ಮುಂಬೈ: ರನ್‌ ವೇಯಿಂದ ಜಾರಿದ ಏರ್ ಇಂಡಿಯಾ ವಿಮಾನ; ತಪ್ಪಿದ ಭಾರಿ ಅನಾಹುತ

Most read

ಮುಂಬೈ: ಮುಂಬೈ ನಗರದ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನವೊಂದು ಇಳಿಯುತ್ತಿದ್ದ ಸಂದರ್ಭದಲ್ಲಿ ರನ್‌ ವೇಯಲ್ಲಿ ಜಾರಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಎಂದು ಏರ್ ಇಂಡಿಯಾ  ‘ಎಕ್ಸ್‌’ನಲ್ಲಿ ತಿಳಸಿದೆ.

ಕೊಚ್ಚಿಯಿಂದ ಆಗಮಿಸಿದ್ದ ಏರ್ ಇಂಡಿಯಾ ವಿಮಾನವು (ಬೋಯಿಂಗ್‌- AI2744) ಇಂದು ಬೆಳಗ್ಗೆ 9.27ರ ಸುಮಾರಿಗೆ ಇಳಿಯಲು ರನ್‌ ವೇಯಲ್ಲಿ ಸಂಚರಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಇದರಿಂದ ರನ್‌ ವೇಗೆ ಸಣ್ಣ ಪ್ರಮಾಣದ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಭಾರಿ ಮಳೆಯ ಪರಿಣಾಮವಾಗಿ ಗೋಚರತೆ ಕಡಿಮೆ ಇದ್ದ ಕಾರಣ ವಿಮಾನವು ರನ್‌ ವೇನಿಂದ ಜಾರಿದೆ. ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿ ಸುರಕ್ಷಿತವಾಗಿದ್ದು, ವಿಮಾನವನ್ನು ತಪಾಸಣೆ ನಡೆಸಲಾಗುತ್ತಿದೆ ಎಂದು ಏರ್ ಇಂಡಿಯಾ ತಿಳಸಿದೆ.

ಜೂನ್‌ 12ರಂದು ಅಹಮದಾಬಾದ್‌ ನ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ತೆರಳಲು ಏರ್‌ ಇಂಡಿಯಾ ವಿಮಾನ (ಬೋಯಿಂಗ್‌- 787 ಡ್ರೀಮ್‌ ಲೈನರ್) ಟೇಕ್‌–ಆಫ್‌ ಆದ ಕೆಲವೇ ಕ್ಷಣಗಳಲ್ಲಿ ಮೇಘಾನಿನಗರದ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ ಕಟ್ಟಡಕ್ಕೆ ಡಿಕ್ಕಿ ಹೊಡೆದಿತ್ತು. ವಿಮಾನದಲ್ಲಿದ್ದ 241 ಪ್ರಯಾಣಿಕರು, ಸಿಬ್ಬಂದಿ ಹಾಗೂ ಘಟನಾ ಸ್ಥಳದಲ್ಲಿದ್ದ 19 ಮಂದಿ ಸೇರಿ 271 ಮಂದಿ ಮೃತಪಟ್ಟಿದ್ದರು.

More articles

Latest article