ಮಳೆ ನೀರು ರಸ್ತೆಯಲ್ಲಿ ನಿಲ್ಲದಂತೆ ಶೋಲ್ಡರ್ ಡ್ರೈನ್‌ಗೆ ಸಮರ್ಪಕವಾಗಿ ಸಂಪರ್ಕ ಕಲ್ಪಿಸುವಂತೆ ಸೂಚನೆ

ಬೆಂಗಳೂರು :  ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪ್ರಮುಖ ರಸ್ತೆಗಳು, ಉಪ ಮುಖ್ಯರಸ್ತೆಗಳು ಹಾಗೂ ವಾರ್ಡ್ ಮಟ್ಟದ ರಸ್ತೆಗಳಲ್ಲಿ ವಿವಿಧ ಅನುದಾನದಗಳ ಅಡಿಯಲ್ಲಿ ನಡೆಯುತ್ತಿರುವ ರಸ್ತೆ ಮತ್ತು ಮೂಲಸೌಕರ್ಯ  ಕಾಮಗಾರಿಗಳ ಪ್ರಗತಿ, ಗುಣಮಟ್ಟ ಹಾಗೂ ಮಳೆಗಾಲದ ಪೂರ್ವಸಿದ್ಧತೆ ಕುರಿತು ವಿಶೇಷವಾಗಿ ಗಮನಹರಿಸುವ ಸಲುವಾಗಿ ಪೂರ್ವ ನಗರ ಪಾಲಿಕೆ ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ರವರು ಸ್ಥಳಕ್ಕೆ ಭೇಟಿ ನೀಡಿ ಸಮಗ್ರವಾಗಿ ಪರಿಶೀಲಿಸುವ ಮೂಲಕ ಅಧಿಕಾರಿಗಳಿಗೆ ಅಗತ್ಯ ತಾಂತ್ರಿಕ ಸೂಚನೆಗಳನ್ನು ನೀಡಿದರು.

ಪ್ರಮುಖ ಸ್ಥಳಗಳ ಕಾಮಗಾರಿಗಳ ಸ್ಥಿತಿಗತಿ

* ಹೆಚ್‌ಎಎಲ್ ಮುಖ್ಯರಸ್ತೆಯಿಂದ ಹೊರವರ್ತುಲ ರಸ್ತೆವರೆಗೆ  ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ ಅನುದಾನದ ಅಡಿಯಲ್ಲಿ ನಡೆಯುತ್ತಿರುವ  ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಯಲ್ಲಿ ರಸ್ತೆ ಅಭಿವೃದ್ಧಿ, ಚರಂಡಿ ವ್ಯವಸ್ಥೆ ಸುಧಾರಣೆ, ಪಾದಚಾರಿ ಮಾರ್ಗ ಅಭಿವೃದ್ಧಿ ಸೇರಿದಂತೆ  ಸಮಗ್ರ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

* ದೊಡ್ಡನೆಕ್ಕುಂದಿ – ರಾಮ ದೇವಸ್ಥಾನ ಸಮೀಪದಲ್ಲಿ ನಗರೋತ್ಥಾನ ಅನುದಾನದ ಅಡಿಯಲ್ಲಿ  ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿಗಳನ್ನು ಪರಿಶೀಲಿಸಿ, ರಸ್ತೆಯ ದೀರ್ಘಾಯುಷ್ಯ ಹಾಗೂ ಗುಣಮಟ್ಟವನ್ನು ಕಾಪಾಡಲು ಸರಿಯಾದ ಕ್ಯೂರಿಂಗ್ ಮತ್ತು  ಫಿನಿಷಿಂಗ್ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸೂಚಿಸಿದರು.

* ಅಶ್ವತ್ ನಗರದ ಎಇಸಿಎಸ್ ಲೇಔಟ್ ನಲ್ಲಿ  ವಾರ್ಡ್ ಅನುದಾನದ ಅಡಿಯಲ್ಲಿ  ರಸ್ತೆ ಅಭಿವೃದ್ಧಿ ಕಾಮಗಾರಿ, ರಸ್ತೆ ದುರಸ್ತಿ, ಡಾಂಬರೀಕರಣ ಹಾಗೂ  ಚರಂಡಿ ಸುಧಾರಣೆ ಕಾಮಗಾರಿಗಳು ನಡೆಯುತ್ತಿದ್ದು, ಅವುಗಳನ್ನು ಶೀಘ್ರವಾಗಿ ಮತ್ತು ಉತ್ತಮ ಗುಣಮಟ್ಟದೊಂದಿಗೆ ಪೂರ್ಣಗೊಳಿಸಲು ಸೂಚಿಸಿದರು.

