ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣ : ಆರೋಪಿಗಳ ಪೋಟೋ ಬಿಡುಗಡೆ ಮಾಡಿದ NIA

Most read

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣದ ಆರೋಪಿಗಳಾದ ಅಬ್ದುಲ್ ಮತೀನ್ ಅಹಮದ್ ತಾಹ ಹಾಗೂ ಆತನ ಸಹಚರ ಮುಸಾವಿರ್ ಹುಸ್ಸೇನ್ ಅವರ ಫೋಟೋವನ್ನು ಎನ್‌ಐಎ ಬಿಡುಗಡೆ ಮಾಡಿದೆ. ಆರೋಪಿಗಳ ಸುಳಿವು ನೀಡುವವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ.

ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಆರೋಪಿಗಳ ಫೋಟೋವನ್ನು ಹಂಚಿಕೊಂಡು, ಅಬ್ದುಲ್ ಮತೀನ್ ಅಹಮದ್ ತಾಹ ಹಾಗೂ ಆತನ ಸಹಚರ ಮುಸಾವಿರ್ ಹುಸ್ಸೇನ್ ಎಂಬ ಆರೋಪಿಗಳ ಫೋಟೋವನ್ನು ಹಂಚಿಕೊಂಡಿದ್ದು, ಈ ಆರೋಪಿಗಳ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್‌ಐಎ ಘೋಷಣೆ ಮಾಡಿದೆ.

ಇಬ್ಬರು ಶಂಕಿತರ ತಲಾ 3 ಮಾದರಿಯ ಪೋಟೋ ಬಿಡುಗಡೆ ಮಾಡಿದೆ. ಶಂಕಿತರು ಹೇಗೆ ಇರಬಹುದು ಎಂಬುದರ ಮಾಹಿತಿಯನ್ನು ಎನ್‌ಐಎ ನೀಡಿದೆ.

ಬಾಂಬ್ ಹಾಕಿದ ಆರೋಪಿ ಅಬ್ದುಲ್ ಮತೀನ್ ತಾಹನ ಸಹಚರ ಮುಸಾವೀರ್ ಹುಸ್ಸೇನ್ ಶಾಜಿಬ್ ಕೂಡ ತಲೆ ಮರೆಸಿಕೊಂಡಿದ್ದಾರೆ. ಈತನು ಕೂಡ ಹೇಗಿರಬಹುದು ಎಂಬ 3 ಮಾದರಿಯ ಫೋಟೋ ಹಂಚಿಕೊಳ್ಳಲಾಗಿದೆ.

ಮುಸಾವೀರ್ ಹುಸ್ಸೇನ್ ಶಾಜಿಬ್ ಕೂಡ ತನ್ನ ಹೆಸರನ್ನು ಬದಲಿಸಿಕೊಂಡು ದೇಶದ ವಿವಿಧ ನಗರಗಳಲ್ಲಿ ವಾಸಿಸುತ್ತಿದ್ದಾನೆ. ಈತ ಮಹಮ್ಮದ್ ಜುನೇದ್ ಸೈಯದ್ ಎಂಬ ಹೆಸರಿನಲ್ಲಿ ನಕಲಿ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದಾನೆ. ಶಂಕಿತರಿಬ್ಬರು ತಮ್ಮ ಐಡೆಂಟಿಟಿ ಮರೆಮಾಚಲು ವಿಗ್ ಹಾಗೂ ನಕಲಿ ಗಡ್ಡ ಮೀಸೆ ಗಳನ್ನ ಬಳಸುತ್ತಿದ್ದಾರೆ ಎಂದು ಎನ್‌ಐಎ ಮಾಹಿತಿ ನೀಡಿದೆ.

More articles

Latest article