ಪವಿತ್ರಾಗೌಡ  ಮಧ್ಯಂತರ ಜಾಮೀನು ಅರ್ಜಿ ವಜಾ

25 ದಿನಗಳ ಮಧ್ಯಂತ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಪವಿತ್ರಾಗೌಡ

ಬೆಂಗಳೂರು : ಮಗಳ ಪರೀಕ್ಷೆಯನ್ನು ಮುಂದಿಟ್ಟುಕೊಂಡು ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡಗೆ ನ್ಯಾಯಾಲಯ ಅರ್ಜಿ ವಜಾಗೊಳಿಸಿದೆ.

ಈ ಪ್ರಕರಣದಲ್ಲಿ ಪವಿತ್ರಾ ಗೌಡ ಅವರು ಎ1 ಆರೋಪಿ ಆಗಿದ್ದಾರೆ. ದರ್ಶನ್ ಎ2 ಆಗಿದ್ದಾರೆ. ಪವಿತ್ರಾಳ ಮಗಳು ಹತ್ತನೆ ತರಗತಿ ವ್ಯಾಸಾಂಗ ಮಾಡುತ್ತಿದ್ದು,  ಪರೀಕ್ಷೆ ಸಮೀಪಿಸಿದೆ. ಹೀಗಾಗಿ, 25 ದಿನಗಳ ಮಧ್ಯಂತ ಜಾಮೀನು ನೀಡಿ ಎಂದು ಕೋರ್ಟ್​ ಅಲ್ಲಿ ಮನವಿ ಮಾಡಿದ್ದರು. ಆದರೆ,  ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ಪವಿತ್ರಾಗೆ ಜಾಮೀನು ನೀಡಲು ನಿರಾಕರಿಸಿದೆ.

ಈ ಹಿಂದೆ ಪವಿತ್ರಾ ಅವರು ಮನೆ ಊಟಕ್ಕೆ ಬೇಡಿಕೆ ಇಟ್ಟಿದ್ದರು. ಕೆಲ ದಿನ  ಅವಕಾಶ ನೀಡಿದ್ದ ಕೋರ್ಟ್‌ ನಂತರ  ರದ್ದು ಮಾಡಿದೆ. 

More articles

Latest article

Most read