ಸದ್ಯಕ್ಕೆ ಸೋಷಿಯಲ್ ಮೀಡಿಯಾ ಪೀಕ್ ನಲ್ಲಿದೆ. ಎಲ್ಲರ ಕೈನಲ್ಲೂ ಸ್ಮಾರ್ಟ್ ಫೋನ್, ಕುಂತಲ್ಲಿ ನಿಂತಲ್ಲಿ ಜನ ಸೋಷಿಯಲ್ ಮೀಡಿಯಾದಲ್ಲಿಯೇ ಮುಳುಗಿರುತ್ತಾರೆ. ಅಂತಹ ಪರಿಸ್ಥಿತಿ ಇದೆ. ಹೀಗಾಗಿ ಯಾವುದೇ ವಿಚಾರವನ್ನು ಹಾಕಿದರೂ ಅದು ಸತ್ಯನಾ..? ಸುಳ್ಳಾ ಎಂದು ತಿಳಿದುಕೊಳ್ಳುವಷ್ಟರಲ್ಲಿ ಬಿರುಗಾಳಿಯಂತೆ ಹಬ್ಬಿ ಬಿಡುತ್ತದೆ. ಅದೇ ಥರ ಆಗಿದ್ದೇ, ನಟಿ ನಮಿತಾ ದಾಂಪತ್ಯ ಜೀವನದ ಬಿರುಕಿನ ಸುದ್ದಿ.
ಅದ್ಯಾಕೋ ಏನೋ ಇದ್ದಕ್ಕಿದ್ದ ಹಾಗೇ ನಟಿ ನಮಿತಾ ದಾಂಪತ್ಯ ಜೀವನದಲ್ಲಿ ಬಿರುಕು ಅಂತ ಕೆಲವೊಂದು ಸುದ್ದಿಗಳು ಹರಿದಾಡಿದ್ದೇ ತಡ, ನೋಡ ನೋಡುತ್ತಲೇ ಎಲ್ಲರೂ ಅದೇ ಸತ್ಯ ಎನ್ನುವ ಮಟ್ಟಿಗೆ ಹಬ್ಬಿತ್ತು. ಇದು ನಟಿ ನಮಿತಾ ಕಿವುಗೂ ಬಿದ್ದಿದೆ. ಸಂಬಂಧಿಕರಿಗೆಲ್ಲಾ ಶಾಕ್ ಆಗಿದೆ. ಎಲ್ಲರೂ ಕರೆ ಮಾಡಿ ಕೇಳುವಂತೆ ಆಗಿದೆ. ಇದಕ್ಕೆ ಕೋಪಗೊಂಡ ನೀಲಕಂಠನ ನಟಿ ಅದೇ ಸೋಷಿಯಲ್ ಮೀಡಿಯಾ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
ಮೊನ್ನೆ ಮೊನ್ನೆ ನನ್ನ ಪತಿಯ ಜೊತೆಗಿರುವ ಫೋಟೋ ಶೇರ್ ಮಾಡಿದ್ದೀನಿ. ಮರು ದಿನವೇ ಡಿವೋರ್ಸ್ ಎನ್ನುವ ಸುದ್ದಿ ಹಾಕುತ್ತಿದ್ದಾರೆ ಆನ್ಲೈನ್ನಲ್ಲಿ. ಯಾವುದೇ ಆಧಾರವಿಲ್ಲದೆ ನಾವು ದೂರಾಗುತ್ತೇವೆ ಅಂತ ಹೇಗೆ ಪ್ರಚಾರ ಮಾಡುತ್ತೀರಾ?’ಎಂದು ನಮಿತಾ ಮಾತನಾಡಿರುವ ನಮಿತಾ, ನಾನೊಬ್ಬ ನಟಿಯಾಗಿ ಇಂತಹ ಹಲವಾರು ವದಂತಿಗಳನ್ನು ಕೇಳಿದ್ದೇನೆ. ಈ ಡಿವೋರ್ಸ್ ವಿಚಾರದ ಬಗ್ಗೆ ನಾನು ಮತ್ತು ನನ್ನ ಪತಿ ಹೆಚ್ಚಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಬೇರೆ ಕೆಲಸಗಳಲ್ಲಿ ತುಂಬಾ ಬ್ಯುಸಿಯಾಗಿ ಇರುತ್ತೀನಿ. ಕೆಲವೊಮ್ಮೆ ಯಾರಿಗೂ ಯಾವುದಕ್ಕೂ ಪ್ರತಿಕ್ರಿಯೆ ನೀಡಲು ಆಗುವುದಿಲ್ಲ. ಆದರೆ ಈ ಸುದ್ದಿ ನೋಡಿ ಜನರು ಕರೆ ಮಾಡುವುದನ್ನು ಕೇಳಿ ನನ್ನ ಪತಿ ಮತ್ತು ನಾನು ಬಿದ್ದು ಬಿದ್ದು ನಗ್ತೀವಿ ಅಷ್ಟೇ ಎಂದು ಡಿವೋರ್ಸ್ ವಿಚಾರಕ್ಕೆ ತೆರೆ ಎಳೆದಿದ್ದಾರೆ.