ನಾನು ಪಾರ್ಟಿಯಲ್ಲಿ ಇದ್ದದ್ದು ನಿಜ, ಒಳಗೆ ಏನು ನಡೆಯುತ್ತಿತ್ತು ಗೊತ್ತಿಲ್ಲ : ರೇವದ ಪಾರ್ಟಿ ಬಗ್ಗೆ ಆಶಿರಾಯ್ ವಿಡಿಯೋ

Most read

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯ ಫಾರ್ಮ್ ಹೌಸ್ ನಲ್ಲಿ ರೇವ್ ಮಾಡಿ ಪೊಲೀಸರ ಕೈಲಿ ತಗಲಾಕಿಕೊಂಡ ನಟಿಯರಲ್ಲಿ ತೆಲುಗಿನ ಆಶಿರಾಯ್ ಕೂಡ ಒಬ್ಬರು. ಆರಂಭದಲ್ಲಿ ನಾನು ಅಲ್ಲಿರಲಿಲ್ಲ ಎಂದೇ ಹೇಳಿದ್ದರು. ಬಳಿಕ ಪೊಲೀಸರು ಪಾರ್ಟಿಯಲ್ಲಿದ್ದವರನ್ನು ಖಚಿತ ಪಡಿಸಿದ್ದರು. ಇದೀಗ ವಿಡಿಯೋ ಬಿಟ್ಟಿರುವ ನಟಿ ಆಶಿರಾಯ್, ಅದು ನಾನೇ. ಆದರೆ ನಾನೇನು ತಪ್ಪು ಮಾಡಿಲ್ಲ ಎಂದಿದ್ದಾರೆ.

‘ಅದೊಂದು ಬರ್ತ್ ಡೇ ಪಾರ್ಟಿಯಾಗಿತ್ತು. ಒಳಗೆ ಏನು ನಡೆಯುತ್ತಾ ಇತ್ತು ಎಂಬುದು ಗೊತ್ತಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ದಯವಿಟ್ಟು ನೀವೆಲ್ಲ ನನ್ನನ್ನು ಬೆಂಬಲಿಸಿ. ನಾನು ಕಷ್ಟಪಟ್ಟು ಉದ್ಯಮದಲ್ಲಿ ಬೆಳೆಯುತ್ತಿರುವ ಹುಡುಗಿ. ದಯವಿಟ್ಟು ನನಗೆ ಸಹಾಯ ಮಾಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ಪಾರ್ಟಿಯಲ್ಲಿ ಇನ್ನಷ್ಟು ನಟ-ನಟಿಯರು ತಗಲಾಕಿಕೊಂಡಿದ್ದಾರೆ. ಅದರಲ್ಲಿ ಹೇಮಾ ಕೂಡ ಒಬ್ಬರು. ಆದರೆ ಹೇಮಾ ಕೂಡ ಅದೇ ಫಾರ್ಮ್ ಹೌಸಿನಲ್ಲಿ ನಿಂತು ವಿಡಿಯೋ ಮಾಡಿ, ನಾನು ಎಲ್ಲಿಯೂ ಹೋಗಿಲ್ಲ, ಆ ವಿಡಿಯೋದಲ್ಲಿ ಇದ್ದದ್ದು ನಾನಲ್ಲ ಎಂದು ಹೇಳಿದ್ದರು. ಈಗಾಗಲೇ ಪೊಲೀಸರು ಆ ಫಾರ್ಮ್ ಹೌಸನ್ನು ಸಂಪೂರ್ಣವಾಗಿ ಜಾಲಾಡಿದ್ದಾರೆ. ಮೂರು ಜನ ಡ್ರಗ್ ಪೆಡ್ಲರ್ ಹಾಗೂ ಆಯೋಜಕ ವಾಸು ಸೇರಿದಂತೆ ಐದು ಜನರ ಬಂಧನವಾಗಿದೆ. ಪಾರ್ಟಿಯಲ್ಲಿದ್ದ 101 ಮಂದಿಯನ್ನು ಕೂರಿಸಿಕೊಂಡು, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದಿದ್ದಾರೆ. ಡ್ರಗ್ಸ್ ತೆಗೆದುಕೊಂಡಿದ್ದಾರಾ ಹೇಗೆ ಎಂಬುದನ್ನು ಪರೀಕ್ಷೆ ಮಾಡಿಅಉತ್ತಿದ್ದಾರೆ. ಎಲ್ಲಾ ಅತಿಥಿಗಳನ್ನು ಮೆಡಿಕಲ್ ಚೆಕಪ್ ಮುಗಿಯುವ ತನಕ ಫಾರ್ಮ್ ಹೌಸ್ ತೊರೆಯದಂತೆ ಸೂಚನೆ ನೀಡಲಾಗಿದೆ.

https://www.instagram.com/p/C6wIQUwhJgG/?igsh=MXBucW1sMDN3cmducw==

More articles

Latest article