ಅಣ್ಣಾವ್ರು, ವಿಷ್ಣುವರ್ಧನ್, ಅಂಬರೀಶ್ ಅವ್ರು 90 ವರ್ಷದಿಂದ ಕಟ್ಟಿದ ಸಿನಿಮಾವಿದು : ಪ್ಯಾನ್ ಇಂಡಿಯಾ ಬಗ್ಗೆ ಆಕ್ರೋಶ ಹೊರ ಹಾಕಿದ ಒಳ್ಳೆ ಹುಡುಗ ಪ್ರಥಮ್

Most read

ಕನ್ನಡ ಚಿತ್ರರಂಗ ಸಾಕಷ್ಟು ನಷ್ಟದಲ್ಲಿ ಸಾಗುತ್ತಿದ್ದು ಹೊಸಬರ ಚಿತ್ರಗಳೇ ವಾರಪೂರ್ತಿ ರಿಲೀಸ್ ಆಗುತ್ತಿದ್ದು, ಕಲೆಕ್ಷನ್ ಇಲ್ಲದೆ ಥಿಯೇಟರ್ ಮಾಲೀಕರು ಕೂಡ ಒದ್ದಾಡುತ್ತಿದ್ದಾರೆ. ಇದಕ್ಕೆಲ್ಲಾ ಪ್ಯಾನ್ ಇಂಡಿಯಾನೇ ಕಾರಣ ಎಂದು ಹಲವರು ವಾದಿಸುತ್ತಾರೆ. ಪ್ಯಾನ್ ಇಂಡಿಯಾ ಕ್ರೇಜ್ ಶುರುವಾದಾಗಿನಿಂದ ಸ್ಟಾರ್ ಗಳ ಸಿನಿಮಾಗಳು ಕಡಿಮೆಯಾಗಿವೆ. ಹೀಗಾಗಿಯೇ ನಷ್ಟದ ಬಾಗಿಲು ತೆರೆದಿದೆ ಎಂದೇ ಹೇಳಲಾಗುತ್ತಿದೆ. ಇದೀಗ ಒಳ್ಳೆ ಹುಡುಗ ಪ್ರಥಮ್ ಕೂಡ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ.

ನಮಗೆ ಪ್ಯಾನ್ ಇಂಡಿಯಾನೆ ಬೇಡ. ನಿಮ್ಮಿಂದ ಆಗಬೇಕಾಗಿದ್ದಿದ್ದು ಏನು ಇಲ್ಲ. ಈಗಿನ ಯುವಕರಿಗೆ ಬುದ್ದಿ ಇದೆಯೋ ಇಲ್ಲವೋ ಗೊತ್ತಿಲ್ಲ. ನಿಮಗೆ ಬ್ಲ್ಯಾಕ್ ಟಿಕೆಟ್ ಎಂದರೆ ಏನು ಗೊತ್ತೆನ್ರೋ. ಬ್ಲ್ಯಾಕ್ ಟಿಕೆಟ್ ಖರೀದಿ ಮಾಡಿ ಸಿನಿಮಾ ನೋಡುವ ಅನುಭವ ಗೊತ್ತಾ..? 10.30ರ ಶೋಗೆ ಬೆಳಗ್ಗೆನೆ ಹೋಗಿ ಟಿಕೆಟ್ ಸಿಕ್ಕಿಲ್ಲ ಅಂದ್ರೆ ಕಿತ್ತಾಡಿಕೊಂಡು ಟಿಕೆಟ್ ತೆಗೆದುಕೊಂಡು ಸಿನಿಮಾ ನೋಡುತ್ತಿದ್ದರು. ಅದು ಚಿತ್ರರಂಗ, ಅದು ಸುವರ್ಣ ಯುಗ. ಅದು ನಿಜವಾದ ಚಿತ್ರರಂಗದ ಏಳಿಗೆ ಅಂದರೆ‌ ಎಂದು ವಿಡಿಯೋ ಮೂಲಕ ಹೇಳಿದ್ದಾರೆ.

ಇದೇ ವೇಳೆ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಮಾತನಾಡಿ, ಮೂರು ವರ್ಷಕ್ಕೊಂದು ಪ್ಯಾನ್ ಇಂಡಿಯಾ ಸಿನಿಮಾ ಬಂದರೆ ಏನು ಸಾರ್ ಮಾಡೋಣಾ..? ಒಂದು ಥಿಯೇಟರ್ ಒಡೆದು ಹಾಕುತ್ತಿದ್ದಾರೆ ಎಂದರೆ ಏನು ಯೋಚನೆ ಮಾಡಬೇಕು ಗೊತ್ತಾ..? ನಂದು ಐದು ಸಿನಿಮಾ ಸೋತಾಗ ಏನಾಗಬೇಕೋ, ಒಂದು ಥಿಯೇಟರ್ ಮುಚ್ಚಿದಾಗ ಅದಾಗಬೇಕು. ಅಣ್ಣಾವ್ರು, ವಿಷ್ಣುವರ್ಧನ್, ಅಂಬರೀಶ್ ಅಂತವ್ರು 90 ವರ್ಷದಿಂದ ಕಟ್ಟಿದ ಸಿನಿಮಾವಿದು. ಮುಂದಿನ ಪೀಳಿಗೆಗೆ ಸಿನಿಮಾ ಕೊಡುವುದಕ್ಕೆ ಆಗುತ್ತಾ..? ಎಂದು ಪ್ರಶ್ನಿಸಿದ್ದಾರೆ.

More articles

Latest article