ದರ್ಶನ್ ಪತ್ನಿ ಹೇಳಿಕೆ ದಾಖಲು: ಪೊಲೀಸರ ಎದುರು ವಿಜಯಲಕ್ಷ್ಮಿ ಹೇಳಿದ್ದೇನು?

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಕಾಮಾಕ್ಷಿಪಾಳ್ಯ ಪೊಲೀಸರು ಮಹತ್ವದ ಬೆಳವಣಿಗೆಯೊಂದರಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಹೇಳಿಕೆಯನ್ನು ದಾಖಲಿಸಿಕೊಂಡರು.

ವಿಜಯಲಕ್ಷ್ಮಿ ಅವರಿಗೆ ಕಾಮಾಕ್ಷಿಪಾಳ್ಯ ಪೊಲೀಸರು ನೋಟಿಸ್ ನೀಡಿ, ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಪೊಲೀಸರ ನೋಟೀಸ್ ಅನ್ವಯ ಇಂದು ವಿಜಯಲಕ್ಷ್ಮಿ ಠಾಣೆಗೆ ಹಾಜರಾಗಿದ್ದರು.

ರೇಣುಕಾಸ್ವಾಮಿಯ ಹತ್ಯೆ ನಡೆದ ದಿನ ದರ್ಶನ್, ಪತ್ನಿ ವಿಜಯಲಕ್ಷ್ಮಿ ವಾಸವಾಗಿರುವ ನಿವಾಸಕ್ಕೆ ಬಂದು ಬಟ್ಟೆ ಬದಲಾಯಿಸಿಕೊಂಡು ಹೋಗಿದ್ದರು ಎಂದು ತನಿಖೆ ಸಂದರ್ಭದಲ್ಲಿ ತಿಳಿದುಬಂದಿತ್ತು. ಅಂದು ದರ್ಶನ್ ಹಾಕಿಕೊಂಡಿದ್ದ ಶೂ ಕೂಡ ಮನೆಯಲ್ಲೇ ಬಿಟ್ಟು ಬೇರೆ ಶೂ ಹಾಕಿಕೊಂಡುಹೋಗಿದ್ದರು. ಕೊಲೆಯ ದಿನ ದರ್ಶನ್ ಧರಿಸಿದ್ದ ಶೂಸನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಕೊಲೆ ನಡೆದ ದಿನ ದರ್ಶನ್ ಮನೆಗೆ ಬಂದಾಗ ಏನೇನೆಲ್ಲ ಮಾಡಿದರು ಎಂಬುದರ ಕುರಿತು ವಿಜಯಲಕ್ಷ್ಮಿ ಅವರ ಬಳಿ ಪೊಲೀಸರು ಪ್ರಶ್ನಿಸಿ ಇಂದು ಹೇಳಿಕೆ ದಾಖಲಿಸಿಕೊಂಡಿದ್ದಾರೆ.

More articles

Latest article

Most read