“ನಮ್ಮ ಮೋದಿ” ಪುಟದಲ್ಲಿ ಮುಖ್ಯಮಂತ್ರಿ ನರ್ತಿಸುವ ರೀತಿಯಲ್ಲಿ ವಿಡಿಯೋ ಸೃಷ್ಟಿ; ಕಾನೂನು ಕ್ರಮಕ್ಕೆ ಸಿಎಂ ಉಪ ಕಾರ್ಯದರ್ಶಿ ವಿಧಾನಸೌಧ ಪೊಲೀಸ್‌ ಠಾಣೆಗೆ ದೂರು; ಎಫ್‌ ಐಆರ್‌ ದಾಖಲು

Most read

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ “ನಮ್ಮ ಮೋದಿ” ಎಂಬ ಪುಟದಲ್ಲಿ ಎಐ ತಂತ್ರಜ್ಞಾನ ಬಳಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಕಿಸ್ತಾನ ಬಾವುಟ ಹಿಡಿದು ನೃತ್ಯ ಮಾಡುತ್ತಿರುವ ರೀತಿಯಲ್ಲಿ ನಕಲಿ ವಿಡಿಯೋ ಸೃಷ್ಟಿಸಿ ಪೋಸ್ಟ್‌ ಮಾಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ ಅರುಣ್‌ ಫುರ್ಟಾಡೊ ಅವರು ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಈ ದೂರು ಆಧರಿಸಿ ಅಪರಿಚಿತರ ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಎಫ್‌ ಐರ್‌ ದಾಖಲಾಗಿದೆ.

ಇನ್ ಸ್ಟ್ರಾಗ್ರಾಮ್ ಸಾಮಾಜಿಕ ಮಾಧ್ಯಮದಲ್ಲಿ “ನಮ್ಮ ಮೋದಿ” ಎಂಬ ಪುಟದಲ್ಲಿ, ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಉಪಯೋಗಿಸಿ ರಾಜ್ಯದ ಮಾನ್ಯ ಮುಖ್ಯಮಂತ್ರಿಯವರು ಪಾಕಿಸ್ತಾನ ಬಾವುಟ ಹಿಡಿದು ನೃತ್ಯ ಮಾಡುತ್ತಿರುವ ರೀತಿಯಲ್ಲಿ, ನಕಲಿ ವಿಡಿಯೋ ಸೃಷ್ಟಿಸಿ, ಪೋಸ್ಟ್ ಮಾಡಿ ವೈರಲ್ ಮಾಡಲಾಗಿರುತ್ತದೆ. ರಾಜ್ಯದ ಮುಖ್ಯಮಂತ್ರಿಯವರ ಕೈಯಲಿ ಶತ್ರು ರಾಷ್ಟ್ರದ ಧ್ವಜವನ್ನು ನೀಡಿ ನೃತ್ಯ ಮಾಡುವಂತೆ ನಕಲಿ ವಿಡಿಯೋವನ್ನು ಸೃಷ್ಟಿಸಿ ಇನ್ ಸ್ಟ್ರಾಗ್ರಾಮ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವವರನ್ನು ಪತ್ತೆಮಾಡಿ ಅವರ  ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ವಿವರಿಸಿದ್ದಾರೆ.

