ಮತ್ತೊಂದು ವಿಮಾನ ಅವಘಡ: ಮಲಾವಿ ಉಪಾಧ್ಯಕ್ಷ ಸೌಲೊಸ್‌ ಚಿಲಿಮ ದುರ್ಮರಣ

Most read

ಹೊಸದಿಲ್ಲಿ: ವಿಮಾನ ಅಪಘಾತವೊಂದರಲ್ಲಿ ಮಲಾವಿ ದೇಶದ ಉಪಾಧ್ಯಕ್ಷ ಸೌಲೋಸ್‌ ಚಿಲಿಮಾ ಸೇರಿದಂತೆ ಹತ್ತು ಮಂದಿ ದಾರುಣವಾಗಿ ಮೃತಪಟ್ಟಿರುವ ಆಘಾತಕಾರಿ ಘಟನೆ ವರದಿಯಾಗಿದೆ.

ಮಲಾವಿ ಉಪಾಧ್ಯಕ್ಷ ಚಿಲಿಮಾ (51) ಅವರನ್ನೊಳಗೊಂಡ ವಿಮಾನ ಮೊಜೊಜು ನಗರದಲ್ಲಿ ಸೋಮವಾರ ಲ್ಯಾಂಡ್ ಆಗಬೇಕಿತ್ತು. ಆದರೆ ಅದು ಹವಾಮಾನ ವೈಪರೀತ್ಯದಿಂದಾಗಿ ವಾಪಾಸ್‌ ಹಿಂದಕ್ಕೆ ತೆರಳಿತ್ತು. ವಾಪಾಸಾದ ವಿಮಾನವು ಮಲಾವಿ ದೇಶದ ರಾಜಧಾನಿ ಲಿಲಾಂಗ್ವೀ ತಲುಪಬೇಕಿತ್ತಾದರೂ ಅದು ನಾಪತ್ತೆಯಾಗಿತ್ತು.

ನಂತರ ವಿಮಾನಕ್ಕಾಗಿ ಶೋಧ ಕಾರ್ಯಾಚರಣೆ ನಡೆದಾಗಿ ವಿಮಾನವು ದಟ್ಟ ಅರಣ್ಯವೊಂದರಲ್ಲಿ ಪತ್ತೆಯಾಗಿತ್ತು. ವಿಮಾನದಲ್ಲಿದ್ದ ಚಿಲಿಮಾ ಅವರೂ ಸೇರಿದಂತೆ ಎಲ್ಲರೂ ಮೃತಪಟ್ಟಿರುವುದಾಗಿ ಮಲಾವಿ ಅಧ್ಯಕ್ಷ ಲಾಜಾರಸ್‌ ಚಕ್ವೇರಾ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ತಿಳಿಸಿದ್ದಾರೆ.

ಇಂಥ ಹೃದಯ ಒಡೆಯುವ ಸುದ್ದಿಯನ್ನು ಶಬ್ದಗಳಲ್ಲಿ ಹಿಡಿದಿಡಲಾಗದು, ಇದು ನಿಜಕ್ಕೂ ಘೋರ ದುರಂತ ಎಂದು ಅವರು ನುಡಿದಿದ್ದಾರೆ.

ಮಲಾವಿ ದೇಶದ ವಾಯುಸೇನೆಗೆ ಸೇರಿದ 228-202K ಏರ್‌ ಕ್ರಾಫ್ಟ್‌ ಮಂಜುಮುಸುಕಿದ ಅರಣ್ಯದ ಬಳಿ ಬಿದ್ದಿರುವುದನ್ನು ಮಿಲಿಟರಿ ಅಧಿಕಾರಿಗಳು ವೀಕ್ಷಿಸುತ್ತಿರುವ ಚಿತ್ರವನ್ನು AFP ಬಿಡುಗಡೆ ಮಾಡಿದೆ.

More articles

Latest article