ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿಲ್ಲ; ಆದರೂ ಬಂಧಿಸುವುದಾದರೆ ಬಂಧಿಸಲಿ: ಗಿರೀಶ್‌ ಮಟ್ಟಣ್ಣನವರ್‌

Most read

ಮಂಗಳೂರು: ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಲು ಆಗಮಿಸಿದ್ದಾಗ ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ಮೂವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬ್ರಹ್ಮಾವರ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದ್ದು ಮೂವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ತಿಮರೋಡಿ ಅವರನ್ನು ವಶಕ್ಕೆ ಪಡೆಯುವ ಸಂದರ್ಭದಲ್ಲಿ ಅವರ ನಿಕಟವರ್ತಿ ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ಹಲವರು ಪೊಲೀಸರ ಕೆಲಸಕ್ಕೆ ಅಡ್ಡಪಡಿಸಿದ ಆಪಾದನೆ ಕೇಳಿ ಬಂದಿತ್ತು.

ತಮ್ಮ ವಿರುದ್ಧ ಪ್ರಕರಣ ದಾಖಲಾದ ವಿಷಯ ತಿಳಿದು ಬರುತ್ತಿದ್ದಂತೆ ಗಿರೀಶ್​ ಮಟ್ಟಣ್ಣನವರ್​ ಪೊಲೀಸ್​ ಠಾಣೆಗೆ ಆಗಮಿಸಿದ್ದಾರೆ. ನನ್ನ ಬಂಧನಕ್ಕೆ ಪೊಲೀಸರು ಬರುವುದೇ ಬೇಡ, ನಾನೇ ಶರಣಾಗುವುದಾಗಿ ಹೇಳಿದ್ದಾರೆ.

​ ಗಿರೀಶ್ ಮಟ್ಟಣನವರ್​ ಕೋರ್ಟ್ಮ ತ್ತು ಪೊಲೀಸ್ ಸ್ಟೇಷನ್ ಅಂದರೆ ನನಗೆ ಬೀಗರ ಮನೆ ಇದ್ದ ಹಾಗೆ. ಮಾನವ ಹಕ್ಕುಗಳ ಆಯೋಗದ ಕಾರ್ಯಕರ್ತರ ಜತೆ ಬಂದಿದ್ದೇವೆ. ನಿನ್ನೆ ತಿಮರೋಡಿ ಬಂಧನಕ್ಕೆ ನೂರು ಪೊಲೀಸರು ಬಂದಿದ್ದರು.ಈ ವೇಳೆ ನಾವು ಯಾರೂ ಕೆಲಸಕ್ಕೆ ಅಡ್ಡಿಪಡಿಸಿಲ್ಲ. ಪೊಲೀಸರ ಪೆಟ್ರೋಲ್ ವೇಸ್ಟ್ ಆಗುವುದು ಬೇಡ ಎಂದು ನಾನೇ ಠಾಣೆಗೆ ಆಗಮಿಸಿರುವುದಾಗಿ ಹೇಳಿದರು.

More articles

Latest article