ಬೆಂಗಳೂರು: ಸಂಸದ, ಹಾಸನದ NDA ಅಭ್ಯರ್ಥಿ ಪ್ರಜ್ವಲ್ ಕಾಮಕಾಂಡದ ಕುರಿತು ಇಂದು ಮಾಜಿಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಚುನಾವಣೆಗೂ ಮುನ್ನ ಪ್ರಜ್ವಲ್ ಪೆನ್ ಡ್ರೈವ್ ಹಂಚಿದ್ದರ ಕುರಿತು ತನಿಖೆ ಆಗಲಿ ಎಂದು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿ ಆರಂಭಕ್ಕೂ ಮುನ್ನ ಇಂಟೆಲಿಜೆನ್ಸ್ ಸಿಬ್ಬಂದಿ ಇದ್ದಾರಾ ಎಂದು ಪ್ರಶ್ನಿಸಿದ ಅವರು, ಇಂಟೆಲಿಜೆನ್ಸ್ ಸ್ಟಾಫ್ ಬಂದಿದ್ರೆ ಹೇಳಿ ಮುಂದೆ ಸೀಟ್ ಹಾಕಿ ಅವರೂ ಕೇಳಿಸಿಕೊಳ್ಳಲಿ ಎಂದರು.
ಏ.21ನೇ ತಾರೀಖು ಒಂದು ಪೆನ್ ಡ್ರೈವ್ ಇಡೀ ರಾಜ್ಯದಲ್ಲಿ ಹಂಚಿಕೆಯಾಯಿತು. ಮೊದಲ ಹಂತದ ಚುನಾವಣೆ ವೇಳೆ ಪೆನ್ ಡ್ರೈವ್ ಹಂಚುವ ಕೆಲಸ ಆಗಿದೆ. ಪೊಲೀಸ್ ಅಧಿಕಾರಿಗಳನ್ನು ಇಟ್ಟುಕೊಂಡು ಪೆನ್ ಡ್ರೈವ್ ಹಂಚಿದರು. ಹಾಸನ ಮಾತ್ರ ಅಲ್ಲ, ಮಂಡ್ಯದಲ್ಲೂ, ಬೆಂಗಳೂರು ಗ್ರಾಮಾಂತರದಲ್ಲೂ ಏಪ್ರಿಲ್ 21ರಂದು ಹಂಚಿಕೆ ಆಗಿದೆ ಎಂದರು.
ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವುದಿಲ್ಲ. ಈ ನಾಡಿನ ತಾಯಂದಿರ ಪರ ನಾನು ಇಲ್ಲಿ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಅಶ್ಲೀಲ ವಿಡಿಯೋ ಬಿಡುಗಡೆಗೆ ಕ್ಷಣಗಣನೆ ಎಂದು ಕಾಂಗ್ರೆಸ್ ಕಾರ್ಯಕರ್ತ ನವೀಮ್ ಗೌಡ ಫೇಸ್ ಬುಕ್ ನಲ್ಲಿ ಬರೆಸಿದ್ದರು. 8 ಪಿಎಂ ಎಂದು ಸಂದೇಶ ಹಾಕಿದ್ದರು. ಇನ್ನೊಂದೆಡೆ ಪ್ರಜ್ವಲ್ ಏಜೆಂಟ್ ಐವರ ವಿರುದ್ಧ ದೂರು ನೀಡಿದ್ದರು. ನವೀನ್ ಗೌಡ, ಕಾರ್ತಿಕ್ ಗೌಡ, ಚೇತನ್, ಪುಟ್ಟಿ@ಪುಟ್ಟರಾಜು ಹೀಗೆ ಐವರ ಮೇಲೆ ಕಂಪ್ಲೇಟ್ ಕೊಟ್ಟಿದ್ದರು. ಅಭ್ಯರ್ಥಿ ಏಜೆಂಟ್. ಅಂದು ಕಂಪ್ಲೇಟ್ ಸ್ವೀಕರಿಸಿ ಈವರೆಗೆ ಯಾವುದೇ ಕ್ರಮ ಆಗಿಲ್ಲ ಎಂದು ಕುಮಾರಸ್ವಾಮಿ ವಿವರಿಸಿದರು.