ಬಲ್ಲ ಮೂಲಗಳ ಪ್ರಕಾರ ಬಿಜೆಪಿಯ ಐಟಿ ಸೆಲ್ ಸೃಷ್ಟಿಸಿರಬಹುದು ಎಂದು ಶಂಕಿಸಲಾಗಿದೆ.  ಒಂದು ರಾಜ್ಯದ ಮುಖ್ಯಮಂತ್ರಿಯ ಕೈಯಲ್ಲಿ ವೈರಿ ದೇಶದ ಬಾವುಟ ಕೊಟ್ಟು ನರ್ತಿಸುತ್ತಿರುವ ರೀತಿಯಲ್ಲಿ ಎಐ ತಂತ್ರಜ್ಞಾನ  ಬಳಸಿ ವಿಡಿಯೋ ಮಾಡುವುದು ಅದರಲ್ಲೂ ಕಾಶ್ಮೀರದಲ್ಲಿ ಭಯೋತ್ಪಾದನೆಯ ಕೃತ್ಯ ನಡೆದಿರುವ ಸಂದರ್ಭದಲ್ಲಿ ಇಂತಹ ವಿಕೃತಿ ತೋರಿರುವುದು ತೀವ್ರ ಖಂಡನೆಗೆ ಕಾರಣವಾಗಿದೆ. ಸುಮಾರು 2 ಲಕ್ಷ ಫಾಲೋಯರ್ಸ್‌ ಇರುವ ಈ “ನಮ್ಮ ಮೋದಿ” ಪುಟದಲ್ಲಿ ಹಾಕಿರುವ ಈ ವಿಡಿಯೋವನ್ನು 2000 ಜನರು ಹಂಚಿಕೊಂಡಿದ್ದು 5600 ಜನರು ಲೈಕ್ ಮಾಡಿದ್ದಾರೆ. ಇದಕ್ಕೆ ಬಂದಿರುವ 387 ಕಮೆಂಟುಗಳಲ್ಲಿ ಹೆಚ್ಚಿನವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ.
ಕಾಶ್ಮೀರದಲ್ಲಿ ಭಯೋತ್ಪಾದಕ ಘಟನೆ ನಡೆದ ಕೂಡಲೇ ಅತ್ಯಂತ ತ್ವರಿತಗತಿಯಲ್ಲಿ ಸ್ಪಂದಿಸಿ, ಅಲ್ಲಿ ಸಿಲುಕಿಕೊಂಡಿರುವ ಪ್ರವಾಸಿಗರ ರಕ್ಷಣೆಗೆ ಕೂಡಲೇ ಒಬ್ಬ ಸಚಿವರನ್ನೂ ಸೇರಿದಂತೆ ಹಲವು ಅಧಿಕಾರಿಗಳನ್ನು ಕಳಿಸಿ ಎಲ್ಲಾ ಪ್ರವಾಸಿಗರು ಸುರಕ್ಷಿತವಾಗಿ ಬೆಂಗಳೂರು ತಲುಪುವಂತೆ ಮಾಡಿದ್ದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಇದೇ ಸಂದರ್ಭದಲ್ಲಿ ಇಂತಹ ಒಂದು ಮಾರಣಹೋಮಕ್ಕೆ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯದ ಹೊಣೆಯನ್ನು ಮೋದಿ ಸರ್ಕಾರ ಹೊರುವಂತೆ ಸಿದ್ದರಾಮಯ್ಯ ಆಗ್ರಹಪಡಿಸಿದ್ದರು. ಇದನ್ನು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದೆ. ಹೀಗಿರುವಾಗ ಸಿದ್ದರಾಮಯ್ಯ ಅವರನ್ನು ಇಷ್ಟು ವಿಕೃತ ರೀತಿಯಲ್ಲಿ ಬಿಂಬಿಸುವ ಉದ್ದೇಶವೇನು?

ರಾಜ್ಯದ ಮುಖ್ಯಮಂತ್ರಿಗಳನ್ನೇ ಗುರಿಪಡಿಸಿ ಹೀಗೆ ವಿಕೃತ ಫೇಕ್ ವಿಡಿಯೋಗಳನ್ನು ನಡೆಸುತ್ತಿರುವವರ ಮೇಲೆ ಯಾವುದೇ ಕಾನೂನು ಕ್ರಮ ಯಾಕಿಲ್ಲ? ಸರ್ಕಾರದ ಪೊಲೀಸ್ ಇಲಾಖೆ, ಸೈಬರ್ ಅಪರಾಧ ಇಲಾಖೆಗಳು ನಿದ್ದೆ ಮಾಡುತ್ತಿವೆಯೇ ಎಂಬ ಪ್ರಶ್ನೆಯನ್ನೂ ಸಾರ್ವಜನಿಕರು ಕೇಳುತ್ತಿದ್ದಾರೆ.

