ಗರ್ಭಿಣಿ ದೀಪಿಕಾ ನಡಿಗೆ ಟ್ರೋಲ್ ಮಾಡಿದವರಿಗೆ ಆಲಿಯಾ ಭಟ್ ಕಡೆಯಿಂದ ಸಖತ್ ಕ್ಲಾಸ್

ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಇಬ್ಬರು ಪ್ರೇಮಿಗಳಾಗಿದ್ದವರು. ಆದರೆ ರಣಬೀರ್ ಕಪೂರ್ ಬಿಟ್ಟು ಹೋದ ಮೇಲೆ ದೀಪಿಕಾ ಖಿನ್ನತೆಗೂ ಒಳಗಾಗಿದ್ದರು‌. ಈಗ ಇಬ್ಬರಿಗೂ ಬೇರೆ ಬೇರೆ ಮದುವೆಯಾಗಿದೆ. ಮಗು ಕೂಡ ಆಗ್ತಿದೆ. ದೀಪಿಕಾ ತನ್ನ ಗಂಡನ ಪ್ರೇಯಸಿ ಎನ್ನುವುದಕ್ಕಿಂತ ಆಲಿಯಾ ಭಟ್ ಒಬ್ಬ ಹೆಣ್ಣು ಮಗಳು ಎಂಬುದು ಮೊದಲ ಮಾನವೀಯತೆಯ ದೃಷ್ಟಿ. ಅದಕ್ಕೆಂದೆ ಟ್ರೋಲ್ ಮಾಡಿದವರಿಗೆ ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ.

ಇತ್ತಿಚೆಗೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ವೋಟ್ ಮಾಡುವುದಕ್ಕೆ ಬಂದಿದ್ದರು. ಗರ್ಭಿಣಿಯಾಗಿರುವ ದೀಪಿಕಾರನ್ನು ಪತಿ ರಣಬೀರ್ ಸಿಂಗ್ ಕೈ ಹಿಡಿದು, ಎಚ್ಚರಿಕೆಯಿಂದ ಕರೆದುಕೊಂಡು ಹೋದರು. ಇದು ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಬಿದ್ದಿತ್ತು. ಈ ವಿಡಿಯೋಗಳನ್ನು ನೋಡಿದ ಕೆಲವರು ದೀಪಿಕಾ ಅವರ ನಡಿಗೆಯ ವಿಚಾರವಾಗಿ ಕೆಟ್ಟದಾಗಿ ಮಾತನಾಡುವುದಕ್ಕೆ ಶುರು ಮಾಡಿದ್ದಾರೆ. ಅದು ಸೋಷಿಯಲ್ ಮೀಡಿಯಾದಲ್ಲಿಯೇ ಅಷ್ಟು ಕೆಟ್ಟದಾಗಿ ಪೋಸ್ಟ್ ಹಾಕಿದ್ದಾರೆ.

‘ಅವಳು ಗರ್ಭಿಣಿಯಲ್ಲ, ಇದು ಮುಜುಗರದ ಸಂಗತಿ, ಅವಳ ನಡಿಗೆಯ ಶೈಲಿಯು ಏನು ಅಡಗಿದೆ ಎಂದು ಎಲ್ಲವನ್ನೂ ಸ್ಪಷ್ಟವಾಗಿ ತೋರಿಸುತ್ತದೆ, ಫನ್ನಿ ವಾಕ್’ ಅಂತೆಲ್ಲಾ ಕಮೆಂಟ್ ಗಳನ್ನು ಹಾಕುತ್ತಾ ಟ್ರೋಲ್ ಮಾಡಿದ್ದರು. ಇದನ್ನು ಗಮನಿಸಿದ ಆಲಿಯಾ ಭಟ್ ನನಗ್ಯಾಕೆ ಎಂದು ಸುಮ್ಮನೆ ಆಗದೆ, ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಯಾಕಂದ್ರೆ ಆಲಿಯಾ ಕೂಡ ಈಗ ಮಗುವಿನ ತಾಯಿ.

‘ಡಿಯರ್ ಸೋಷಿಯಲ್‌ ಮೀಡಿಯಾ. ದೀಪಿಕಾ ಪಡುಕೋಣೆ ತನ್ನ‌ ಕರ್ತವ್ಯ ಹಾಗೂ ಮತ ಚಲಾಯಿಸಲು ಹೊರ ಬಂದಿದ್ದರು. ಆಕೆಯ ದೇಹ ಅಥವಾ ಗರ್ಭಧಾರಣೆಯ ಬಗ್ಗೆ ನಿಮ್ಮ ಪ್ರತಿಕ್ರಿಯೆಯನ್ನು ಅವರು ಕೇಳಲಿಲ್ಲ. ಅವರ ಜೀವನದ ಯಾವುದೇ ಅಂಶದ ಬಗ್ಗೆ ಪ್ರತಿಕ್ರಿಯೆ ನೀಡಲು ನಿಮಗೆ ಹಕ್ಕಿಲ್ಲ. ಇದನ್ನು ಇಲ್ಲಿಗೆ ನಿಲ್ಲಿಸಿ, ಸರಿಯಾಗಿ ವರ್ತಿಸುವುದನ್ನು ಕಲಿಯಿರಿ’ ಎಂದು ಹಾಕಿದ್ದಾರೆ. ಆಲಿಯಾ ಭಟ್ ನಡೆಗೆ ಫ್ಯಾನ್ಸ್ ಬಹುಪರಾಕ್ ಹಾಕಿದ್ದಾರೆ.

More articles

Latest article

Most read