ವೈಯಕ್ತಿಕ ತೇಜೋವಧೆ ಮಾಡುವುದು ಆರ್‌ ಎಸ್‌ ಎಸ್‌ ಚಾಳಿ; ಮಹಾತ್ಮಾ ಗಾಂಧಿ ಅವರನ್ನೂ ನಿಂದಿಸಿದ್ದರು; ರಾಹುಲ್ ಗಾಂಧಿ ಆರೋಪ

Most read

ಪಟನಾ:  ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ ಎಸ್‌ ಎಸ್) ವೈಯಕ್ತಿಕ ತೇಜೋವಧೆ ಮಾಡಿದೆ. ಈ ಸ್ವಭಾವ ಸಂಘ ಪರಿವಾರದ ಹುಟ್ಟುಗುಣ ಎಂದು ಕಾಂಗ್ರೆಸ್‌ ವರಿಷ್ಠ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ಉದ್ದೇಶಪೂರ್ವಕವಾಗಿ ತಮಗೆ ಆಗದವರನ್ನು ಗುರಿಯಾಗಿಸಿಕೊಂಡು ಅವರ ವೈಯಕ್ತಿಕ ತೇಜೋವಧೆ ಮಾಡುವುದು ಸಂಘ ಪರಿವಾರದ ಚಾಳಿಯಾಗಿದೆ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ವಿಡಿಯೊ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ.

ವಿಡಿಯೊದಲ್ಲಿ ರಾಹುಲ್‌ ಗಾಂಧಿ ಜತೆ ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗ ತುಷಾರ್‌ ಗಾಂಧಿ ಮತ್ತು ‘ಇಂಡಿಯಾ’ ಒಕ್ಕೂಟದ ಹಲವು ಮುಖಂಡರು ಕಾಣಿಸಿಕೊಂಡಿದ್ದಾರೆ.

ವೈಯಕ್ತಿಕ ತೇಜೋವಧೆ ಮಾಡುವುದು ಸಂಘ ಪರಿವಾರಕ್ಕೆ ಅಭ್ಯಾಸವಾಗಿದ್ದು, ಮಹಾತ್ಮಾ ಗಾಂಧಿಯವರನ್ನು ಕೂಡ ಲೆಕ್ಕವಿಲ್ಲದಷ್ಟು ಬಾರಿ ಅಪಮಾನ ಮಾಡಿದೆ. ಅವರನ್ನು ಕುರಿತು ಸುಳ್ಳು ಮತ್ತು ಕಟ್ಟುಕತೆಗಳನ್ನು ಹಬ್ಬಿಸಿದೆ ಎಂದು ವಾಗ್ದಾಳಿ ನಡೆಸಿದರು.

More articles

Latest article