ಮಗುವಿಗೆ ಆಕ್ಸಿಜನ್ ಸಪ್ಲೈ ಮಾಡಲಾಗ್ತಿದೆ : ಎಂ ಬಿ ಪಾಟೀಲ್

ವಿಜಯಪುರ: ಮಗು ಕೊಳವೆ ಬಾವಿಗೆ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಜಯಪುರ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ಕಾರ್ಯಾಚರಣೆ ನಡೆಯುತ್ತಿದ್ದು ಮಗುವಿಗೆ ಆಮ್ಲಜನಕ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇಷ್ಟು ಹೊತ್ತಿಗೆ ನಾವು ಮಗು ಬಿದ್ದ ಸ್ಥಳಕ್ಕೆ ತಲುಪಬೇಕಿತ್ತು. ಆದರೆ, ಅಲ್ಲಿ ಬಂಡೆಗಲ್ಲು ಸಿಕ್ಕಿರುವ ಕಾರಣ ವಿಳಂಬ ಆಗುತ್ತಿದೆ ಎಂದು ಅವರು ಹೇಳಿದ್ದಾರೆ.

ಮಗುವಿಗೆ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. ಮಗು ಚಲನೆಯೂ ಕಾಣಿಸುತ್ತಿದೆ. ಸ್ಪಲ್ವ ಹೊತ್ತು ಕಾದು ನೋಡೋಣ. ಜಿಲ್ಲಾಧಿಕಾರಿ, ಎಸ್ ಪಿ ಸ್ಥಳದಲ್ಲೇ ಇದ್ದಾರೆ. ಹಿಂದೆ ಕೂಡ ಇಂತಹ ಘಟನೆಗಳು ನಡೆದಿವೆ. ಇದಕ್ಕೆ ಕಠಿಣ ಕಾನೂನು ಕೂಡ ತಂದಿದ್ದೇವೆ. ಆದರೆ ರೈತರು ಐದಾರು ಸಾವಿರ ಉಳಿಸುವುದಕ್ಕೆ ಅಲ್ಲಿನ ಕಬ್ಬಿಣದ ಪೈಪ್ ತೆಗೆದುಬಿಡುತ್ತಾರೆ. ಅದರಿಂದ ಇಂತಹ ಘಟನೆ ನಡೆಯುತ್ತಿವೆ ಎಂದು ಅವರು ನುಡಿದರು.

ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನನ್ನ ಸಂಪರ್ಕದಲ್ಲಿ ಇದ್ದಾರೆ. ಕಲಬುರಗಿ ಹಾಗೂ ಬೇರೆ ಭಾಗದಿಂದ ಎನ್ ಡಿಆರ್ ಎಫ್ ತಂಡಗಳು ಸ್ಥಳಕ್ಕೆ ಬಂದಿವೆ. ಮಗು ಸುರಕ್ಷಿತವಾಗಿ ಬರಲೆಂದು ಪ್ರಾರ್ಥಿಸೋಣ ಎಂದಿದ್ದಾರೆ.

More articles

Latest article

Most read