ಆಪರೇಷನ್‌ ಸಿಂಧೂರ ವಿವರ ನೀಡಿದ ಕರ್ನಲ್ ಸೋಫಿಯಾ ಬೆಳಗಾವಿ ಸೊಸೆ

Most read

ಬೆಳಗಾವಿ: ಬುಧವಾರ ಮುಂಜಾನೆ ಭಾರತ ಪಾಕಿಸ್ತಾನದ ಮೇಲೆ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಇಂಚಿಂಚೂ ವಿವರಗಳನ್ನು ಜಗತ್ತಿನ ಮುಂದೆ ತೆರೆದಿಟ್ಟ ಕರ್ನಲ್ ಸೋಫಿಯಾ ಖುರೇಶಿ ಅವರು ಬೆಳಗಾವಿಯ ಸೊಸೆ ಎಂದು ತಿಳಿದು ಬಂದಿದೆ.

ಈ ವಿಷಯ ತಿಳಿದು ಬರುತ್ತಿದ್ದಂತೆ ಬೆಳಗಾವಿ ಜನರು ಮಾತ್ರವಲ್ಲದೆ ಇಡೀ ರಾಜ್ಯದ ಜನತೆ ಸಂಭ್ರಮಿಸುತ್ತಿದ್ದಾರೆ. ಸೋಫೀಯಾ ಅವರ ಪತಿ ತಾಜುದ್ದೀನ್ ಬಾಗೇವಾಡಿ ಅವರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಕೊಣ್ಣೂರು ಗ್ರಾಮದ ಮೂಲದವರು. ಕರ್ನಲ್ ಸೋಫೀಯಾ ಮೂಲತಃ ಗುಜರಾತ್ ರಾಜ್ಯದ ಬರೋಡಾದವರು. 2015ರಲ್ಲಿ ಸೋಫಿಯಾ ಹಾಗೂ ತಾಜುದ್ದೀನ್ ಪ್ರೇಮ ವಿವಾಹ ಮಾಡಿಕೊಂಡಿದ್ದಾರೆ. ಪತಿ, ಪತ್ನಿ‌ ಇಬ್ಬರೂ ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಏನೇ ಆದರೂ ಸೋಫೀಯಾ ಅವರು ಕರ್ನಾಟಕದ ಸೊಸೆಯೂ ಹೌದು, ಬೆಳಗಾವಿಯ ಸೊಸೆಯೂ ಹೌದು!

ಸೋಫಿಯಾ ಅವರೇ ಪತ್ರಿಕಾಗೋಷ್ಠಿಯಲ್ಲಿ ಕಾಶ್ಮೀರದ ಪಹಲ್ಗಾಮ್‌ ನಲ್ಲಿ ಭಾರತೀಯರ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ, ಏರ್‌ ಸ್ಟ್ರೈಕ್ ಮಾಡಿ ಪಾಕ್ ಉಗ್ರರ ನೆಲೆಗಳನ್ನು ಹೇಗೆ ಧ್ಚಂಸಗೊಳಿಸಿದ್ದೇವೆ, ಉಗ್ರರ ಅಡಗುದಾಣಗಳು ಎಲ್ಲಿವೆ, ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಉದ್ದೇಶ ಏನು, ಯಶಸ್ಸು ಎಷ್ಟರಮಟ್ಟಿಗೆ ಸಿಕ್ಕಿದೆ ಎಂಬುದನ್ನು ವಿವರಿಸಿದ್ದರು.

ಸೋಫೀಯಾ ಅವರು ಬಹುರಾಷ್ಟ್ರೀಯ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಭಾರತೀಯ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೂ ಭಾಜನರಾಗಿದ್ದಾರೆ.

More articles

Latest article