ಬೆಂಗಳೂರು: ವಿಶ್ವದಲ್ಲೇ ಬಿಸಿಸಿಐ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ. ಬಿಸಿಸಿಐಗೆ ಅತಿದೊಡ್ಡ ಲಾಭದ ಕುದುರೆ ಐಪಿಎಲ್. ವರ್ಷಕ್ಕೆ ಸಾವಿರಾರು ಕೋಟಿ ರೂ ಆದಾಯ ಕೊಡುತ್ತಿದೆ ಈ ಟೂರ್ನಿ. ಸರ್ಕಾರ ಬಿಸಿಸಿಐಗಾಗಲೀ, ಐಪಿಎಲ್​​ಗಾಗಲೀ ಆದಾಯ ತೆರಿಗೆ ವಿಧಿಸುವುದಿಲ್ಲ. ಐಟಿ ಸ್ಲ್ಯಾಬ್ ದರದ ಪ್ರಕಾರ ಟ್ಯಾಕ್ಸ್ ಹಾಕಿದರೆ ಸರ್ಕಾರಕ್ಕೂ ಭರ್ಜರಿ ಕಲೆಕ್ಷನ್ ಸಿಗುತ್ತದೆ. ಬೆಂಗಳೂರಿನ ಐಐಎಸ್​​ಸಿ ಪ್ರೊಫೆಸರ್​​ವೊಬ್ಬರು ಇದೇ ವಿಚಾರ ಉಲ್ಲೇಖಿಸಿ, ಐಪಿಎಲ್​​​ಗೆ ಟ್ಯಾಕ್ಸ್ ಹಾಕಿ ಎಷ್ಟೆಲ್ಲಾ ಹೊಸ ಐಐಟಿ ಕಟ್ಟಬಹುದು ಎಂದು ಹೇಳಿದ್ದಾರೆ.

ಪ್ರೊಫೆಸರ್ ಮಯಂಕ್ ಶ್ರೀವಾಸ್ತವ ಅವರು ಲಿಂಕ್ಡ್ ಇನ್​​​ನಲ್ಲಿ ಈ ಬಗ್ಗೆ ಒಂದು ಪೋಸ್ಟ್ ಹಾಕಿದ್ದಾರೆ. ಐಪಿಎಲ್ 2023ರಲ್ಲಿ ಬಿಸಿಸಿಐ 11,770 ಕೋಟಿ ರೂ ಆದಾಯ ಗಳಿಸಿತು. 2024 ಮತ್ತು 2025ರಲ್ಲಿ 12,000-13,500 ಕೋಟಿ ರೂ ಆದಾಯ ಪಡೆಯುವ ಸಾಧ್ಯತೆ ಇದೆ. ಈ ಆದಾಯಕ್ಕೆ ಶೇ. 40 ತೆರಿಗೆ ವಿಧಿಸಿದರೆ ಮೂರು ವರ್ಷದಲ್ಲಿ ಸರ್ಕಾರಕ್ಕೆ 15,000 ಕೋಟಿ ರೂ ಆದಾಯ ಬರುತ್ತದೆ ಎಂದು ಮಯಂಕ್ ಶ್ರೀವಾಸ್ತವ ತಮ್ಮ ಪೋಸ್ಟ್​​​ನಲ್ಲಿ ಬರೆದಿದ್ದಾರೆ.

ಇಷ್ಟು ಹಣವು 10 ಹೊಸ ಐಐಟಿಗಳ ಸ್ಥಾಪನೆಗೆ ಉಪಯೋಗಿಸಬಹುದು. ಅಥವಾ ಒಂದು ನ್ಯಾಷನಲ್ ಡೀಪ್-ಟೆಕ್ ಇನ್ನೋವೇಶನ್ ಕಾರ್ಪಸ್ ರಚನೆಗೆ ಬಳಸಬಹುದು…’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತಕ್ಕೆ ಹಣದ ಕೊರತೆ ಇಲ್ಲ, ಆದ್ಯತೆಯ ಸಮಸ್ಯೆ ಇದೆ…

ಪ್ರೊಫೆಸರ್ ಮಯಂಕ್ ಶ್ರೀವಾಸ್ತವ ಅವರು ಭಾರತದ ವ್ಯವಸ್ಥೆಯಲ್ಲಿನ ದೌರ್ಬಲ್ಯಕ್ಕೆ ಕನ್ನಡಿ ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಅಮೆರಿಕ, ಚೀನಾ, ಜರ್ಮನಿಯಂಥ ದೇಶಗಳು ವಿಜ್ಞಾನಕ್ಕೆ ಮೊದಲು ಫಂಡಿಂಗ್ ಮಾಡಿ ಸಂಪತ್ತು ಸೃಷ್ಟಿಸುತ್ತಿದ್ದಾರೆ. ಆದರೆ, ಭಾರತದಲ್ಲಿ ವಿಜ್ಞಾನಕ್ಕೆ ತಳಹದಿ ನಿರ್ಮಿಸದೆಯೇ ಸಂಪತ್ತು ಅಪೇಕ್ಷಿಸಲಾಗುತ್ತಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

