Sunday, July 14, 2024

ರಾಮನಗರದಲ್ಲಿ ಕಾಡಾನೆ ದಾಳಿಯಿಂದ ವ್ಯಕ್ತಿ ಮೃತ್ಯು

Most read

ರಾಮನಗರ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದೆ. ಇದೀಗ ಕನಕಪುರ ತಾಲೂಕಿನ ಗೌಡಹಳ್ಳಿ ಗ್ರಾಮದ ವ್ಯಕ್ತಿಯ ಮೇಲೆ ಆನೆ ದಾಳಿ ಮಾಡಿದೆ. ಪರಿಣಾಮ ಆ ವ್ಯಕ್ತಿ ಸಾವನ್ನಪ್ಪಿದ್ದಾರೆ.


ರಾಜು (50) ಮೃತ ವ್ಯಕ್ತಿ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಗಮ ಅರಣ್ಯದಲ್ಲಿ ಈ ವ್ಯಕ್ತಿ ದಾರಿ ತಪ್ಪಿ ಬಂದಿದ್ದು ಕಾಡಾನೆ ಆತನ ಮೇಲೆ ದಾಳಿ ಮಾಡಿದೆ ಎಂದು ತಿಳಿದುಬಂದಿದೆ.


ಇತ್ತೀಚೆಗಷ್ಟೇ ಕನಕಪುರದಲ್ಲಿ ಜಯಮ್ಮ (50) ಮೃತ ಮಹಿಳೆ, ವೆಂಕಲಕ್ಷ್ಮಮ್ಮ (45) ಗಂಭೀರವಾಗಿ ಗಾಯಗೊಂಡಿದ್ದರು. ಹಾಗೂ ಚನ್ನಪಟ್ಟಣ ತಾಲೂಕಿನಲ್ಲಿ ಆನೆ ತುಳಿತಕ್ಕೆ ಇಬ್ಬರು ಬಲಿಯಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೆ ಒಂಟಿ ಸಲಗ ದಾಳಿ ಮಾಡಿದೆ.


ಕನಕಪುರ ತಾಲೂಕಿನಲ್ಲಿ ಇತ್ತೀಚೆಗೆ ಕಾಡಾನೆ ದಾಳಿಗೆ 10 ಮಂದಿ ಸಾವಿಗೀಡಾದಂತಾಗಿದೆ. ಕಳೆದ 5 ತಿಂಗಳಲ್ಲಿ ಒಟ್ಟು 5 ಮಂದಿ ಕನಕಪುರದಲ್ಲಿ ಆನೆದಾಳಿಗೆ ಮೃತಪಟಟ್ಟಂತಾಗಿದೆ.

More articles

Latest article