ಬೆಂಗಳೂರು : ಬಿಸಿಲಿನ ತಾಪಮಾನದಿಂದ ತತ್ತರಿಸಿ ಹೋಗಿರುವ ಬೆಂಗಳೂರಿನ ಜನತೆಗೆ ಇಂದು ಭರ್ಜರಿ ಸುದ್ದಿ ಸಿಕ್ಕಿದೆ. ಮಳೆ ಇಲ್ಲದೆ ಹಲವಾರು ತಿಂಗಳಿನಿಂದ ಪರದಾಡುತ್ತಿದ್ದ ರಾಜಧಾನಿ ಬೆಂಗಳೂರಿನಲ್ಲಿ ಇಂದು ಭರ್ಜರಿ ಮಳೆ ಬಂದಿದೆ.
ಕಳೆದ 4 ತಿಂಗಳಿನಿಂದ ಕುಡಿಯುವ ನೀರಿಗೂ ಕಷ್ಟವಾಗಿದ್ದ ಕನ್ನಡಿಗರ ರಾಜಧಾನಿ ಬೆಂಗಳೂರಿನಲ್ಲಿ ಇಂದು ಮಳೆ ಬಂದಿದ್ದು ಜನರಿಗೆ ಸಾಕಷ್ಟು ಸಂತಸ ತಂದಿದೆ. ಕುಡಿಯುವ ನೀರು ಕೊಡುವ ಜಲಾಶಯಗಳು ಸಹ ಬತ್ತಿ ಹೋಗುತ್ತಿದ್ದು ಜೊತೆಗೆ ಅಂತರ್ಜಲ ಮಟ್ಟವು ಕೂಡ ಕುಸಿದು ಹೋಗಿತ್ತು. ಹೀಗಾಗಿ ಬೇಸಿಗೆ ಆರಂಭವಾಗುತ್ತಿದ್ದಂತೆ ಜನರು ನೀರಿಗಾಗಿ ಮತ್ತು ಮಳೆಗಾಗಿ ಸಾಕಷ್ಟು ಪ್ರಾರ್ಥನೆಗಳನ್ನು ಮಾಡುತ್ತಿದ್ದರು. ಇಂದು ಸಂಜೆ ಬೆಂಗಳೂರಿನ ಹಲವು ಕಡೆ ಮಳೆ ಆರಂಭವಾಗಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗುವ ಸಾಧ್ಯತೆಗಳಿದೆ.
ಬೆಂಗಳೂರಿನ ಹೊರವಲಯ ಮಹದೇವಪುರ, ಮರತ್ತಹಳ್ಳಿ, ಹೊಸಕೋಟೆ, ಆನೇಕಲ್ ಸೇರಿದಂತೆ ಹಲವು ಪ್ರದೇಶದಲ್ಲಿ ಮಳೆ ಸುರಿದಿದೆ. ಇನ್ನೂ ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಹಲವು ಪ್ರದೇಶದಲ್ಲಿ ಕೂಡ ಮಳೆ ಬಂದಿದೆ. ಇಂದು ಸಂಜೆ ಬಂದ ಮಳೆ ರಾಜಧಾನಿ ಬೆಂಗಳೂರು ಜನರಿಗೆ ಸಾಕಷ್ಟು ಖುಷಿ ತಂದಿದೆ.