ಬೆಂಗಳೂರು: ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಎಸ್ ಐ ಟಿ ಕಸ್ಟಡಿಯಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ನಾಲ್ಕನೇ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊನ್ನೆಯಷ್ಟೇ ಪ್ರಜ್ವಲ್ ರೇವಣ್ಣನನ್ನು ಮತ್ತೆ ನಾಲ್ಕು ದಿನಗಳ ಎಸ್ ಐಟಿ ಕಸ್ಟಡಿಗೆ ಒಪ್ಪಿಸಲಾಗಿತ್ತು. ಈ ನಡುವೆ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ಬೆಂಗಳೂರಿನ 92ನೇ ಸೆಷನ್ಸ್ ಕೋರ್ಟ್ ನಿಂದ ಜಾಮೀನು ಅರ್ಜಿ ವಜಾಗಳಿಸಿದ್ದು, ಪ್ರಜ್ವಲ್ ರೇವಣ್ಣ ಹೈಕೋರ್ಟ್ ಮೊರೆ ಹೋಗುವ ಸಂಭವವಿದೆ.
ಯುವತಿಯರಿಗೆ ಆಮಿಷ ನೀಡಿ, ಬೆದರಿಸಿ ಅತ್ಯಾಚಾರ ಎಸಗಿದ್ದಲ್ಲದೇ ತನ್ನ ಲೈಂಗಿಕ ದೌರ್ಜನ್ಯವನ್ನು ತಾನೇ ವಿಡಿಯೋ ಮಾಡಿದ ಆರೋಪವನ್ನು ಪ್ರಜ್ವಲ್ ರೇವಣ್ಣ ಎದುರಿಸುತ್ತಿದ್ದಾನೆ. ರಾಜ್ಯ ಸರ್ಕಾರ ಈ ಹಗರಣವನ್ನು ಗಂಭೀರವಾಗಿ ಪರಿಗಣಿಸಿ ಎಸ್ ಐಟಿ (ವಿಶೇಷ ತನಿಖಾ ದಳ) ರಚಿಸಿತ್ತು. ವಿಡಿಯೋಗಳು ಹೊರಬಂದ ನಂತರ ಜರ್ಮನಿಗೆ ಹೋಗಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ನಂತರ ಭಾರತಕ್ಕೆ ಬಂದು ಎಸ್ ಐಟಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ. ನಂತರ ಆತ ಒಂದಲ್ಲ ಒಂದು ಪ್ರಕರಣದಲ್ಲಿ ಎಸ್ ಐಟಿ ವಶದಲ್ಲಿ ಇದ್ದಾನೆ.