ಕೋಲಾರ;ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ದಾಳಿ:8 ಆರೋಪಿಗಳ ಬಂಧನ

Most read

ಕೋಲಾರ:ಜಿಲ್ಲೆಯ ಮಾಲೂರು ನಗರ ಠಾಣೆ ಪೊಲೀಸರು ಎರಡು ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ದಾಳಿ ನಡೆಸಿ 8 ಮಂದಿ ಆರೋಪಿಗಳನ್ನು ಬಂಧಿಸಿ ಇಬ್ಬರು ಸಂತ್ರಸ್ತೆಯರನ್ನು ರಕ್ಷಿಸಿದ್ದಾರೆ.

ಕೋಲಾರ- ಮಾಲೂರು ರಸ್ತೆಯಲ್ಲಿರುವ ವೆಂಕಟ್ ಮೋಹನ್ ಬಿಲ್ಡಿಂಗ್ ಹಾಗೂ ಆರ್ ಎಫ್ ರಸ್ತೆಯ ನಟರಾಜ್ ಎರಡು ಕಟ್ಟಡಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ ಪೊಲೀಸರು  ಹೊರ ರಾಜ್ಯಗಳಿಂದ ಮಹಿಳೆಯರನ್ನು ಕರೆಸಿ ವೇಶ್ಯಾವಾಟಿಕೆ ನಡೆಸಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದರು.

ವೆಂಕಟ್ ಮೋಹನ್, ವೆಂಕಟರಾಮಪ್ಪ, ಭೈರೇಗೌಡ, ನಟರಾಜ್, ಯಶೋಧಮ್ಮ, ಬೆಂಗಳೂರಿನ ಜಮುನಾ, ಮುನಿರಾಜು ಹಾಗೂ ಮಾಧವಿ ಬಂಧಿತ ಆರೋಪಿಗಳು. ಇವರಿಂದ ರೂ.2500 ನಗದು ಹಾಗೂ ಆರು ಮೊಬೈಲ್‌ ಗಳನ್ನು ವಶಪಡಿಸಿಕೊಳ್ಳಲಾಗಿದೆ.

More articles

Latest article