‘ನಾವು ಐಪಿಎಲ್ ಸಂಭ್ರಮಿಸುತ್ತೇವೆ, ಸೆಮಿಕಂಡಕ್ಟರ್ ಆಮದು ಮಾಡುತ್ತೇವೆ. ನಾವು ಬಾಲಿವುಡ್ ನೋಡಿ ರಂಜಿಸುತ್ತೇವೆ, ಆದರೆ, ಆರೋಗ್ಯದಲ್ಲಿ ನಾವೀನ್ಯತೆ ಕೈಬಿಡುತ್ತೇವೆ. ನಾವು ತ್ವರಿತ ಐಪಿಒ ಸಂಭ್ರಮಿಸುತ್ತೇವೆ, ಆದರೆ ಆರ್ ಅಂಡ್ ಡಿಗೆ ಫಂಡಿಂಗ್ ಮರೆಯುತ್ತೇವೆ’ ಎಂದು ಐಐಎಸ್​​ಸಿ ಪ್ರೊಫೆಸರ್ ವಿಷಾದಿಸಿದ್ದಾರೆ.

ಭಾರತದಲ್ಲಿ ಸಂಶೋಧನೆಗೆ ತೆರಿಗೆ ಹಾಕಲಾಗುತ್ತದೆ. ಮನರಂಜನೆಗೆ ತೆರಿಗೆ ವಿನಾಯಿತಿ ಸಿಗುತ್ತದೆ ಎಂದೂ ಅವರು ಕುಟುಕಿದ್ದಾರೆ.

ಭಾರತಕ್ಕೆ ಹಣದ ಕೊರತೆ ಇಲ್ಲ. ಭಾರತೀಯರಿಗೆ ಹಣದ ಕೊರತೆ ಇಲ್ಲ. ಆದರೆ, ಭವಿಷ್ಯಕ್ಕೆ ಹೂಡಿಕೆ ಮಾಡುವ ದೃಷ್ಟಿಯ ಕೊರತೆ ಇದೆ. ಸುಲಭ ಲಾಭಕ್ಕೆ ಯತ್ನಿಸುವ ಬ್ಯುಸಿನೆಸ್​​ಮ್ಯಾನ್​​​ಗಳು ಗೆಲ್ಲುತ್ತಾರೆ. ಸಂಯಮದಿಂದ ಇಕೋಸಿಸ್ಟಂ ನಿರ್ಮಿಸಲು ಮುಂದಾಗುವ ಆಂಟ್ರಪ್ರನ್ಯೂರ್​​​ಗಳು ಅಪರೂಪವಾಗಿದ್ದಾರೆ ಎಂದು ಪ್ರೊಫೆಸರ್ ಮಯಂಕ್ ಶ್ರೀವಾಸ್ತವ ಮರುಗಿದ್ದಾರೆ.

ಕಾಂಗ್ರೆಸ್‌ ಗೆ ಬಿಸಿತುಪ್ಪವಾದ ಜಾತಿಗಣತಿ ವರದಿ; ರಾಹುಲ್‌ ಗಾಂಧಿ ಗೆ ಪತ್ರ ಚಳವಳಿ ಆರಂಭಿಸಿದ ಅಹಿಂದ ವರ್ಗ; ಪಕ್ಷದಿಂದ ದೂರ ಸರಿಯುವ ಎಚ್ಚರಿಕೆ ನೀಡಿದ ಅಹಿಂದ

