ಮುಂಬೈ : ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 19 ರಂದು ಮುಂಬೈ ಕರಾವಳಿ ರಸ್ತೆಯ ಮೊದಲ ಹಂತವನ್ನು ಉದ್ಘಾಟಿಸಲಿದ್ದಾರೆ ಮತ್ತು ಗೋರೆಗಾಂವ್ – ಮುಲುಂಡ್ ಸಂಪರ್ಕ ರಸ್ತೆಯ ಶಂಕುಸ್ಥಾಪನೆಯನ್ನು ಸಹ ಅದೇ ದಿನ ನೆರವೇರಿಸಲಿದ್ದಾರೆ ಎಂದು ಮುನ್ಸಿಪಾಲ್ ಕಮಿಷನರ್ ಹಾಗು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್(BMC) ಮುಖ್ಯಸ್ಥ ಇಕ್ಬಾಲ್ ಸಿಂಗ್ ಚಹಾಲ್, ಐಎಎಸ್ ಶುಕ್ರವಾರ ತಿಳಿಸಿದ್ದಾರೆ.
ನಾಲ್ಕು ಲೇನ್ ದಕ್ಷಿಣಕ್ಕೆ ವೋರ್ಲಿಯಿಂದ ಮರೈನ್ ಡ್ರೈವ್ ವರೆಗೆ 10 ಕಿಲೋಮೀಟರ್ ಇರುವ ಕರಾವಳಿ ರಸ್ತೆಯ ಮೊದಲ ಹಂತವನ್ನು ಪ್ರಧಾನಿ ಉದ್ಘಾಟಿಸಿದ ಒಂದು ದಿನದ ನಂತರ ಸಾರ್ವಜನಿಕರಿಗೆ ತೆರೆಯಲಾಗುವುದು ಎಂದು ಚಹಾಲ್ ಸುದ್ದಿಗಾರರಿಗೆ ತಿಳಿಸಿದರು.
13,983 ಕೋಟಿ ವೆಚ್ಚದ ಮುಂಬೈ ಕರಾವಳಿ ರಸ್ತೆಯ ಕಾಮಗಾರಿಯು ಶೇ.84 ರಷ್ಟು ಪೂರ್ಣಗೊಂಡಿದ್ದು, ನಗರದ ಮಲಬಾರ್ ಹಿಲ್ ಪ್ರದೇಶದ ಪ್ರಿಯದರ್ಶಿನಿ ಪಾರ್ಕ್‌ನಿಂದ ಮರೈನ್ ಡ್ರೈವ್‌ನಿಂದ 8 ಪಥಗಳ ಜೋಡಿ ಸುರಂಗ ಮಾರ್ಗವನ್ನು ಒಳಗೊಂಡಿರುವ ಎರಡನೇ ಹಂತವು ಮೇ 15 ರೊಳಗೆ ಸಂಚಾರಕ್ಕೆ ಮುಕ್ತವಾಗಲಿದೆ ಹೇಳಿದ್ದಾರೆ.