ಲೋಕಸಭೆ ಚುನಾವಣೆ ಸಮೀಪ; ಪೆಟ್ರೋಲ್, ಡೀಸೆಲ್ ಬೆಲೆಯನ್ನು ಲೀಟರ್‌ಗೆ 2 ರೂ. ಇಳಿಸಿದ ಕೇಂದ್ರ

Most read

ಲೋಕಸಭೆ ಚುನಾವಣೆ ವೇಳಾಪಟ್ಟಿ ಘೋಷಣೆಗೂ ಮುನ್ನ ಕೇಂದ್ರ ಸರ್ಕಾರ ಗುರುವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 2 ರೂ. ಇಳಿಸಿದೆ.

ಕಳೆದ ವಾರವಷ್ಟೇ ಅಡುಗೆ ಅನಿಲದ ಬೆಲೆ ಕೂಡ ಕಡಿತಗೊಳಿಸಲಾಗಿತ್ತು. ಈಗ ಪೆಟ್ರೋಲ್ ಡಿಸೆಲ್ ಬೆಲೆಯನ್ನು ಇಳಿಸಿದ್ದು ಇದು ಸಂಪೂರ್ಣ ಲೋಕಸಭಾ ಚುನಾವಣೆ ಗಿಮಿಕ್ ಎಂದು ಚರ್ಚೆಯಾಗುತ್ತಿದೆ.

ಇಂದನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ತಮ್ಮ ಎಕ್ಸ್‌ನಲ್ಲಿ, “ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 2 ರೂಪಾಯಿ ಇಳಿಸುವ ಮೂಲಕ, ಪ್ರಧಾನಿ ನರೇಂದ್ರ ಮೋದಿ ಅವರು ಕೋಟ್ಯಂತರ ಭಾರತೀಯರ ಕುಟುಂಬದ ಕಲ್ಯಾಣಕ್ಕೆ ಬದ್ದ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.” ಎಂದು ಹೇಳಿಕೊಂಡಿದ್ದಾರೆ.

ಅತಿದೊಡ್ಡ ತೈಲ ಬಿಕ್ಕಟ್ಟಿನ ಹೊರತಾಗಿಯೂ, “ಕಳೆದ ಎರಡೂವರೆ ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೋಲ್ ಬೆಲೆಗಳು ಶೇಕಡಾ 4.65 ರಷ್ಟು ಕಡಿಮೆ ಮಾಡಿದ್ದೇವೆ” ಎಂದು ಟ್ವೀಟ್ ಮಾಡಿದ್ದಾರೆ.

ಮಾ.14ಕ್ಕೆ ಸರಾಸರಿ ಪೆಟ್ರೋಲ್ ದರ ಲೀಟರ್‌ಗೆ 94 ರೂ., ಡೀಸೆಲ್‌ ದರ 87 ರೂ. ಆಗಿದೆ.

More articles

Latest article