ಎಚ್‌.ಮಾರುತಿ

ಜಾತಿ ಗಣತಿ ವಿವಾದ ಕಾಂಗ್ರೆಸ್‌ ಪಕ್ಷವನ್ನು ಸುಲಭಕ್ಕೆ ಬಿಡುವಂತೆ ಕಾಣುತ್ತಿಲ್ಲ. ಒಂದು ಕಡೆ ದಲಿತ ವರ್ಗಗಳ ಸಚಿವರು ಮತ್ತು ಶಾಸಕರು ವರದಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸುತ್ತಿದ್ದರೆ ಮತ್ತೊಂದು ಕಡೆ ಎರಡು ಪ್ರಬಲ ವರ್ಗಗಳಾದ ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಸಚಿವರು ಮತ್ತು ಜನಪ್ರತಿನಿಧಿಗಳು ಜಾರಿಗೊಳಿಸಬಾರದು ಎಂದು ಅಡ್ಡಗಾಲು ಹಾಕುತ್ತಿದ್ದಾರೆ. ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಅರ್ಥಾತ್‌ ಜಾತಿ ಸಮೀಕ್ಷೆ ನಡೆಸಲು ಆಯೋಗವನ್ನು ನೇಮಕ ಮಾಡಿದ್ದು ಮತ್ತು ವರದಿಯನ್ನುಸ್ವೀಕರಿಸಿದ್ದು ಎರಡೂ ಬಾರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಎನ್ನುವುದು ಗಮನಾರ್ಹ.

ಇದೀಗ ವರದಿಯನ್ನು ಜಾರಿಗೊಳಿಸಲೇಕು ಎಂದು ಅಹಿಂದ ಗುಂಪುಗಳು ಪಕ್ಷದ ವರಿಷ್ಠ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಗೆ ಪತ್ರ ಚಳವಳಿ ಆರಂಭಿಸಿವೆ. ಇ ಮೇಲ್‌, ಪೋಸ್ಟ್‌ ಕಾರ್ಡ್‌ ಬರೆಯಲು ನಿರ್ಧರಿಸಿದ್ದಾರೆ. ಈ ಮೂಲಕ ಮಧ್ಯೆ ಪ್ರವೇಶಿಸಿ ವರದಿ ಜಾರಿ ಹಾದಿ ಸುಗಮಗೊಳಿಸುವಂತೆ ಮನವಿ ಮಾಡುತ್ತಿದ್ದಾರೆ. ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಂ ಅವರು ಪತ್ರ ಬರದಿರುವ ಪ್ರಮುಖರಲ್ಲಿ ಒಬ್ಬರಾಗಿದ್ದಾರೆ.

ವರದಿ ಜಾರಿ ಮಾತ್ರವಲ್ಲದೆ ಸಮೀಕ್ಷೆಯ ಮುಖ್ಯ ಉದ್ದೇಶವೇ ಎಲ್ಲ ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯನ್ನು ಅರ್ಥಮಾಡಿಕೊಳ್ಳುವುದೇ ಆಗಿದೆ. ಸುಮಾರು 180 ಕೋಟಿ ರೂ ವೆಚ್ಚ ಮಾಡಿ ಹಿಂದುಳಿದ ವರ್ಗಗಳ ಆಯೋಗದ ಮೂಲಕ ವೈಜ್ಞಾನಿಕವಾಗಿಯೇ ಸಮೀಕ್ಷೆ ನಡೆಸಲಾಗಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಮಾಜಿಕ ಬದ್ಧತೆಯನ್ನೂ ತೋರಿಸುತ್ತದೆ. ಈಗಾಗಲೇ ಸಚಿವ ಸಂಪುಟ ಸಭೆಯಲ್ಲೂ ಚರ್ಚೆ ಆಗಿದೆ ಎಂದು ಪತ್ರದಲ್ಲಿ ಮನವರಿಕೆ ಮಾಡಿಕೊಟ್ಟಿದ್ದಾರೆ.

ಪಕ್ಷದ ಶಾಸಕರು ಮತ್ತು ಹಿರಿಯ ವೀರಶೈವ ಮುಖಂಡರೂ ಆದ ಶಾಮನೂರು ಶಿವಶಂಕರಪ್ಪ ಅವರಂತಹವರು ವರದಿಯನ್ನು ವಿರೋಧಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಅನೇಕ ಶಾಸಕರು ಮತ್ತು ಮುಖಂಡರು ಅಹಿಂದ ವರ್ಗ ಕುರಿತೂ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಡೀ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಬೇಕು ಎಂದು ಆಗ್ರಹಪಡಿಸುತ್ತಿರುವುದು ಅಹಿಂದ ವರ್ಗಕ್ಕೆ ನೋವನ್ನುಂಟು ಮಾಡಿದೆ ಎಂದು ತಿಳಿಸಿಕೊಟ್ಟಿದ್ದಾರೆ.

