ಸೈಲೆನ್ಸರ್ ಮಫ್ಲರ್ ತೆಗೆದು ಬೆಂಕಿ ಉಗುಳುವಂತೆ ಮಾಡಿದ್ದ ಕಾರು ಮತ್ತು ಮಾಲೀಕನ ಬಂಧನ

Most read

ಬೆಂಗಳೂರು:  ಕಾರಿನ ಸೈಲೆನ್ಸರ್ ಮಫ್ಲರ್ ತೆಗೆದು ಬೆಂಕಿ ಉಗುಳುವಂತೆ ಮಾರ್ಪಡಿಸಿ ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡುತ್ತಿದ್ದ ಕಾರಿನ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾರನ್ನು ವಶಕ್ಕೆ ಪಡೆದಿದ್ದಾರೆ. ಕಾರಿನ ಮಾಲೀಕ ಕಾರನ್ನು ಚರ್ಚ್‌ಸ್ಟ್ರೀಟ್‌ನಲ್ಲಿ ನಿಲ್ಲಿಸಿಕೊಂಡು, ಕರ್ಕಶ ಶಬ್ದ ಮಾಡುತ್ತಿದ್ದ. ಈ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು, ಪಾದಚಾರಿಗಳು ಮತ್ತು ಅಂಗಡಿ ಕಚೇರಿಗಳ ಸಿಬ್ಬಂದಿ ಕಾರಿನ ಶಬ್ದಕ್ಕೆ ಹೆದರಿದ್ದರು. ನಂತರ ಪೊಲೀಸರಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಆಗ್ರಹಪಡಿಸಿದ್ದರು.

ಫೋಕ್ಸ್‌ ವ್ಯಾಗನ್ ಪೋಲೊ ಕಾರನ್ನು ರಸ್ತೆಯಲ್ಲಿ ನಿಲ್ಲಿಸಿಕೊಂಡು ಬೆಂಕಿ ಉಗುಳಿಸುತ್ತಿದ್ದ ದೃಶ್ಯವುಳ್ಳ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಈ ದೃಶ್ಯವನ್ನು ಆಧರಿಸಿ  ಸಂಚಾರ ವಿಭಾಗದ ಪೊಲೀಸರು ಕಾರನ್ನು ಪತ್ತೆಮಾಡಿ ಪ್ರಕರಣ ದಾಖಲಿಸಿದ್ದಾರೆ. ಕೆ.ಆ‌ರ್.ಪುರದ ಪಂಜು ಶೆಣೈ ಹೆಸರಿನಲ್ಲಿ ಕಾರು ನೋಂದಣಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

More articles

Latest article