ರಶ್ಮಿಕಾ ಮಂದಣ್ಣ ಈಗ ಫುಲ್ ಬ್ಯುಸಿ ನಟಿ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಬೇರೊಬ್ಬರ ಸಿನಿಮಾಗಳಿಗೂ ಬೆಂಬಲವಾಗಿ ನಿಲ್ಲುತ್ತಾರೆ. ಅದರಲ್ಲೂ ವಿಜಯ್ ದೇವರಕೊಂಡ ಫ್ಯಾಮಿಲಿಯ ಬೆಂಬಲಕ್ಕೆ ಸದಾ ಸಿದ್ಧ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಡುವಿನ ಗಾಸಿಪ್ ನಿನ್ನೆ ಮೊನ್ನೆಯದ್ದಲ್ಲ. ಗೀತಾ ಗೋವಿಂದಂ ಸಿನಿಮಾದಿಂದ ಶುರುವಾದದ್ದು ಇನ್ನು ನಿಂತಿಲ್ಲ. ನಿಲ್ಲುವುದಕ್ಕೆ ವಿಜಯ್ ಹಾಗೂ ರಶ್ಮಿಕಾ ಕೂಡ ಅವಕಾಶ ಕೊಡುತ್ತಿಲ್ಲ. ಎಲ್ಲಾದರೂ ಹೋಗಿದ್ದು, ಬಂದಿದ್ದರ ಇಂಟ್ ಅನ್ನು ನೀಡುತ್ತಲೇ ಇರುತ್ತಾರೆ. ಇದೀಗ ರಶ್ಮಿಕಾ ಮಂದಣ್ಣ ನೀಡಿದ ಹೇಳಿಕೆ ಮತ್ತಷ್ಟು ಪುಷ್ಠಿ ನೀಡಿದೆ.
ಆನಂದ್ ದೇವರಕೊಂಡ ಹೊಸ ಚಿತ್ರ ‘ಗಂ ಗಂ ಗಣೇಶ’ ಪ್ರಿರಿಲೀಸ್ ಕಾರ್ಯಕ್ರಮ ಸೋಮವಾರ ರಾತ್ರಿ ಅದ್ದೂರಿಯಾಗಿ ನೆರವೇರಿತು. ಈ ಕಾರ್ಯಕ್ರಮಕ್ಕೆ ರಶ್ಮಿಕಾ ಮಂದಣ್ಣ ಗೆಸ್ಟ್ ಆಗಿ ಬಂದಿದ್ದರು. ಈ ವೇಳೆ ಆನಂದ್ ದೇವರಕೊಂಡ, ರಶ್ಮಿಕಾ ಅವರನ್ನು ತರ್ಲೆ ಪ್ರಶ್ನೆಗಳಿಂದ ಲಾಕ್ ಮಾಡಿದ್ದಾರೆ. ಆ ಪನ್ ಮೂಮೆಂಟ್ ಅನ್ನು ಕಾರ್ಯಕ್ರಮದಲ್ಲಿ ನೆರೆದಿದ್ದವರೆಲ್ಲಾ ಎಂಜಾಯ್ ಮಾಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರಿಗೆ ಆನಂದ್ ದೇವರಕೊಂಡ, ನಿಮ್ಮ ಫೇವರಿಟ್ ನಟ ಯಾರು ಎಂದು ಕೇಳಿದ್ದಾರೆ. ಆಗ ನೆರೆದಿದ್ದ ಅಭಿಮಾನಿಗಳು ರೌಡಿ.. ರೌಡಿ.. ರೌಡಿ ಅಂತ ಕೂಗುವುದಕ್ಕೆ ಶುರು ಮಾಡಿದರು. ಆಗ ರಶ್ಮಿಕಾ, ನೀನು ನನ್ನ ಫ್ಯಾಮಿಲಿ ಕಣೋ ಆನಂದ್.. ಯಾಕೋ ಹಿಂಗೆ ತಗ್ಲಾಕ್ತೀಯಾ. ಸರಿ ಬಿಡಪ್ಪ ನನ್ನ ಫೇವರಿಟ್ ಹೀರೋ ರೌಡಿನೇ.. ಚಿಕ್ಕ ರೌಡಿ ಅಂತ ಕೂಡ ಹೇಳಬಹುದು ಎಂದಿದ್ದಾರೆ. ಇದನ್ನು ಕೇಳಿದ ನೆಟ್ಟಿಗರು ನಮಗೆ ಗೊತ್ತಾಯ್ತು ಗೊತ್ತಾಯ್ತು ಎಂದಿದ್ದಾರೆ.