ಆರತಕ್ಷತೆಗೆ ಸಿದ್ಧವಾಗುತ್ತಿದ್ದ ವರ ಹೃದಯಾಘಾತದಿಂದ ಸಾವು; ಜಮಖಂಡಿಯಲ್ಲೊಂದು ಮನಕಲಕುವ ಘಟನೆ

Most read

ಬಾಗಲಕೋಟೆ: ಇಡೀ ಕಲ್ಯಾಣ ಮಂಟಪ ಸಡಗರ ಸಂಭ್ರಮದಿಂದ ತೇಲುತ್ತಿತ್ತು. ವಧುವರರ ಕುಟುಂಬದವರು ಸಂತೋಷದಿಂದ ಆರತಕ್ಷತೆಗೆ ಆಗಮಿಸುತ್ತಿದ್ದ ಬಂಧುಮಿತ್ರರನ್ನು ಸ್ವಾಗತಿಸುತ್ತಿದ್ದರು. ವರ ವಧುವಿಗೆ ತಾಳಿ ಕಟ್ಟಿ ಆರತಕ್ಷತೆಗೆ ಸಿದ್ಧವಾಗಿ ನಿಂತಿದ್ದರು. ದುರಾದೃಷ್ಟವಶಾತ್‌ ವರ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಮರಣ ಹೊಂದಿರುವ ಹೃದಯ ವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದಿದೆ.

ಪ್ರವೀಣ್ ಕುರ್ನೆ ಮೃತ ವರ. ಜಮಖಂಡಿ ನಗರದ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ಪ್ರವೀಣ್ ಹಾಗೂ ಪೂಜಾ ಅವರ ಮದುವೆ ಸಮಾರಂಭ ಅದ್ಧೂರಿಯಾಗಿ ನಡೆದಿತ್ತು.. ಆರತಕ್ಷತೆ ಮುಗಿಯುವಷ್ಟರಲ್ಲಿ ಮಧುಮಗ ಪ್ರವೀಣ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಪ್ರವೀಣ್ ರಾಜ್ಯ ಸೈಕ್ಲಿಂಗ್ ಕಾರ್ಯದರ್ಶಿ ಶ್ರೀಶೈಲ ಕುರ್ನೆ ಅವರ ಪುತ್ರ. ಮೂಲತಃ ಜಮಖಂಡಿ ತಾಲೂಕಿನ ಕುಂಬಾರಹಳ್ಳಿ ಗ್ರಾಮದ ನಿವಾಸಿಗಳು. ಇಂದು ವರನ ಮನೆಯಲ್ಲಿ  ಬೆಳಗ್ಗೆ ದೈವದ ಅಕ್ಕಿಕಾಳು ಕಾರ್ಯ ನಡೆದಿತ್ತು. ಬಳಿಕ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಆರತಕ್ಷತೆ ಇಟ್ಟುಕೊಂಡಿದ್ದರು. ಬಂಧು-ಮಿತ್ರರು ನವ ದಂಪತಿಗೆ ಆರತಕ್ಷತೆ ಹಾಕಿ ಆಶೀರ್ವದಿಸುವ ಕೆಲವೇ ಕ್ಷಣಗಳಿಗೆ ಮುಂಚಿತವಾಗಿ ಈ ದುರಂತ ಸಂಭವಿಸಿದೆ.

More articles

Latest article