ಬೆಂಗಳೂರು: ಐಪಿಎಲ್ ಫೈನಲ್ ನಲ್ಲಿ ಅರ್ ಸಿಬಿ ಗೆಲುವು ಸಾಧಿಸಿದ್ದಕ್ಕೆ ರಾಜ್ಯದಲ್ಲಿ ಅಭಿಮಾನಿಗಳು ಖಾಲಿ ಮಾಡಿದ ಬಿಯರ್ ಎಷ್ಟಿರಬಹುದು? ಒಂದೇ ರಾತ್ರಿಯಲ್ಲಿ ಬರೋಬ್ಬರಿ ರೂ. 30.66 ಕೋಟಿ ಮೌಲ್ಯದ ಬಿಯರ್ ಕುಡಿದು ಕುಪ್ಪಳಿಸಿ ಸಂಭ್ರಮಿಸಿದ್ದಾಋೆ.
ಒಂದೇ ರಾತ್ರಿಯಲ್ಲಿ ರಾಜ್ಯದಲ್ಲಿ 1.48 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ. ಇದುವರೆಗೂ ಒಂದೇ ರಾತ್ರಿಯಲ್ಲಿ ಈ ಪ್ರಮಾಣದ ಬಿಯರ್ ಮಾರಾಟವಾಗಿರಲಿಲ್ಲ ಎಂದು ಮದ್ಯ ಮಾರಾಟಗಾರರ ಸಂಘ ತಿಳಿಸಿದೆ. ಆರ್ ಸಿಬಿ ಗೆಲವು ಸಾಧಿಸುತ್ತಿದ್ದಂತೆ ಅಭಿಮಾನಿಗಳು ಮತ್ತೆ ವೈನ್ ಸ್ಟೋರ್, ಬಾರ್ ಪಬ್ ಗಳಿಗೆ ದಾಂಗುಡಿಯಿಟ್ಟಿದ್ದಾರೆ. ಖುಷಿಗೆ ಒಂದಾದ ಮೇಲೊಂದು ಬಿಯರ್ ಬಾಟಲ್ ಖಾಲಿ ಮಾಡುತ್ತಾ ಹೋಗಿದ್ದಾರೆ. ಇನ್ನು ಹಾಟ್ ಡ್ರಿಂಕ್ಸ್ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಮಾರಾಟವಾಗಿದೆ ಎಂದು ತಿಳಿದು ಬಂದಿದೆ.
ಅಭಿಮಾನಿಗಳ ಸಂಭ್ರಮ ಇಂದು ರಾತ್ರಿಯೂ ಮುಂದುವರೆಯಲಿದೆ. ಅರ್ ಸಿಬಿ ತಂಡಕ್ಕೆ ಕೆಲವೇ ಕಷಣಗಳಲ್ಲಿ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಸನ್ಮಾನ ಸಮಾರಂಭ ನಡೆಯಲಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರೇ ಸನ್ಮಾನಿಸಲಿದ್ದಾರೆ. ನಂತರ ಐದು ಗಂಟೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ಮುಂದುವರೆಯಲಿದೆ.
ಹಾಗಾಗಿ ಇಂದು ರಾತ್ರಿಯೂ ಭರ್ಜರಿ ವ್ಯಾಪಾರವನ್ನು ನಿರೀಕ್ಷಿಸಲಾಗಿದೆ ಎಂದು ಮದ್ಯ ವ್ಯಾಪಾರಿಗಳು ಹೇಳುತ್ತಾರೆ.