ಮಹಿಳಾ ಪ್ರಯಾಣಿಕರಿಗೆ ಕಪಾಳಮೋಕ್ಷ ಮಾಡಿದ ರಾಪಿಡೊ ಚಾಲಕ; ದೂರು ದಾಖಲು

Most read

ಬೆಂಗಳೂರು: ಅತಿವೇಗದಲ್ಲಿ ಬೈಕ್‌ ಚಾಲನೆ ಮಾಡದಂತೆ ಎಚ್ಚರಿಕೆ ನೀಡಿದ್ದಕ್ಕೆ ಕೋಪಗೊಂಡ ರಾಪಿಡೊ ಬೈಕ್ ಸವಾರನೊಬ್ಬ ಮಹಿಳಾ ಪ್ರಯಾಣಿಕರೊಬ್ಬರಿಗೆ ರಸ್ತೆ ಮಧ್ಯೆದಲ್ಲೇ ಕಪಾಳಮೋಕ್ಷ ಮಾಡಿದ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಈ ಬೈಕ್ ಸವಾರನ ವಿರುದ್ಧ ಸಾರ್ವಜನಿಕರಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಜ್ಯೂಯಲರ್ಸ್‌ ಅಂಗಡಿಯೊಂದರ ಉದ್ಯೋಗಿಯಾಗಿದ್ದ ಮಹಿಳೆ ರಾಪಿಡೊ ಬೈಕ್ ಬುಕ್ ಮಾಡಿದ್ದರು. ಬೈಕ್ ಸವಾರನ ಅತಿವೇಗದ ಚಾಲನೆ ವಿರುದ್ಧ ಕೋಪಗೊಂಡ ಆಕೆ ಪ್ರಯಾಣವನ್ನು ಅರ್ಧದಲ್ಲೇ ಕೊನೆಗೊಳಿಸಲು ಆಯ್ಕೆ ಮಾಡಿದ್ದಳು. ಈ ವೇಳೆ ರಾಪಿಡೊ ಚಾಲಕ ಮಹಿಳೆಯನ್ನು ಪ್ರಶ್ನಿಸಿದ್ದಾನೆ. ನಂತರ ಮಾತಿಗೆ ಮಾತು ಬೆಳೆದ ಬೈಕ್‌ ಚಾಲಕ ಮಹಿಳೆಯ ಕಪಾಳಕ್ಕೆ ಹೊಡೆದಿದ್ದಾನೆ. ಈ ಏಟಿಗೆ ಮಹಿಳೆ ನೆಲಕ್ಕುರುಳಿದ್ದಾರೆ.

ಮಹಿಳೆ ಇಂಗ್ಲಿಷ್‌ ನಲ್ಲಿ ಚಾಲಕ ಕನ್ನಡದಲ್ಲಿ ಮಾತನಾಡುತ್ತಿದ್ದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ನಂತರ ಮಹಿಳೆ ಹಣ ಪಾವತಿಸಲು ಮುಂದಾದಾಗ ಆತ ನಿರಾಕರಿಸಿದ್ದಾನೆ. ಇವರ ಜಗಳವನ್ನು ಒಬ್ಬರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ವಿಡಿಯೋ ಗಮನಿಸಿದರೆ ಅಲ್ಲಿ ಸಾಕಷ್ಟು ಜನ ಸೇರಿದ್ದರೂ ಜಗಳವನ್ನು ಬಿಡಿಸಲು ಮುಂದಾಗದಿರುವುದು ಕಂಡು ಬಂದಿದೆ.

ಈ ಮಹಿಳೆ ಆರಂಭದಲ್ಲಿ ಕ ದೂರು ದಾಖಲಿಸಲು ಮುಂದಾಗಿಲ್ಲ. ಹೀಗಾಗಿ ಪೊಲೀಸರು ಗಂಭೀರವಲ್ಲದ ಅಪರಾಧ ಪ್ರಕರಣ  ದಾಖಲಿಸಿಕೊಂಡಿದ್ದಾರೆ. ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಎಫ್‌ ಐ ಆರ್‌ ದಾಖಲಿಸಿದ್ದಾರೆ. ಜಯನಗರ ಪೊಲೀಸ್ ಠಾಣೆಯಲ್ಲಿ ತನಿಖೆ ನಡೆಯುತ್ತಿದೆ.

ಕರ್ನಾಟಕ ಹೈಕೋರ್ಟ್ ನಿರ್ದೇಶನದಂತೆ ಇಂದಿನಿಂದ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಂಡಿದೆ. ಆದರೂ ಅಲ್ಲಲ್ಲಿ  ಬೈಕ್ ಟ್ಯಾಕ್ಸಿ ಸೇವೆ ಮುಂದುವರೆದಿದೆ. ಈ ಪ್ರಕರಣ ಅದಕ್ಕೊಂಡು ನಿದರ್ಶನವಾಗಿದೆ. ಬೈಕ್ ಟ್ಯಾಕ್ಸಿಗಳು ಕಾನೂನುಬದ್ಧವಾಗಿ ವಾಣಿಜ್ಯ ವಾಹನಗಳಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್ ನಲ್ಲಿ ವಾದಿಸಿತ್ತು.

More articles

Latest article