ಡಿ.6 ರಂದು ನಮ್ಮ ಮೆಟ್ರೊದಲ್ಲಿ 9.20 ಲಕ್ಷ ಪ್ರಯಾಣಿಕರ ಸಂಚಾರ

Most read

ಬೆಂಗಳೂರು: ಡಿ. 6 ರಂದು ನಮ್ಮ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ 9.20 ಲಕ್ಷ ಕ್ಕೂ ಅಧಿಕ ಪ್ರಯಾಣಿಕರು ಸಂಚಾರ ಮಾಡುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ ಎಂದು ಬೆಂಗಳೂರು ಮೆಟ್ರೊ ರೈಲ್‌ ಕಾರ್ಪೊರೇಷನ್‌ ಲಿ. ತಿಳಿಸಿದೆ. ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಮಾಹಿತಿ ಹಂಚಿಕೊಂಡಿರುವ ನಮ್ಮ ಮೆಟ್ರೊ, ಮೆಟ್ರೊ ಪ್ರಯಾಣಿಕರ ಸಂಚಾರದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಈ ಮೈಲಿಗಲ್ಲನ್ನು ಸಾಧ್ಯವಾಗಿಸಿದ ಬೆಂಗಳೂರು ಜನತೆಗೆ ಧನ್ಯವಾದ ತಿಳಿಸಿದೆ.

ಡಿ.6ರಂದು ಸಂಚರಿಸುವ 9,20,562ಪ್ರಯಾಣಿಕರ ಪೈಕಿ 1ನೇ ಮಾರ್ಗದಲ್ಲಿ 4.39 ಲಕ್ಷ ಪ್ರಯಾಣಿಕರು, ಮತ್ತು ಎರಡನೇ ಮಾರ್ಗದಲ್ಲಿ 3.12 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ. ಮೆಜೆಸ್ಟಿಕ್‌ ನಿಲ್ದಾಣದಲ್ಲಿ 1.67 ಲಕ್ಷ ಮಂದಿ ಮಾರ್ಗ ಬದಲಾವಣೆ ಮಾಡಿಕೊಂಡಿದ್ದಾರೆ ಎಂದೂ ಮಾಹಿತಿ ಹಂಚಿಕೊಂಡಿದೆ.

More articles

Latest article