ಪಹಲ್ಗಾಮ್ ದಾಳಿಯಲ್ಲಿ ಭಾಗಿ ಎನ್ನಲಾದ ಎಲ್‌ ಇಟಿ ಉಗ್ರ ಉಗ್ರ ಆಸಿಫ್ ಶೇಖ್ ಮನೆ ಸ್ಫೋಟ

Most read

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್  ಉದ್ಯಾನವನದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ಉಗ್ರ ಆಸಿಫ್ ಶೇಖ್‌ ಗ ಸೇರಿದೆ ಎನ್ನಲಾದ ಕಾಶ್ಮೀರದ ಟ್ರಾಲ್‌ ನಲ್ಲಿದ್ದ ಮನೆಯನ್ನು ಸ್ಫೋಟಿಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಕಾಶ್ಮೀರದ ಪಹಲ್ಗಾಮ್ ಬಳಿಯ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 23ರಂದು ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ 26 ಅಮಾಯಕ ಜನರನ್ನು ಕೊಂದಿದ್ದರು. ಈ ದಾಳಿಯಲ್ಲಿ ಈತನ ಹೆಸರೂ ಕೇಳಿ ಬಂದಿತ್ತು. ಆಸಿಫ್ ಶೇಖ್ ಲಷ್ಕರ್-ಎ-ತೊಯ್ಬಾ (ಎಲ್‌ ಇಟಿ) ಸಂಘಟನೆ ಸದಸ್ಯ ಎಂದು ತಿಳಿದು ಬಂದಿದೆ. ಈಗಾಗಲೇ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಪಾಕಿಸ್ತಾನದ ಜತೆ ಮಾಡಿಕೊಳ್ಳಲಾಗಿದ್ದ 1960ರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಜಾರಿಗೆ ತರುವ ಅಧಿಸೂಚನೆಯನ್ನು ಭಾರತ ಹೊರಡಿಸಿದೆ.

More articles

Latest article