ಏ.26ಕ್ಕೆ ದೂರು ಕಾಪಿ ಸ್ವೀಕರಿಸಿದ ಬಗ್ಗೆ ಹಿಂಬರಹ ಕೊಟ್ಟಿದ್ದಾರೆ. ಈ ದೂರು ಮುಕ್ತಾಯಗೊಳಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ನೋಡೆಲ್ ಅಧಿಕಾರಿಯಿಂದ ಹಿಂಬರಹ ನೀಡಲಾಗಿದೆ. ಹಾಸನ SP, DCಗೆ ದೂರು ಕೊಟ್ಟಿದ್ದರು, CEN ಠಾಣೆಯಲ್ಲಿ ಕೇಸು ದಾಖಲಾಗಿತ್ತು.
ರಾಜ್ಯಾದ್ಯಂತ ಸುಮಾರು 25 ಸಾವಿರಕ್ಕೂ ಹೆಚ್ಚು ಪೆನ್ ಡ್ರೈವ್ ಹಂಚಿಕೆಯಾಗಿದೆ. ಹಾಸನ ಸ್ಥಳೀಯ ಪತ್ರಿಕೆ ಸೇರಿ ದಿನಪತ್ರಿಕೆಗಳಲ್ಲಿ ಸುದ್ದಿ ಬಂದಿದೆ. ಅಭ್ಯರ್ಥಿ ಏಜೆಂಟ್ ಕಂಪ್ಲೇಂಟ್ ಕೊಟ್ಟ ನಂತರ ಆಕ್ಷನ್ ಆಗೇ ಇಲ್ಲ. ಇಂತಾ ದೊಡ್ಡಮಟ್ಟದಲ್ಲಿ ನಡೆದ ಪ್ರಕರಟಣದ ಬಗ್ಗೆ ಆಕ್ಷನ್ ಆಗಿಲ್ಲ. ಐವರ ವಿರುದ್ಧ ದಾಖಲಾದ ಪ್ರಕರಣದ ಬಗ್ಗೆ ಈ ಕ್ಷಣದವರೆಗೆ ಕ್ರಮ ಇಲ್ಲ ಎಂದು ಅವರು ಹೇಳಿದರು.
ಮಹಿಳಾ ಆಯೋಗಕ್ಕೆ ಬರೆದಿದ್ದ ಪತ್ರದಲ್ಲಿ ಎಲ್ಲೂ ಪ್ರಜ್ವಲ್ ಹೆಸರು ಇಲ್ಲ. ಪ್ರಜ್ವಲ್ ಆಗಲಿ, ರೇವಣ್ಣ ಹೆಸರಾಗಲಿ ಆಯೋಗದ ಪತ್ರದಲ್ಲಿ ಇರಲಿಲ್ಲ. ಆದರೆ ಸಿಎಂ ತಮ್ಮ ಪತ್ರದಲ್ಲಿ ಪ್ರಜ್ವಲ್ ಹೆಸರು ಉಲ್ಲೇಖಿಸಿದ್ದಾರೆ ಎಂದರು.
ಏಪ್ರಿಲ್ 28ಕ್ಕೆ ಪೆನ್ ಡ್ರೈವ್ ಪ್ರಕರಣ ತನಿಖೆಗೆ SIT ರಚನೆ ಮಾಡಲಾಯಿತು. ಏ.28 ರಂದು ಬೆಂಗಳೂರಿನಲ್ಲಿ ಸಂತ್ರಸ್ತೆಯಿಂದ ಕಂಪ್ಲೇಂಟ್ ಬರೆಸಿದ್ದರು. ಗಣಕಯಂತ್ರದಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ದೂರು ಬರೆಸಿದ್ದರು. ಹೊಳೆನರಸೀಪುರದ ಪೊಲೀಸ್ ಠಾಣೆಗೆ ಬೆಂಗಳೂರಿನಿಂದ ಕಂಪ್ಲೇಂಟ್ ಹೋಗಿದೆ. ರಾಜ್ಯದ ಗೌರವವನ್ನು ಉಳಿಸಲು SIT ಮಾಡಿದ್ರು ಅಂತಾ ಖುಷಿ ಇತ್ತು ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಪ್ರಜ್ವಲ್ ಕೇಸ್ ನಲ್ಲಿ ಸ್ಪೆಷಲ್ ಇನ್ ವೆಸ್ಟಿಗೇಷನ್ ಟೀಮ್ ಅಲ್ಲ. ಸಿದ್ದರಾಮಯ್ಯ ಇನ್ ವೆಸ್ಟಿಗೇಷನ್ ಟೀಮ್ ರಚನೆಯಾಗಿದೆ. SIT ಮಾಡಿ ಯಾರೆಲ್ಲಾ ಎಷ್ಟು ಗಂಟೆ ಟೈಮಲ್ಲಿ ಚರ್ಚಿಸಿದ್ದಾರೆ. ಎಲ್ಲರ ಪೋನ್ ಸಂಭಾಷಣೆ ಹೊರಗೆ ಬರಬೇಕು ಎಂದು ಅವರು ಒತ್ತಾಯಿಸಿದರು.
