Sunday, September 8, 2024

ಕೋಲಾರದಲ್ಲಿ ಶಬ್ಧ ಮಾಲಿನ್ಯ ಉಂಟುಮಾಡುತ್ತಿದ್ದ ಸೈಲೆನ್ಸರ್ ಗಳ ಮೇಲೆ ಬುಲ್ಡೋಜರ್ ಹತ್ತಿಸಿದ ಪೊಲೀಸರು

Most read

ಕೋಲಾರ: ಶಬ್ಧಮಾಲಿನ್ಯ ಉಂಟು ಮಾಡುವ ವಾಹನಗಳ ಸೈಲೆನ್ಸರ್‌ಗಳನ್ನು ನಗರದ ಅಮ್ಮವಾರಿಪೇಟೆ ಸರ್ಕಲ್ ನಲ್ಲಿ ಬುಲ್ಡೋಜರ್ ಹತ್ತಿಸಿ ನಾಶಪಡಿಸಿದ ಪೊಲೀಸರು ಇಂಥ ಸೈಲೆನ್ಸರ್ ಬಳಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಸಾರ್ವಜನಿಕರಲ್ಲಿ ಅರಿವು ಮೂಡಿಸಲೆಂದೇ ಬಹಿರಂಗವಾಗಿ ಈ ಸೈಲೆನ್ಸರ್‌ಗಳನ್ನು ನಾಶಪಡಿಸಲಾಗಿದೆ ಎಂದು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ತಿಳಿಸಿದ್ದಾರೆ.

ಶಬ್ದ ಮಾಲಿನ್ಯದ ಮೂಲಕ ಸಾರ್ವಜನಿಕರಿಗೆ ಕಿರಿ ಕಿರಿಯನ್ನು ಉಂಟುಮಾಡುತ್ತಿದ್ದ 150 ದ್ವಿಚಕ್ರ ವಾಹನಗಳ ಸೈಲೆನ್ಸರ್‌ಗಳನ್ನು ವಶಪಡಿಸಿಕೊಂಡ ಜಿಲ್ಲಾ ಪೊಲೀಸರು ಬುಲ್ಡೋಜರ್ ಯಂತ್ರದ ಮೂಲಕ ನಾಶಪಡಿಸಿದ್ದಾರೆ.

ಮುಳಬಾಗಿಲು ಹಾಗೂ ಕೋಲಾರ ಉಪ ವಿಭಾಗದ ಪೊಲೀಸರ ವಶದಲ್ಲಿದ್ದ ದ್ವಿಚಕ್ರ ವಾಹನಗಳ ಸೈಲೆನ್ಸರ್ ಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ತಮ್ಮ ಹಿರಿಯ ಅಧಿಕಾರಿಗಳೊಂದಿಗೆ ಬುಲ್ಡೋಜರ್ ಯಂತ್ರವನ್ನು ಹತ್ತಿಸುವ ಮೂಲಕ ನಾಶಪಡಿಸಿದರು.

ಇಂತಹ ಕರ್ಕಶ ಶಬ್ಧ ಹೊರಡಿಸುವ ಸೈಲೆನ್ಸರ್ ಗಳನ್ನು ಅಳವಡಿಸಿಕೊಂಡು ರಸ್ತೆಗಳಲ್ಲಿ ಸಂಚರಿಸುವುದರಿಂದ ಹಿರಿಯ ನಾಗರಿಕರು, ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಬೆಚ್ಟಿ ಬೀಳುವಂತಹ ಸನ್ನಿವೇಶ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂಥ ವಾಹನಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲೂ ಈ ಬಗ್ಗೆ ಅತಿ ಹೆಚ್ಚು ಕಾರ್ಯಾಚರಣೆ ನಡೆಸಲು ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

More articles

Latest article