Wednesday, December 11, 2024

ದರ್ಶನ್‌ ಗೆ ನಾಡಿದ್ದು ಬುಧವಾರ ಬೆನ್ನುನೋವಿಗೆ ಸರ್ಜರಿ

Most read

breaking news

ಬೆಂಗಳೂರು; ದರ್ಶನ್‌ ಗೆ ನಾಡಿದ್ದು ಬೆನ್ನುನೋವಿಗೆ ಸರ್ಜರಿ. ದರ್ಶನ್‌ ಸರ್ಜರಿಗೆ ಈಗ ಸಿದ್ದತೆ. ದರ್ಶನ್‌ ಗೆ ಸ್ಟಿರಾಯ್ಡ್‌ ಇಂಜೆಕ್ಷನ್‌ ನೀಡಲಾಗುತ್ತಿದೆ. ಈಗ ಫಿಸಿಯೋಥೆರಪಿ, ವ್ಯಾಯಾಮ ಮಾಡಿಸಲಾಗುತ್ತಿದೆ. ಡಿ.11ರಂದು ಸರ್ಜರಿ ಮಾಡುವುದಾಗಿ ಕೋರ್ಟ್‌ ಗೆ ಮಾಹಿತಿ ನೀಡುವುದಾಗಿ ದರ್ಶನ್‌ ಪರ ವಕೀಲ ಸಿ.ವಿ.ನಾಗೇಶ್‌ ಮಾಹಿತಿ ನೀಡಿದ್ದಾರೆ. ದರ್ಶನ್‌ ಜಾಮೀನು ಅರ್ಜಿ ಕುರಿತ ವಿಚಾರಣೆಯಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್‌ ಮತ್ತು ಇತರರ  ರೆಗ್ಯುಲರ್‌ ಜಾಮೀನು ಅರ್ಜಿ ಕುರಿತು ಇಂದು ಹೈಕೋರ್ಟ್‌ ನಲ್ಲಿ ಇಂದು ವಿಚಾರಣೆ ನಡೆಯುತ್ತಿದೆ. ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಪ್ರಸನ್ನಕುಮಾರ್ ಬಲವಾದ ವಾದ ಮಂಡಿಸಿ ದರ್ಶನ್‌ ಗೆ ಜಾಮೀನು ನೀಡಬಾರದು ಎಂದು ವಾದಿಸಿದರು.

More articles

Latest article