ಪೆನ್ ಡ್ರೈವ್ ಪಾಪಕೂಪದಲ್ಲಿ ಪ್ರಜ್ವಲ್ ವಹಿಸಿಕೊಳ್ಳೋದಿಲ್ಲ. ಪ್ರಜ್ವಲ್ ರೇವಣ್ಣನನ್ನು ರಕ್ಷಣೆ ಮಾಡೋ ಪ್ರಶ್ನೆ ನನ್ನ ಮುಂದಿಲ್ಲ. ಒಂದು ತನಿಖೆ ಪ್ರಾರಂಭ ಮಾಡಿದಾಗ ಮಾಹಿತಿ ಸೋರಿಕೆ ಆಗಬಾರದು. ಸರ್ಕಾರಕ್ಕೆ ಸಂತ್ರಸ್ತೆಯರನ್ನು ರಕ್ಷಣೆ ಮಾಡುವುದು ಬೇಕಾಗಿಲ್ಲ. ಈ ಸರ್ಕಾರಕ್ಕೆ ಬೇಕಾಗಿರುವುದು ಕೇವಲ ಪ್ರಚಾರ ಅಷ್ಟೇ ಎಂದು ಅವರು ಆರೋಪಿಸಿದರು.
ಜಿ.ಪಂ ಸದಸ್ಯೆಯಾಗಿದ್ದ ಮಹಿಳೆಯಿಂದ ಗನ್ ಪಾಯಿಂಟ್ ಬೆದರಿಕೆ ದೂರು ದಾಖಲಾಗಿದೆ. ಯಾರೋ ಪಾಪ ಹೆಣ್ಣು ಮಗಳಿಂದ ಅತ್ಯಾಚಾರ ಕೇಸ್ ದಾಖಲಿಸಿದ್ದಾರೆ. ಪಾಪ ದೌರ್ಜನ್ಯ ಮಾಡಿರಬಹುದು ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.
ಆಘಾತಕಾರಿ ಪ್ರಕರಣವನ್ನು ಇಷ್ಟು ಹಗುರವಾಗಿ ತನಿಖೆ ನಡೆಸಬಹುದಾ. ಇದು ತನಿಖೆ ನಡೆಸುವ ಪರಿಯಾ ಎಂದು ಪ್ರಶ್ನಿಸಿದ ಅವರು ಏ.21ಕ್ಕೆ ಪೆನ್ ಡ್ರೈವ್ ರಿಲೀಸ್ ಆಗಿದೆ, ಬೇಲೂರಿನಲ್ಲಿ ಏ.22ಕ್ಕೆ ಚುನಾವಣೆ ಪ್ರಚಾರ ಸಭೆಯಲ್ಲಿ ಸಂತ್ರಸ್ಥೆ ಕುಳಿತಿದ್ದರು. ಪ್ರಜ್ವಲ್ ಜತೆ ಪ್ರಚಾರ ಸಭೆ ವೇದಿಕೆಯಲ್ಲಿ ಆ ಹೆಣ್ಣು ಮಗಳಿದ್ದಳು ಎಂದು ಕುಮಾರಸ್ವಾಮಿ ಹೇಳಿದರು.