ರಾಜ್ಯದಲ್ಲೂ ಪತಂಜಲಿಗೆ ಬಂತು ಆಪತ್ತು: ಉತ್ಪನ್ನಗಳ ತಪಾಸಣೆಗೆ ಆದೇಶ

Most read

ಬೆಂಗಳೂರು: ಪತಂಜಲಿ ಉತ್ಪನ್ನಗಳನ್ನು ತಪಾಸಣೆ ಮಾಡಿ ಸಮಗ್ರ ವರದಿ ನೀಡುವಂತೆ ಡ್ರಗ್ ಕಂಟ್ರೋಲ್ ಹಾಗೂ ಆಯುಷ್ ಇಲಾಖೆಯ ಆಯುಕ್ತರಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ.

ಬಾಬಾ ರಾಮದೇವ್ ಗೆ ಬಿಜೆಪಿಯಿಂದ ಬಹಳ ಬೆಂಬಲ ಸಿಕ್ಕಿದೆ. ಅದು ಬೇರೆ ವಿಚಾರ. ಆದರೆ ಜನರಿಗೆ ಏನೋ ನಂಬಿಕೆ ಮೂಡಿಸಿ ಮೋಸ ಮಾಡುವುದು, ದುರುಪಯೋಗ ಮಾಡಿಕೊಳ್ಳುವುದು ಮಾಡುವುದು ದೊಡ್ಡ ಅಪರಾಧ ಆಗಲಿದೆ ಎಂದಿದ್ದಾರೆ.

ಪತಂಜಲಿಗೆ ಸಂಸ್ಥೆ ಜನರಿಗೆ ಪುರಾವೆ ಇಲ್ಲದೆಯೇ ದಾರಿತಪ್ಪಿಸುತ್ತಿದೆ. ರೋಗ ಗುಣಪಡಿಸುವ ಲಕ್ಷಣ ಇಲ್ಲದಿದ್ದರೂ ಆಯುರ್ವೇದದ ಹೆಸರಿನಲ್ಲಿ ಮಾರಾಟ ಮಾಡುತ್ತಿದೆ. ಪತಂಜಲಿ ಜನರನ್ನು ದಾರಿ ತಪ್ಪಿಸಿ ಕಂಪನಿಗೆ ಲಾಭ ಮಾಡಿಕೊಳ್ಳಲು ಸುಳ್ಳುಗಳನ್ನು ಹೇಳುತ್ತಿದೆ. ಆಧಾರ ರಹಿತ ಮಾಹಿತಿಗಳನ್ನು ಯಾವುದೇ ಸಂಶೋಧನೆ ಇಲ್ಲದೆಯೇ ಪ್ರಚಾರ ಮಾಡುತ್ತಿದೆ, ಇದಕ್ಕಾಗಿಯೇ ಸುಪ್ರೀಂ ಕೋರ್ಟ್ ಪತಂಜಲಿಗೆ ಛೀಮಾರಿ ಹಾಕಿದೆ ಎಂದು ಅವರು ನುಡಿದರು.

ನಮ್ಮಲ್ಲೂ ಡ್ರಗ್ಸ್ ಕಂಟ್ರೋಲ್ ಹಾಗೂ ಆಯುಷ್ ಇಲಾಖೆಗೆ ಸೂಚನೆ ನೀಡಿದ್ದೇನೆ. ಪತಂಜಲಿ ಔಷಧದ ಗುಣಮಟ್ಟದ ಪರೀಕ್ಷೆ ಕೂಡ ಮಾಡುವುದಕ್ಕೆ ಸೂಚನೆ ನೀಡಿದ್ದೇನೆ. ಔಷಧಕ್ಕೆ ಬೇರೆ ಏನಾದ್ರೂ ಬೆರೆಸಲಾಗುತ್ತದೆಯೆ ಎಂಬ ಪರಿಶೀಲನೆ ಮಾಡುತ್ತೇವೆ. ಇದೇ ತರಹ ಕ್ಲೇಮ್ ಮಾಡುವ ಉತ್ಪನ್ನಗಳ ಬಗ್ಗೆಯೂ ಪರಿಶೀಲನೆ ಮಾಡಬೇಕಿದೆ. ಔಷಧಗಳ ಗುಣಮಟ್ಟ ಚೆಕಪ್ ಮಾಡುವುದಕ್ಕೆ ಹೇಳಿದ್ದೇನೆ. ವರದಿ ಬಂದ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.c

More articles

Latest article