ರಾಯಚೂರು: ಜಿಲ್ಲೆಯ ಮಸ್ಕಿಯಲ್ಲಿ 4000 ವರ್ಷಗಳ ಹಿಂದೆಯೇ ಜನವಸತಿ ಇತ್ತು: ಉತ್ಖನನ ವೇಳೆ ಕುರುಹುಗಳು ಪತ್ತೆ

Most read

ರಾಯಚೂರು: ಜಿಲ್ಲೆಯ ಮಸ್ಕಿಯಲ್ಲಿ 4000 ವರ್ಷಗಳ ಹಿಂದಿನ ಮೌರ್ಯ ಚಕ್ರವರ್ತಿ ಅಶೋಕನ ಕಾಲದಲ್ಲಿ ಜನವಸತಿ ಇತ್ತು ಎಂದು ಉತ್ಖನನದಿಂದ ತಿಳಿದು ಬಂದಿದೆ.ಆ ಕಾಲದ ವಿವಿಧ ರೀತಿಯ  ವಸ್ತುಗಳು ಪತ್ತೆಯಾಗಿವೆ. 

ಅಮೆರಿಕ ಕೆನಡಾ ಮತ್ತು ಭಾರತದ 20ಕ್ಕೂ ಹಚ್ಚು ಇತಿಹಾಸ ತಜ್ಞರು ಸಂಶೋದನೆ ನಡೆಸಿದ್ದಾರೆ.  ಅಮೆರಿಕದ ಸ್ಕ್ಯಾನ್ ಪೋರ್ಡ್ ವಿವಿ ಪ್ರಾಧ್ಯಾಪಕ ಆ್ಯಂಡ್ರಿಮ್ ಎಂ. ಬವೆರ್, ಕೆನಡಾದ ಮ್ಯಾಕ್ ಗಿಲ್ ವಿವಿಯ ಪೀಟರ್ ಜಿ. ಜೋಹಾನ್ಸನ್ ದೆಹಲಿ-ಎನ್‌ಸಿಆರ್‌ನ ಶಿವ್ ನಾಡರ್ ವಿಶ್ವವಿದ್ಯಾಲಯದ ಹೇಮಂತ್ ಕಡಂಬಿ ಪ್ರಮುಖರು. ಕಾರ್ಯಾಚರಣೆ ನಡೆಸುವ ಮುನ್ನ ಸಂಶೋಧಕರ  ತಂಡ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್​​ಐ) ಅನುಮತಿಯನ್ನು ಪಡೆದುಕೊಂಡಿತ್ತು.

ಮಸ್ಕಿ ಪಟ್ಟಣದ ಬೆಟ್ಟದ ಪ್ರದೇಶದಲ್ಲಿ ಒಟ್ಟು 271 ಸ್ಥಳಗಳನ್ನು ಗುರುತಿಸಿ ಉತ್ಖನನ ನಡೆಸಲಾಗಿದ್ದು, 11 ರಿಂದ 14ನೇ ಶತಮಾನದವರೆಗಿನ ಸಾಮಾನ್ಯ ಜನರ ಜೀವನ ಮಟ್ಟ, ಆಹಾರ ಪದ್ಧತಿ ಹೇಗಿತ್ತು ಎಂಬುದರ ಬಗ್ಗೆ ಅಧ್ಯಯನ ನಡೆಸಲಾಗಿತ್ತು. ವಿವಿಧ ಗಾತ್ರದ ಅರೆಯುವ ಕಲ್ಲುಗುಂಡು, ಪ್ರಾಣಿಗಳ ಬೇಟೆಗೆ ಬಳಸುವ ಗುಂಡುಗಳು, ಚೂಪಾದ ಕೊಡಲಿ, ಚಪ್ಪಟೆ ಆಕಾರದ ಆಯುಧಗಳು, ಮಣ್ಣಿನ ಹೂಜಿಯ ತುಂಡು ಪತ್ತೆಯಾಗಿವೆ. ಮನೆಯ ಆಕಾರ, ಮಣ್ಣು ಮತ್ತು ಕಲ್ಲಿನಿಂದ ಕಟ್ಟಿದ ಮನೆಗಳು, ಮಣ್ಣಿನ ಪಾತ್ರೆಗಳು, ಆ ಕಾಲದ ಜನ ಮಡಿಕೆಯಲ್ಲಿಟ್ಟಿದ್ದ ದವಸ-ಧಾನ್ಯಗಳು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮಲ್ಲಿಕಾರ್ಜುನ ದೇವಸ್ಥಾನದ ಮ್ಲಲಿಕಾರ್ಜುನ ಬೆಟ್ಟ ಮತ್ತು ಪಟ್ಟಣದ ಒಳಗಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಸುತ್ತಲೂ ಸಂಶೋಧಕರು ಉತ್ಖನನ ನಡೆಸಿದ್ದು, ಈ ಭಾಗದಲ್ಲಿ ನಾಲ್ಕು ಸಾವಿರ ವರ್ಷಗಳ ಹಿಂದಿನ ವಿವಿಧ ಕಲಾಕೃತಿಗಳು ಮತ್ತು ಇತರ ಉಪಕರಣಗಳನ್ನು ಪತ್ತೆಹಚ್ಚಿದ್ದಾರೆ, ಇದು ಒಂದು ಅಭಿವೃದ್ಧಿ ಹೊಂದುತ್ತಿರುವ ವಸಾಹತು ಆಗಿರಬೇಕೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸುಮಾರು 4,000 ವರ್ಷಗಳ ಹಿಂದೆ ಮಸ್ಕಿಯಲ್ಲಿ ಮಾನವ ವಸಾಹತು ಇತ್ತು ಎಂಬುದಕ್ಕೆ ನಮಗೆ ಪುರಾವೆಗಳು ಸಿಕ್ಕಿವೆ ಎಂದು ಕಡಂಬಿ ದೃಢಪಡಿಸಿದ್ದಾರೆ.

More articles

Latest article