ರಕ್ಷಿಸಲ್ಪಟ್ಟ ಇರಾನ್‌ ನಾವಿಕರಿಗೆ ಗ್ಯಾಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ

87 ಮಂದಿಯ ಶವಗಳನ್ನು ಹೊರಕ್ಕೆ ತಂದ ರಕ್ಷಣಾ ಪಡೆಗಳು

 ಶ್ರೀಲಂಕಾ :  ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಜಲಾಂತರ್ಗಾಮಿ ದಾಳಿಯಲ್ಲಿ ಬದುಕುಳಿದ ಇರಾನಿನ ನಾವಿಕರು ಶ್ರೀಲಂಕಾದ ಬಂದರು ನಗರ ಗ್ಯಾಲೆಯಲ್ಲಿರುವ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ಮುಂಜಾನೆ  ತುರ್ತು ಕರೆಗೆ ಸ್ಪಂದಿಸಿದ ಮಿಲಿಟರಿ ರಕ್ಷಣಾ ಪಡೆಗಳು 87 ಶವಗಳನ್ನು ಹೊರಕ್ಕೆ ತಂದವು ಎಂದು ಗ್ಯಾಲೆಯ ರಾಷ್ಟ್ರೀಯ ಆಸ್ಪತ್ರೆಯ ಅಧಿಕಾರಿಗಳು ಮತ್ತು ನೌಕಾಪಡೆಯ ಮೂಲಗಳು ತಿಳಿಸಿವೆ.

ಹಡಗಿನಲ್ಲಿ ಇನ್ನೂ ಪತ್ತೆಯಾಗದ   60 ಜನರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಗುರುವಾರ  ಮುಂದುವರಿದಿದೆ. ರಕ್ಷಿಸಲ್ಪಟ್ಟ 32 ನಾವಿಕರು ಸಣ್ಣಪುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದು, ಗುರುವಾರ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ಶ್ರೀಲಂಕಾದ ಗ್ಯಾಲೆ  ಕರಾವಳಿಯ ಬಳಿ ತೆರಳುತ್ತಿದ್ದ ಇರಾನ್‌ನ ‘ಐಆರ್‌ಐಎಸ್ ಡೆನಾ’  na) ಎಂಬ ಮಿಲಿಟರಿ ನೌಕೆಯ ಮೇಲೆ ಅಮೆರಿಕದ ಸಬ್‌ಮರೀನ್ ಟಾರ್ಪಿಡೊ   ಮೂಲಕ ದಾಳಿ ನಡೆಸಿ, ಅದನ್ನು ಮುಳುಗಿಸಿದೆ. ಈ ದಾಳಿಯಲ್ಲಿ ಕನಿಷ್ಠ 87 ಮಂದಿ ಮೃತಪಟ್ಟಿದ್ದಾರೆ ಎಂದು ಶ್ರೀಲಂಕಾದ ಉಪ ವಿದೇಶಾಂಗ ಸಚಿವ ಅರುಣ್ ಹೇಮಚಂದ್ರ ಸ್ಥಳೀಯ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.  

More articles

Latest article

Most read