ಅಬ್ಬಬ್ಬಾ.. ಜ್ಯೂ.ಎನ್‌ಟಿಆರ್ ಜೊತೆಗೆ ನಟಿಸೋದಕ್ಕೆ ರಶ್ಮಿಕಾ ಕೇಳಿದ್ದು 7 ಕೋಟಿ

Most read

ರಶ್ಮಿಕಾ ಮಂದಣ್ಣ(Rashmika Mandanna) ಬೆಳವಣಿಗೆ ಎಂಥವರಿಗೂ ಅಚ್ಚರಿ ಮೂಡಿಸದೇ ಇರದು. ಕನ್ನಡದಲ್ಲಿ ಸಾನ್ವಿಯಾಗಿ ಪರಿಚಯವಾಗಿದ್ದಷ್ಟೇ ಇಲ್ಲಿಂದ ಟಾಲಿವುಡ್, ಕಾಲಿವುಡ್ ಈಗ ಬಾಲಿವುಡ್ ನಲ್ಲೂ ಬಹುಬೇಡಿಕೆಯ ನಟಿಯೇ ಸರಿ. ನಟರಂತೆ ಕೋಟಿ ಕೋಟಿ ಸಂಭಾವನೆ ಪಡೆಯುವಂತ ನಟಿ. ಕನ್ನಡದಿಂದ ಬೇರೆ ಭಾಷೆಗೆ ನಟಿಯರು ಹೋಗಿದ್ದಾರೆ. ಆದರೆ ಹೆಸರು ಪಡೆಯುವುದು ಅಷ್ಟು ಸುಲಭವಲ್ಲ. ರಶ್ಮಿಕಾ ಮಂದಣ್ಣನಿಗೆ ಅದು ತುಂಬಾ ಸಲೀಸಾಗಿದೆ‌. ಇಷ್ಟು ಡಿಮ್ಯಾಂಡ್ ಇರುವ ನಟಿ ರಶ್ಮಿಕಾ ಸಂಭಾವನೆಯ ವಿಚಾರ ಈಗ ಸುದ್ದಿಯಲ್ಲಿದೆ.

ಇತ್ತಿಚೆಗಷ್ಟೇ ಪ್ರಶಾಂತ್ ನೀಲ್ ಮುಂದಿನ ಸಿನಿಮಾ ಯಾವುದು ಎಂಬ ಸುದ್ದಿ ಸದ್ದು ಮಾಡಿತ್ತು. ಜ್ಯೂನಿಯರ್ ಎನ್‌ಟಿಆರ್ (Jr.NTR) ಜೊತೆಗೆ ಸಿನಿಮಾ ಅನೌನ್ಸ್ ಮಾಡಿದ್ದರು. ಇದೀಗ ಇದೇ ಸಿನಿಮಾದಲ್ಲಿ ನಾಯಕಿಯಾಗಲೂ ರಶ್ಮಿಕಾ ಅವರಿಗೆ ಕೇಳಲಾಗಿದೆಯಂತೆ. ಜೂನಿಯರ್ ಎನ್‌ಟಿಆರ್ ಜೊತೆಗೆ ಹೆಜ್ಜೆ ಹಾಕುವುದಕ್ಕೆ ರಶ್ಮಿಕಾ ಮಂದಣ್ಣ ಕೇಳಿದ್ದು ಬರೋಬ್ಬರಿ ಏಳು ಕೋಟಿ ಸಂಭಾವನೆಯಂತೆ. ಪುಷ್ಪ ಸಿನಿಮಾ ಬಂದ್ಮೇಲೆ ರಶ್ಮಿಕಾ ಸಂಭಾವನೆಯನ್ನು ಹೆಚ್ಚಿಸಿಕೊಂಡು ಬಿಟ್ಟರಾ ಎಂಬ ಪ್ರಶ್ನೆ ಈಗ ಎಲ್ಲರನ್ನು ಕಾಡುತ್ತಿದೆ.

ಸಂಭಾವನೆ ಜೊತೆಗೆ ಪ್ರಶಾಂತ್ ನೀಲ್ ಅವರ ಬಳಿ ಪಾತ್ರದ ಬಗ್ಗೆಯೂ ಮಾತನಾಡಿದ್ದಾರೆ ಎನ್ನಲಾಗಿದೆ. ಪುಷ್ಪ ಸಿನಿಮಾದಲ್ಲಿ ಡಿಗ್ಲ್ಯಾಮ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ರೀತಿಯಾದಂತ ಪಾತ್ರವನ್ನೇ ಜನ ಮೆಚ್ವಿಕೊಂಡಾಡಿದ್ದಾರೆ. ಆ ಸಿನಿಮಾದ ಬಳಿಕ ಸಾಕಷ್ಟು ಖ್ಯಾತಿಯನ್ನು ಪಡೆದಿದ್ದಾರೆ. ಇದೀಗ ಪ್ರಶಾಂತ್ ನೀಲ್ ಬಳಿಯೂ ಡಿಗ್ಲ್ಯಾಮ್ ರೀತಿಯಾದಂತ ಲುಕ್ ಅನ್ನೇ ತೋರಿಸಿ ಎಂದು ಹೇಳಿದ್ದಾರಂತೆ. ನನ್ನ ಪಾತ್ರ ಸರಳವಾಗಿರಲಿ, ಅದರಲ್ಲೂ ಪಾತ್ರಕ್ಕೆ ಒತ್ತು ಕೊಡುವಂತೆ ಇರಲಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.

More articles

Latest article