ತಾಂತ್ರಿಕ ನಿರ್ದೇಶನಗಳು

* ಪಾದಚಾರಿ ಮಾರ್ಗಗಳ ಮೇಲಿನ ಎಲ್ಲಾ ಅಕ್ರಮ ಒತ್ತುವರಿಗಳನ್ನು ತಕ್ಷಣ ತೆರವುಗೊಳಿಸಿ, ಪಾದಚಾರಿಗಳಿಗೆ ಸುರಕ್ಷಿತ ಮತ್ತು ಅಡೆತಡೆರಹಿತ  ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.

* ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಂಡ ತಕ್ಷಣವೇ ಚರಂಡಿಗಳ ಡೀಸಿಲ್ಟಿಂಗ್ ಕಾಮಗಾರಿಯನ್ನು ಕೈಗೊಂಡು ಮಳೆನೀರು ಸರಾಗವಾಗಿ ಹರಿಯುವಂತೆ ಚರಂಡಿಗಳಲ್ಲಿ ಇಳಿಜಾರು ವ್ಯವಸ್ಥೆ ಕಲ್ಪಿಸಲು  ನಿರ್ದೇಶನ ನೀಡಿದರು.

* ಮಳೆ ನೀರು ರಸ್ತೆಯಲ್ಲಿ ನಿಲ್ಲದಂತೆ ಶೋಲ್ಡರ್ ಡ್ರೈನ್ ಗೆ ಮಳೆನೀರು ಸುಗಮವಾಗಿ ಹರಿಯುವಂತೆ ಸಮರ್ಪಕವಾಗಿ ಸಂಪರ್ಕ ಕಲ್ಪಿಸಲು ಹಾಗೂ ರಸ್ತೆ ಬದಿಯಲ್ಲಿನ ಚರಂಡಿಗೆ ಗ್ರೇಟಿಂಗ್ಸ್ ಗಳನ್ನು ಅಳವಡಿಸುವ ಮೂಲಕ ತ್ಯಾಜ್ಯವು ಚರಂಡಿಗೆ ಸೇರದಂತೆ ಸೂಕ್ತ  ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು.

* ದೊಡ್ಡನೆಕ್ಕುಂದಿ ಸರ್ಕಲ್ ಸಮೀಪದಲ್ಲಿರುವ ಕಸದ ವರ್ಗಾವಣೆ ಕೇಂದ್ರದಲ್ಲಿ ಲೀಚೇಟ್ ಸಮಸ್ಯೆಯಿಂದಾಗಿ  ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಕೂಡಲೇ ವರ್ಗಾವಣೆ ಕೇಂದ್ರವನ್ನು ಸ್ಥಳಾಂತರಿಸಲು ಸೂಚಿಸಿದರು.  

ಸಮಗ್ರ ಅಭಿವೃದ್ಧಿಗೆ ಆದ್ಯತೆ : ನಗರ ಪಾಲಿಕೆ ವ್ಯಕ್ತಿಯಲ್ಲಿ ರಸ್ತೆ ಗುಣಮಟ್ಟವನ್ನು ಸುಧಾರಿಸುವುದು, ಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುವುದು, ಪಾದಚಾರಿಗಳಿಗೆ ಸುರಕ್ಷಿತ ಸಂಚಾರ ವ್ಯವಸ್ಥೆ ಒದಗಿಸುವುದು ಹಾಗೂ ಮಳೆಗಾಲದ ಪೂರ್ವಸಿದ್ಧತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಬೆಂಗಳೂರು ಪೂರ್ವ ನಗರ ಪಾಲಿಕೆ ಕಾರ್ಯಪ್ರವೃತ್ತವಾಗಿದೆ  ಎಂದು ಅಪರ ಆಯುಕ್ತರು ಈ ಸಂದರ್ಭದಲ್ಲಿ ತಿಳಿಸಿದರು.

More articles

Latest article

Most read