ಕ್ರೀಡಾಪಟುಗಳ ಮೀಸಲಾತಿ ಶೇ.3ಕ್ಕೆ ಹೆಚ್ಚಳ: ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣೆ
ಬೆಂಗಳೂರು: ಪೊಲೀಸ್ ಇಲಾಖೆಯ ನೇರ ನೇಮಕಾತಿಯಲ್ಲಿ ಕಾನ್ಸಟೇಬಲ್ನಿಂದ ಡಿವೈಎಸ್ ಪಿ ವರೆಗೆ ಪ್ರಶಂಸನೀಯ ಕ್ರೀಡಾಪಟುಗಳ ಮೀಸಲಾತಿ ಪ್ರಮಾಣವನ್ನು ಶೇ.2 ರಿಂದ ಶೇ.3ಕ್ಕೆ ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲ್ಲೂಕಿನ ಒಟ್ಟು 5678 ಎಕರೆ 32 ಗುಂಟೆ ಪ್ರದೇಶಗಳನ್ನು ವನ್ಯಜೀವಿ (ಸಂರಕ್ಷಣಾ) ಅಧಿನಿಯಮ, 1972ರ ಕಲಂ 36(ಎ) ರನ್ವಯ “ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ” ಎಂದು ಘೋಷಿಸಲು ಸಚಿವ ಸಂಪುಟ ಅನುಮೋದಿಸಿದೆ.
ಬೀದರ್ ನಗರಸಭೆ ಮಹಾನಗರ ಪಾಲಿಕೆಯಾಗಿ ಪರಿವರ್ತನೆ:
ಹಾಲಿ ಬೀದರ್ ನಗರಸಭೆಯೊಂದಿಗೆ (1) ಅಷ್ಟೂರ ಗ್ರಾಮ ಪಂಚಾಯಿತಿಯ ಓಡವಾಡ, ತಾಜಲಾಪುರ (2) ಅಮಲಾಪುರ ಗ್ರಾಮ ಪಂಚಾಯತಿಯ ಅಮಲಾಪುರ, ಗೋರನಹಳ್ಳಿ (ಬಿ), (3) ಅಲಿಯಾಬಾದ ಗ್ರಾಮ ಪಂಚಾಯತಿಯ ಅಲಿಯಾಬಾದ, ಚೋಂಡಿ, ಚೌಳಿ, (4) ಗಾದಗಿ ಗ್ರಾಮ ಪಂಚಾಯತಿಯ ಸಿಪ್ಪಲಗೇರಿ, ಶಾಮರಾಜಪುರ, ಕಬೀರವಾಡಾ, ಮಾಮನಕೇರಿ, (5) ಕೋಳಾರ ಗ್ರಾಮ ಪಂಚಾಯತಿಯ ಕೋಳಾರ (ಕೆ), ನಿಜಾಮಪುರ, ಹಜ್ಜರಗಿ, ಕಮಲಪುರ ಹಾಗೂ (6) ಮರಖಲ ಗ್ರಾಮ ಪಂಚಾಯತಿಯ ಚಿಕ್ಕಪೇಟ್ ಗ್ರಾಮ ಒಟ್ಟು 16 ಗ್ರಾಮಗಳನ್ನು ಸೇರ್ಪಡೆಗೊಳಿಸಿ, ಬೀದರ್ ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಅನುಮೋದಿಸಿದೆ.