ಉಪೇಂದ್ರ ನಿರ್ದೇಶಿಸಿದ ಓಂ ಸಿನಿಮಾ ಈಗಲೂ ಎವರ್ ಗ್ರೀನ್ ಸಿನಿಮಾ. ಅದೆಷ್ಟು ಬಾರೀ ರಿರಿಲೀಸ್ ಆಯ್ತೋ. ಖುಷಿಯ ವಿಚಾರ ಅಂದ್ರೆ ಅಷ್ಟು ಬಾರಿಯೂ ಹಿಟ್ ಆಗಿದೆ, ಒಳ್ಳೆ ಕಲೆಕ್ಷನ್ ಮಾಡಿದೆ. ಈಗ ಈ ಸಿನಿಮಾಗೆ 29 ವರ್ಷ ತುಂಬಿದೆ. ಆದರೆ ಈ ಕಥೆ ಕಾಲ್ಪನಿಕವಾದುದ್ದಲ್ಲ, ಉಪ್ಪಿ ಸ್ನೇಹಿತನ ಜೀವನದಲ್ಲಿ ನಡೆದ ಕಥೆಯಾಗಿದೆ. ಈ ಹಿಂದಿನ ಕಥೆಯನ್ನು ನಿರ್ದೇಶಕ ಮುರುಳಿ ಮೋಹನ್ ಮಾತನಾಡಿದ್ದಾರೆ.
ಉಪ್ಪಿ ಹಾಗೂ ನಿರ್ದೇಶಕ ಮುರುಳಿ ಮೋಹನ್ ಒಂದೇ ಕಾಲೇಜಿನಲ್ಲಿ ಓದಿದವರು. ಉಪೇಂದ್ರ ಅಣ್ಣ ಸುದೀಂದ್ರಗೆ ಸಿಕ್ಕಾಪಟ್ಟೆ ಜನ ಸ್ನೇಹಿತರು ಇದ್ದರು. ವೀಕೆಂಡ್ ಆಯ್ತು ಅಂದ್ರೆ ಆ ಸ್ನೇಹಿತರೆಲ್ಲಾ ಮನೆಗೆ ಬಂದು ಕೂತು ಬಿಡುತ್ತಿದ್ದರು. ಅದರಲ್ಲಿ ಪುರುಷೋತ್ತಮ ಎಂಬ ಸ್ನೇಹಿತ ಇದ್ದರು. ಈ ಪುರುಷೋತ್ತಮ ಹುಡುಗಿ ವಿಚಾರಕ್ಕೆ ಅಂಡರ್ ವರ್ಲ್ಡ್ ಗೆ ಎಂಟ್ರಿಯಾಗಿದ್ದರು. ಆ ಹುಡುಗಿ ಮೊದಲು ಪುರುಷೋತ್ತಮನನ್ನು ಬಳಸಿಕೊಳ್ಳುತ್ತಾಳೆ. ಒಬ್ಬ ರೌಡಿ ಜೊತೆಯಲ್ಲಿದ್ದರೆ ಸೇಫ್ಟಿ ಎಂದುಕೊಳ್ಳುತ್ತಾಳೆ.
ದಿನ ಕಳೆದಂತೆ ಅವಳಿಗೆ ರೌಡಿ ಜೊತೆಗೆ ಇದ್ದಿದ್ದೇ ಸಮಸ್ಯೆ ಆಗುತ್ತೆ. ದೂರವಾಗುತ್ತಾ ಹೋಗುತ್ತಾಳೆ. ಎಂಗೇಜ್ಮೆಂಟ್ ಆಗಲು ಹೋದಾಗ, ಆತ ಹೋಗಿ ತಡೆಯುತ್ತಾನೆ. ಈ ಘಟನೆಯನ್ನು ಪುರುಷೋತ್ತಮ ಬಂದು ಉಪ್ಪಿ ಬಳಿ ಹೇಳಿದ್ದ. ಅದನ್ನು ಉಪ್ಪಿ ಹಾಗೇ ಬರೆದುಕೊಂಡಿದ್ದ. ಅದು ಓಂ ಸಿನಿಮಾವಾಯಿತು. ಆದರೆ ಓಂ ಸಿನಿಮಾ ರಿಲೀಸ್ ವೇಳೆ ಸೆನ್ಸಾರ್ ಸಮಸ್ಯೆ ಆಗಿತ್ತು. ರಾಜ್ ಕುಮಾರ್ ಕಂಪನಿ ಬೇರೆ. ಸೆನ್ಸಾರ್ ನಲ್ಲಿ ಹೆಚ್ಚು ರೌಡಿಸಂ ಇದೆ ಎಂದು ಹೇಳಿಬಿಟ್ಟರು. ಸಾಕಷ್ಟು ಸಮಸ್ಯೆಗಳನ್ನೆಲ್ಲ ಮೆಟ್ಟಿನಿಂತು ಸಿನಿಮಾ ತೆರೆಗೆ ಬಂತು, 100 ಡೇಸ್ ಓಡಿತು. ಪಾರ್ವತಮ್ಮ ರಾಜ್ ಕುಮಾರ್ ಅವರು ಕೂಡ ಹೊಗಳಿದ್ದರು ಎಂದಿದ್ದಾರೆ.