ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ನ –2026 ರ ಆವೃತ್ತಿಗೆ ಆಯ್ಕೆಯಾಗಿದ್ದ ಬಾಂಗ್ಲಾ ದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೈ ಬಿಟ್ಟಿರುವುದಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ತಿಳಿಸಿದೆ. ಐಪಿಎಲ್ ಆಡಳಿತ ಮಂಡಲಿ ನಿರ್ದೇಶನದಂತೆ ರೆಹಮಾನ್ ಅವರನ್ನು ಕೈ ಬಿಟ್ಟಿರುವುದಾಗಿ ಕೆಕೆಆರ್ ಪ್ರಕಟಣೆಯಲ್ಲಿ ತಿಳಿಸಿದೆ. ಜತೆಗೆ ಬದಲಿ ಆಟಗಾರನನ್ನು ಸೇರ್ಪಡೆ ಮಾಡಿಕೊಳ್ಳಲು ಕೆಕೆಆರ್ ಗೆ ಬಿಸಿಸಿಐ ಅವಕಾಶ ಕಲ್ಪಿಸಿದೆ.
ಕಳೆದ ಡಿಸೆಂಬರ್ ನಲ್ಲಿ ನಡೆದ ಹರಾಜಿನಲ್ಲಿ ಕೆಕೆಆರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು 9.20 ಕೋಟಿ ರೂ.ಗೆ ಖರೀದಿಸಿತ್ತು. ಇವರ ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ಪ್ರಯತ್ನಿಸಿದ್ದವು. ಆದರೆ ಹಲವಾರು ಸಂಘಸಂಸ್ಥೆಗಳು, ರಾಜಕೀಯ ಮುಖಂಡರು ಮತ್ತು ಸನ್ಯಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದದ ನಂತರ ಐಪಿಎಲ್ ಈ ಕ್ರಮ ಕೈಗೊಂಡಿದೆ.
ಇತ್ತೀಚೆಗೆ ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರಾದ ಹಿಂದೂಗಳ ಹತ್ಯೆ ಮತ್ತು ಸುರಕ್ಷತೆ ಕುರಿತು ಆತಂಕಕಾರಿ ಸನ್ನಿವೇಶ ಉಂಟಾದ ಹಿನ್ನೆಲೆಯಲ್ಲಿ ಬಾಂಗ್ಲಾ ಕ್ರಿಕೆಟ್ ಆಟಗಾರನ ಖರೀದಿಗೆ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು.
ಬಿಸಿಸಿಐ ಮತ್ತು ದೇಶದ ನಾಗರೀಕರ ಭಾವನೆಗಳಿಗೆ ಸ್ಪಂದಸಿ ಬಾಂಗ್ಲಾ ಆಟಗಾರ ಆಯ್ಕೆಯನ್ನು ರದ್ದು ಮಾಡಿ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದು ಕೆಕೆಆರ್ ತಿಳಿಸಿದೆ.

