ಬಿಹಾರದಲ್ಲಿ ಮರು ಚುನಾವಣೆ ನಡೆಯಬೇಕು: ರಾಬರ್ಟ್‌ ವಾದ್ರಾ ಆಗ್ರಹ

Most read

ಇಂದೋರ್: ಬಿಹಾರ ವಿಧಾನಸಭಾ ಚುನಾವಣೆ ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆದಿಲ್ಲ. ಆದ್ದರಿಂದ ಮರು ಚುನಾವಣೆ ನಡೆಸಬೇಕು ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರ ಪತಿ, ಉದ್ಯಮಿ ರಾಬರ್ಟ್‌ ವಾದ್ರಾ ಅಭಿಪ್ರಾಯಪಟ್ಟಿದ್ದಾರೆ.

ಮಧ್ಯಪ್ರದೇಶಕ್ಕೆ ಭೇಟಿ ನೀಡಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.  

ಬಿಹಾರದಲ್ಲಿ ಆಡಳಿತಾರೂಢ ಎನ್‌ ಡಿಎ ಮೈತ್ರಿಕೂಟ ಭರ್ಜರಿ ಜಯ ದಾಖಲಿಸಿದ್ದು, ಚುನಾವಣಾ ಆಯೋಗದ ಪಾತ್ರದ ಬಗ್ಗೆ ಶಂಕೆಗಳು ಉಂಟಾಗಿರುವ ಬೆನ್ನಲ್ಲೇ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಾದ್ರಾ ಅವರ ಬಾವ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಫಲಿತಾಂಶ ಅಚ್ಚರಿ ಉಂಟು ಮಾಡಿದೆ. ನ್ಯಾಯ ಸಮ್ಮತ ಚುನಾವಣೆ ನಡೆಯಿದುರುವ ಕಾರಣಕ್ಕೆ ನಾವು ಜಯಗಳಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದರು.

ನಿಜ ಹೇಳಬೇಕೆಂದರೆ ಬಿಹಾರದ ಜನತೆಯೂ ಈ ಫಲಿತಾಂಶದಿಂದ ಸಂತೋಷಪಟ್ಟಿಲ್ಲ. ಚುನಾವಣಾ ಆಯೋಗದ ಕಾರಣಕ್ಕಾಗಿ ಈ ಫಲಿತಾಂಶ ಹೊರಬಿದ್ದಿದೆ.  ಸಂಭವಿಸಿದೆ. ಚುನಾವಣಾ ಆಯೋಗ ಅವರಿಗೆ ಸಹಾಯ ಮಾಡಿದೆ ಎಂದು ಎನ್‌ ಡಿಎ ಹೆಸರು ಹೇಳದೆ ಟೀಕಿಸಿದರು.

ನಾಳೆ ರಾಹುಲ್‌ ಗಾಂಧಿ ಅವರು ಬಿಹಾರಕ್ಕೆ ಭೇಟಿ ನೀಡುತ್ತಿದ್ದು, ಯುಸಮೂಹ ಅವರ ಜತೆ ನಿಲ್ಲಲಿದೆ. ಪ್ರಜಾಪ್ರಭುತ್ವ ಉಳಿಸಲು ಅವರು ಹೋರಾಟ ಮುಂದುವರಸಲಿದ್ದಾರೆ. ಇತ್ತೀಚೆಗೆ ನಡೆದ ಬಿಹಾರ ಚುನಾವಣೆ ನ್ಯಾಯಸಮ್ಮತವಾಗಿಲ್ಲ. ಆದ್ದರಿಂದ ಮರು ಚುನಾವನೆ ನಡೆಸುವ ಅಗತ್ಯ ಇದೆ. ಒಂದ ವೇಳೆ ಮರು ಚುನಾವಣೆ ನಡೆದರೆ ಫಲಿತಾಂಶ ಬದಲಾಗಲಿದೆ ಎಂದು ಒತ್ತಿ ಹೇಳಿದರು.

ದೇಶ ಬದಲಾವಣೆ ಬಯಲಿದೆ. ಸರ್ಕಾರ ಮಾಡುತ್ತಿರುವ ತಪ್ಪುಗಳನ್ನು ದೇಶದ ಯುವಕರು ಸಹಿಸುವುದಿಲ್ಲ. ಪ್ರಜಾಪ್ರಭುತ್ವ ಉಳಿಸಲು ಹೋರಾಟ ಮುಂದುವರೆಯಬೇಕಿದೆ ಎಂದು ವಾದ್ರಾ ಹೇಳಿದರು.

ಬಿಹಾರದ 243 ಸ್ಥಾನಗಳ ವಿಧಾನಸಭೆಯಲ್ಲಿ ಎನ್‌ ಡಿಎ ಮೈತ್ರಿಕೂಟ  202 ಸ್ಥಾನಗಳನ್ನು ಗಳಿಸಿದೆ. ಎನ್‌ ಡಿಎ ಮೈತ್ರಿಯ ಬಿಜೆಪಿ 89 ಮತ್ತು ಜೆಡಿಯು  85 ಸ್ಥಾನಗಳನ್ನು ಗಳಿಸಿದೆ. ಕಾಂಗ್ರೆಸ್‌ ಆರ್‌ ಜೆಡಿ ನೇತೃತ್ವದ ಮಹಾಘಟಬಂಧನ್‌ ಕೇವಲ 35 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.

More articles

Latest article