Friday, December 12, 2025

ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ಇರಲ್ಲ

Most read

ಬೆಂಗಳೂರು: 66/11ಕೆ.ವಿ ವಿಕ್ಟೋರಿಯಾ ಸ್ಟೇಷನ್ ನಲ್ಲಿ ತುರ್ತು ನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಶನಿವಾರ ಅಂದರೆ ಜನವರಿ 18ರಂದು ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಕಾಮಗಾರಿ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ವಿದ್ಯುತ್ ಇರುವುದಿಲ್ಲ. ಸಾರ್ವಜನಿಕರು ಸಹಕರಿಸಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು:

ಎಸ್‌ಜೆಪಿ ರಸ್ತೆ, ಒಟಿಸಿ ರಸ್ತೆ, ಎಸ್‌ಪಿ ರಸ್ತೆ, ಅವೆನ್ಯೂ ರಸ್ತೆ, ಗೌಡೌನ್ ರಸ್ತೆ, ಟ್ಯಾಕ್ಸಿ ಸ್ಟ್ಯಾಂಡ್, ವಿಕ್ಟೋರಿಯಾ ಆಸ್ಪತ್ರೆ ಕಾಂಪೌಂಡ್, ನೆಫ್ರೋರಾಲಜಿ, ಮಿಂಟೊ, ಗ್ಯಾಸ್ಟ್ರೋಎಂಟ್ರಾಲಜಿ ಆಸ್ಪತ್ರೆ ಮತ್ತು ಅಲೈಡ್ ಆಸ್ಪತ್ರೆಗಳು, ಜೆಸಿ ರಸ್ತೆ, ಜೆಸಿ ರಸ್ತೆ 1ನೇ ಕ್ರಾಸ್, ಎ.ಎಂ. ಲೇನ್, ಕಲಾಸಿಪಾಳ್ಯ ಮುಖ್ಯ ರಸ್ತೆ, ಎಂಟಿಬಿ ರಸ್ತೆ, ಕುಂಬಾರ ಗುಂಡಿ ರಸ್ತೆ, ಶಿವಾಜಿ ರಸ್ತೆ, ಸಿಟಿ ಮರ‍್ಕೆಟ್ ಕಾಂಪ್ಲೆಕ್ಸ್, ಬಿ.ವಿ.ಕೆ. ಅಯ್ಯಂಗಾರ್ ರಸ್ತೆ, ಗ್ರೇನ್ ಬಜಾರ್ ರಸ್ತೆ, ನಗರ್ತ ಪೇಟೆ, ತಿಗಳರಪೇಟೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ.

ಎನ್, ಆರ್ ರಸ್ತೆ, ಒಟಿಸಿ ರಸ್ತೆಯ ಭಾಗ, ಪಿಸಿ ಲೇನ್, ಪಿಪಿ ಲೇನ್, ಊಸ್ಮಾನ್ ಖಾನ್ ರಸ್ತೆ, ಎಸ್‌ಜೆಪಿ ಪರ‍್ಕ್, ಬಸಪ್ಪ ವೃತ್ತ, ಕೆಆರ್ ರಸ್ತೆ, ಕೋಟೆ ಬೀದಿ, ಕಲಾಸಿಪಾಳ್ಯ ಮುಖ್ಯ ರಸ್ತೆ, ಪಟ್ನೂಲ್‌ಪೇಟೆ, ಹಳೆ ಕಸಾಯಿಖಾನೆ ರಸ್ತೆ, ನಗರ್ತ ಪೇಟೆ ಮುಖ್ಯರಸ್ತೆ, ಕುಂಬಾರಪೇಟೆ ಮುಖ್ಯರಸ್ತೆ, ಅಪ್ಪುರಾಯಪ್ಪ ಲೇನ್, ಎಂಬಿಟಿ ರಸ್ತೆ, ಪಿಳ್ಳಪ್ಪ ಲೇನ್, ಸಿಆರ್ ಸ್ವಾಮಿ ಬೀದಿ, ಮೇಧರಪೇಟೆ, ಚಿಕ್ಕಪೇಟೆ, ಕೆ.ಜಿ.ರಸ್ತೆಯ ಭಾಗ, ಆರ್.ಟಿ.ರಸ್ತೆ, ಚಿಕ್ಕಪೇಟೆ ಮುಖ್ಯರಸ್ತೆ, ಒಟಿ ಪೇಟೆ, ಒಟಿಸಿ ರಸ್ತೆ, ಗುಂಡೋಪಂಥ್ ಬೀದಿ, ಮಾಮೂಲ್‌ಪೇಟೆ, ಬೆಳ್ಳಿಬಸವಣ್ಣ ದೇವಸ್ಥಾನದ ಬೀದಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಇರುವುದಿಲ್ಲ.

More articles

Latest article