ.
ಕಾಂತಾರ ಸಿನಿಮಾ ಮಾಡಲು ಶುರು ಮಾಡಿದಾಗಿನಿಂದಲೂ ಪತ್ನಿ ಪ್ರಗತಿ ಶೆಟ್ಟಿ, ರಿಷಬ್‌ಗೆ ಮೆಂಟರ್ ಆಗಿದ್ದಾರೆ. ಸಿನಿಮಾದಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿ, ಹಣಕಾಸಿನ ವ್ಯವಹಾರ, ರಿಷಬ್‌ರ ಸಂಪೂರ್ಣ ಕೆಲಸಗಳಲ್ಲಿ ಎಲ್ಲದರಲ್ಲೂ ಪ್ರಗತಿ ಅವರ ನಿರ್ದೇಶನವೇ ಆದೇಶ ಅಂತಾರೆ ಸೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ಹಲವರು.
ಇದನ್ನೆಲ್ಲಾ ನೋಡ್ತಾ ಇದ್ದರೆ ರಿಷಬ್ ಒಬ್ಬರ ಮಾತಿಗಷ್ಟೇ ಮಣೆ ಹಾಕುತ್ತಿದ್ದಾರೆ. ಅವರು ಹೇಳಿದ ಹಾಗೆಯೇ ಕೇಳ್ತಿದ್ದಾರೆ. ಹೀಗಾಗಿ, ಎಲ್ಲರನ್ನೂ ದೂರ ಮಾಡಿಕೊಳ್ತಾ ಇರಬಹುದು ಅನಿಸಿದೆ.