ಜಾತಿಗಣತಿ ವರದಿ ಕೇವಲ ಜನಸಂಖ್ಯೆಯನ್ನು ಮಾತ್ರ ಆಧರಿಸಿಲ್ಲ. ಅಹಿಂದ ವರ್ಗ (ಅಲ್ಪಸಂಖ್ಯಾತ, ದಲಿತ ಮತ್ತು ಹಿಂದುಳಿದ ವರ್ಗಗಳ ಒಕ್ಕೂಟ)ದ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಕುರಿತೂ ಅಧ್ಯಯನ ನಡೆಸಿದೆ. ಮೀಸಲಾತಿ ವರ್ಗೀಕರಣ ಮತ್ತು ಅನೇಕ ವರ್ಗಗಳ ಮೀಸಲಾತಿ ಹೆಚ್ಚಳಕ್ಕೂ ಶಿಫಾರಸ್ಸು ಮಾಡಿದೆ. ಇದರಿಂದ ಅಹಿಂದ ವರ್ಗಗಳ ಸರ್ವತೋಮುಖ ಅಭಿವೃದ್ಧಿಗೆ ನಾಂದಿ ಹಾಡಲಿದೆ. ಆದರೆ ಕಾಂಗ್ರೆಸ್‌ ಶಾಸಕರೇ ವಿರೋಧಿಸುತ್ತಿರುವುದು ವಿಷಾದನೀಯ ಎಂದು ಪತ್ರದಲ್ಲಿ ವಿವರಣೆ ನೀಡಿದ್ದಾರೆ.

ಅಹಿಂದ ವರ್ಗಗಳು ಕಾಂಗ್ರೆಸ್‌ ಪಕ್ಷದ ಬೆನ್ನುಮೂಳೆ ಇದ್ದ ಹಾಗೆ. ಜಾತಿಗಣತಿ ವರದಿಯನ್ನು ಜಾರಿಗೊಳಿಸುವುದಾಗಿ ಪಕ್ಷದ ಪ್ರಣಾಳಿಕೆಯಲ್ಲೂ ಭರವಸೆ ನೀಡಲಾಗಿತ್ತು. ಅಷ್ಟೇ ಅಲ್ಲದೆ ಇಡೀ ದೇಶಾದ್ಯಂತ ಜಾತಿಗಣತಿ ನಡೆಸುವುದಾಗಿಯೂ ಭರವಸೆ ನೀಡಿತ್ತು. ಅದರಂತೆ ಕಾಂಗ್ರೆಸ್‌ ಸರ್ಕಾರ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಲಿದೆ ಎಂದು ಅಹಿಂದ ವರ್ಗ ನಿರೀಕ್ಷಿಸುತ್ತದೆ ಎಂದೂ ಅಹಿಂದ ನಾಯಕರು ತಿಳಿಸಿದ್ದಾರೆ.

ಇಂತಹ ಕಾಂಗ್ರೆಸ್‌ ಮುಖಂಡರಿಂದ ಅಹಿಂದ ವರ್ಗಕ್ಕೆ ಅನ್ಯಾಯವಾಗುತ್ತಿದೆ. ಒಂದು ವೇಳೆ ವರದಿಯನ್ನು ಜಾರಿಗೊಳಿಸುವುದು ವಿಳಂಬವಾದರೆ ಅಹಿಂದ ವರ್ಗಗಳ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾರೆ.  ಆದ್ದರಿಂದ ಜಾತಿಗಣತಿ ವರದಿಯನ್ನು ವಿರೋಧಿಸದಂತೆ ಪಕ್ಷ ದ ಮುಖಂಡರಿಗೆ ಎಚ್ಚರಿಕೆ ನೀಡಬೇಕು. ಸುಗಮವಾಗಿ ಜಾರಿಗಳೊಳಿಸಲು ಅನುವು ಮಾಡಿಕೊಡಬೇಕು ಎಂದೂ ಆಗ್ರಹಪಡಿಸಿದ್ದಾರೆ.

More articles

Latest article