ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿರುವ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ರಾಜಸ್ಥಾನದಿಂದ ನಾಯಿ ಮಾಂಸ ತುಂಬಿರುವ ಬಾಕ್ಸ್‌ಗಳು ಬಂದಿವೆ ಎಂದು ಹೇಳಿ ಪ್ರತಿಭಟನೆ ಮಾಡಿದ್ದ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಅವರನ್ನು ಬಂಧಿಸಿದ್ದ ಪೊಲೀಸರು ಅವರಿಗೆ ಲಾಕಪ್ ನಲ್ಲಿ ಬಟ್ಟೆ ಬಿಚ್ಚಿ ಕೂರಿಸುವ ಮೂಲಕ ಅವರನ್ನು ಅಪಮಾನಿಸಿದ್ದಾರೆಂದು ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಿಸಿ ACP ಚಂದನ್ ಅವರಿಗೆ ಠಾಣೆಗೆ ಬರ್ತಿನಿ ನೀವು ಇರಬೇಕು ಎಂದು ಧಮ್ಕಿ ಹಾಕಿದ್ದಾರೆ.
ಹೌದು, ಈ ಕುರಿತಂತೆ ಜು. 30ರಂದು (ಮಂಗಳವಾರ) ಟ್ವೀಟ್ ಮಾಡಿರುವ ಅವರು, “ಸಹೋದರ ಪುನೀತ್ ಕೆರೆಹಳ್ಳಿ ಬಿಡುಗಡೆ ಆಗಿದ್ದಾನೆ. ಆತನನ್ನು ಠಾಣೆಯಲ್ಲಿ ಬೆತ್ತಲುಗೊಳಿಸಿ ಹಿಂಸೆ ಕೊಟ್ಟಿರುವ ACP ಚಂದನ್, ನಾಳೆ ಸ್ಟೇಷನ್ ಗೆ ಬರ್ತೀನಿ, ನೀವು ಇರಬೇಕು’’ ಎಂದು ಧಮ್ಕಿ ಹಾಕುವ ರೀತಿ ಟ್ವೀಟ್ ಮಾಡಿದ್ದಾರೆ.
“ನಾಳೆ ಬೆಳಗ್ಗೆ ಬಸವೇಶ್ವರನಗರ ACP ಆಫೀಸ್ ಎದುರು 10 ಗಂಟೆಗೆ ಬನ್ನಿ…’’ ಎಂದು ಬಸವೇಶ್ವರ ನಗರ ಪೊಲೀಸ್ ಠಾಣೆಯ ಫೋಟೋ ಹಾಕಿ ಸಾರ್ವಜನಿಕರಿಗೆ ಅವರು ಆಹ್ವಾನ ನೀಡಿದ್ದಾರೆ. ಅದರ ಜೊತೆಗೆ, ಆ ಠಾಣೆಗೆ ಆಗಮಿಸಲು ಸಾರ್ವಜನಿಕರಿಗೆ ಸಹಾಯವಾಗುವಂತೆ ಗೂಗಲ್ ಮ್ಯಾಪ್ ನ ಲಿಂಕ್ ಕೂಡ ಹಾಕಿ ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನ ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಜೈಪುರದಿಂದ ರೈಲೊಂದರಲ್ಲಿ ಬಂದಿದ್ದ ಬಾಕ್ಸ್ ಗಳಲ್ಲಿ ನಾಯಿ ಮಾಂಸ ತುಂಬಿದೆ ಎಂದು ಆರೋಪಿಸಿ ಪುನೀತ್ ಕೆರೆಹಳ್ಳಿ ಅಂಡ್ ಗ್ಯಾಂಗ್ ಗಲಾಟೆ ಮಾಡಿದ್ದಾರೆ. ನಂತರ ಪೊಲೀಸರ ಕರ್ತವ್ಯದ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ ದೊಡ್ಡ ಗಲಾಟೆ ಮಾಡುವುದಕ್ಕೆ ಮುಂದಾದಾಗ ಆತನನ್ನು ಅರೆಸ್ಟ್ ಮಾಡಿ ಬಂಧಿಸಿದ್ದರು. ನಂತರ ಆತನನ್ನು ಬೇಲ್ ಮೇಲೆ ಬಿಡುಗಡೆ ಸಹ ಮಾಡಲಾಗಿತ್ತು.
ಇದು ನಾಯಿ ಮಾಂಸವೇ ಅಥವಾ ಕುರಿ ಮಾಂಸವೇ ಎಂದು FSL ರಿಪೋರ್ಟ್ ಬಂದಿದ್ದು, ಇದು ನಾಯಿ ಮಾಂಸ ಅಲ್ಲ ಕುರಿ ಮಾಂಸ ಎಂದು ವರದಿ ಬಂದಿದೆ. ಈಗ ಏನು ಕ್ರಮ ಕೈಗೊಳ್ಳುತ್ತದೆ ಸರ್ಕಾರ ಎಂಬುದನ್ನು ಕಾದು ನೋಡಬೇಕಿದೆ.
ಈ ಕುರಿತು ಭವ್ಯ ನರಸಿಂಹಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು X ನಲ್ಲಿ ಹಲವಾರು ಜನ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು ಅದರ ಲಿಂಕ್‌ಗಳು ಇಲ್ಲಿವೆ….